ವಿಷಯಕ್ಕೆ ಹೋಗು

ಪುಟ:ನೋವು.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ನೋವು
೫೧

ಯಿಸುತ್ತ.

.ಅಂತೂ ರಂಗಣ್ಣ ಭಾಗ್ಯನಗರವನ್ನು ತಲಪಿದ. ಊರ ಹೊರಗಿನಿಂದ ಸಿಟಿ ಬಸ್ಸಿನಲ್ಲಿ ಕುಳಿತು ನೇರ ಆಸ್ಪತ್ರೆಗೆ ಹೋದ. ಅವನ ಪ್ರಾಧ್ಯಾಪಕರ ಭೇಟಿ ಸಾಧ್ಯವಾಯಿತು. ಶಟಗೋಪನ್ ಸಿಕ್ಕಿದ.ಬಂದ ಕೆಲಸ ವಾಯಿತು.

ಭೇದಿಗೆ ಜ್ವರಕ್ಕೆ, ತಲೆನೋವಿಗೆ, ಮಲಬದ್ಧತೆಗೆ, ಎಂದೆಲ್ಲ ಕೆಲ ಸಾಮಾನ್ಯ ಔಷಧಿಗಳನ್ನು ಕೊಂಡ.

ಔಷಧದಂಗಡಿಯಲ್ಲೇ ಡಾಕ್ಟರರ ಬ್ಯಾಗೂ ದೊರೆಯಿತು. ಮಾರಾಟದವನು ಹೌಸ್ ಸರ್ಜನ್ ಶಟಗೋಪನ್ಗೋಸ್ಕರವೇ ಆ ಬ್ಯಾಗು ಎಂದುಕೊಂಡ.

ಶಟಗೋಪನ್ ಹೇಳಿದುದೂ ಹಾಗೆಯೇ:

ನನ್ನ ಹೆಸರಲ್ಲಿ ಕ್ರೆಡಿಟ್ ಬಿಲ್ ಹಾಕ್ಬಿಡಿ."

ರಂಗಣ್ಣನೊಡನೆ ಪಿಸುದನಿಯಲ್ಲಿ ಶಟಗೋಪನ್ ಅಂದ

ಸಿರಿಂಜ್ ಬೇಡ್ವೆ ?"

ಇಂಜೆಕ್ಷನ್ ಕೊಡಲು ಕಲಿತಿರಲಿಲ್ಲ ರಂಗಣ್ಣ,

" ಈಗ ಬೇಡ,' ಅಂದ...

ತಿಂಡಿ ಕಾಫಿ. ಎರಡು ಪಾಕೆಟ್ ಸಿಗರೇಟುಗಳ ಖರೀದಿ.

ನಾಲ್ಕೂವರೆಗೆ ಬಸ್ಸು ಸೋಮಪುರದ ಕಡೆಗೆ ಹೊರಟಿತು.

ಕಣಿವೇಹಳ್ಳಿಯ ಕಾಲುದಾರಿ ಮೋಟಾರು ರಸ್ತೆಯನ್ನು ಸಂಧಿಸುವಲ್ಲಿ ಕರಿಯ ನಿಂತಿದ್ದ.

ಬ್ಯಾಗಿನೊಡನೆ ಕೆಳಗಿಳಿದ ಯುವಕ 'ಡಾಕ್ಟರನ್ನು ಬಸ್ಸಿನಲ್ಲಿದ್ದವರೆಲ್ಲ ಕೌತುಕದಿಂದ ಗೌರವದಿ೦ದ ನೋಡುವವರೇ,

ಕರಿಯ ಬ್ಯಾಗನ್ನು ಇಸಕೊಂಡು ತನ್ನ ತಲೆಗೇರಿಸಿದ.

ಕತ್ತಲಾಗುವುದರೊಳಗೆ ಅವರು ಹಳ್ಳಿ ತಲಪಿದರು. .

ಅಂದು ರಾತ್ರೆ ಎಂಟರ ಸುಮಾರಿಗೆ ಗೋವಿಂದ ಭಾಗ್ಯನಗರದಿಂದ ಕಣಿವೇಹಳ್ಳಿಗೆ ವಾಪಾಸಾದ.

ಅವನ ಜತೆಯಲ್ಲಿ ಅಪರಿಚಿತರು ಒಬ್ಬರು ಇದ್ದರು.

ಪದ್ಮನಾಭನ ಕೊಠಡಿಯ ಬಾಗಿಲು ಮುಚ್ಚಿತು, ಹೊರಗಡೆ ನಿಂತು ದೊಡ್ಡಮ್ಮ ಕರೆದರು.

" ಪದ್ಮ,ಏ ಪದ್ಮ." -

ಉತ್ತರ ಬರಲಿಲ್ಲವೆಂದು ಅವರು ಬಾಗಿಲನ್ನು ತಳ್ಳಿದರು. ಅದು ತೆರೆದುಕೊಂಡಿತು. ಒಳಗಿನಿಂದ ಅಗಣಿ ಹಾಕಿರಲಿಲ್ಲ. ಅಲ್ಲಿ ಕತ್ತಲು. ಅದೇನೂ ದೊಡ್ಡಮ್ಮನಿಗೆ ಅಡ್ಡಿಯಾಗದು. ಆ ಮನೆಯ ಅಂಗುಲ ಅಂಗುಲವನ್ನೂ ಅವರು ಬಲ್ಲರು.