"ಒಂದು ಸರ್ತಿ ನಿನ್ನ ಹಾಸ್ಟೆಲಿಗೆ ಬರಬೇಕು."
ಬನ್ನಿ,ಎನ್ನಲಿಲ್ಲ ರಂಗಣ್ಣ:ಬರಬೇಡಿ ಎನ್ನಲಿಲ್ಲ.
ಹೊಸಳ್ಳಿ ಗೌಡರ ಮನೆಗೆ ಹೆಣ್ಣು ಕೊಟ್ಟು ಸಂಬಂಧ ಬೆಳೆಸ್ಕೋಬೇಕೂಂತಿದಾರಂತೆ ನಿಮ್ತಂದೆ." -
" ಹುಂ."
"ಅವನೂ ನಗರದಲ್ಲಿ ಓದ್ತಿದಾನಂತೆ.”
ಹೌದು. ವಕೀಲಿ ಪರೀಕ್ಷೆಗೆ."
ನಮ್ಮ ಪದ್ಮಂದೇನೋ ಬಿ. ಎ. ಆದ್ಮೇಲೆ ಅಲ್ಲಿಗೆ ನಿಂತು ಹೋಗುತ್ತೇಂತ ಕಾಣುತ್ತೆ.”
“ಹುಂ." -
"ಏನಾದರೂ ಮಾಡಿ ನಮ್ಮ ಮಾಧ್ಯಮಿಕ ಶಾಲೇನ ಹೈಸ್ಕೂಲು ಮಾಡಿಸ್ಬೇಕು ಅ೦ತ ನಮ್ತಂದೆ ಹೇಳ್ತೀದಾರೆ."
" ಒಳ್ಳೆದೇನೇ.”
"ಅಲ್ಲಿ ಪದ್ಮ ಮೇಸ್ಟ್ರಾಗ್ಬಹುದು.
" ರಂಗಣ್ಣ ಏನನ್ನೂ ಹೇಳಲಿಲ್ಲ, ದೂರದಲ್ಲಿ ವಾಹನದ ಸದ್ದು ಕೇಳಿಸಿತು. ಆತ ವಾಚ್ ನೋಡಿದ. ಅಷ್ಟು ಬೇಗನೆ ಸರಕಾರಿ ಬಸ್ಸು ಬರುವುದು ಶಕ್ಯವಿರಲಿಲ್ಲ, ಬಾಯಲ್ಲಿ ಒಸರಿ ನಿಂತಿದ್ದಎಂಜಲನ್ನು ಥುಕ್ಕೆಂದು ಪಕ್ಕಕ್ಕೆ ಉಗುಳಿದ.
ಬರುತ್ತಲಿದ್ದುದು ಲಾರಿ, ಡ್ರೈವರನ ಪಕ್ಕದಲ್ಲಿ ಮೂವರಿದ್ದರು, ಹೇರು ತುಂಬಿತು. ಹೇರಿನ ತುದಿಯಲ್ಲಿ ನಾಲ್ವರು.
ಗೋವಿಂದ ಕೈ ಅಡ್ಡ ಹಿಡಿದ. ಲಾರಿ ನಿಂತಿತು.
ಡ್ರೈವರನೆಂದ:
"ಇಬ್ರಾಗಾಕಿಲ್ಲ. ಒಬ್ರಾದ್ರೆ ಬನ್ನಿ, ಅದೂ ಇಕ್ಕಟು"
ಗೋವಿಂದ ರಂಗಣ್ಣನನ್ನು ಕೇಳಿದ:
ಬಹಳ ಅರ್ಜೆಂಟಾ ರಂಗಣ್ಣ ?”
ಹೌದು
"ಹಾಗಾದರೆ ನೀನು ಹೋಗು. ನಾನು ಹಿಂದಿನಿಂದ ಕಾರಲ್ಲೊ ಬಸ್ನಲ್ಲೋ ಬರ್ತೀನಿ. ಒಂದು ರೂಪಾಯಿ ಇವರಿಗೆ ಕೊಟ್ಬಿಡು. [ಡ್ರೈವರನತ್ತ ನೋಡಿ] ಈ ಡಾಕ್ಟ್ರನ್ನ ಕರಕೊಂಡು ಹೋಗಪ್ಪ, ಡ್ರೈವರ್."
ಲಾರಿಯ ಚಾಲಕನೆಂದ: .
ಆಕ್ಟ್ರಾಯಿ ಹತ್ರ ಇಳೀಬೇಕು, ಸಾರ್
ಇಳಿತಾರೆ, ಇಳೀತಾರೆ.”
ಲಾರಿಯ ಒಳಗಿದ್ದವರು 'ಡಾಕ್ಟರಿ'ಗಾಗಿ ಒಂದಿಷ್ಟು ಜಾಗ ಮಾಡಿಕೊಟ್ಟರು.
ಡ್ರೈವರ್ ತನಗೆ ವಂದಿಸದೇ ಹೋಗಬಹುದೆಂದು ಗೋವಿಂದನೇ ಅಂದ;
" ನಮಸ್ಕಾರ, ಡ್ರೈವರ್. ತುಂಬಾ ಥಾಂಕ್ಸ್."
" ನಮಸ್ಕಾರ ಸಾರ್," ಎಂದ ಆತ, ನ್ಯೂಟ್ರಲ್ಲಿನಲ್ಲಿದ್ದ ಗೇರನ್ನು ಮೊದಲಿಗೆ ಬದಲಾ \,