ಪ್ರತಿಯಾಗಿ ತಾನೂ ಏಕವಚನದಲ್ಲಿ ಗೋವಿಂದನೊಡನೆ ಮಾತನಾಡಬಹುದು. ಆಗ ?
ಈಗಲೇ ಆ ರೀತಿ ಮಾತಾಡಲೆ?... ಎ೦ದುಕೊಂಡ ರಂಗಣ್ಣ.. ತುಸು ಅಳುಕಿದ.
ಇವತ್ತು ಬೇಡ, ಇನ್ನೊಂದು ದಿವಸ ನೋಡೋಣ.. ಎಂದು ತೀರ್ಮಾನಿಸಿದ.
ಅಲ್ವೆ ಮತ್ತೆ ! ಎಂ.ಎಲ್. ಎ. ಹಾಗೆ ಕಾಣಿಸ್ತೀರಾ.. ಯಾರಿಗೆ ಗೊತ್ತು ?ಒಂದು ದಿವಸ ಎಂ.ಎಲ್.ಎ.ಆದರೂಆದೀರೇ.
ಹೆ ಹೆ ! ಶಾಮೇಗೌಡರ ಮನೆತನದ ಬೆಂಬಲ ನನಗಿದ್ರೆ ಆಗದೇ ಇದ್ದೇನಾ?”
ನಿಮ್ಮ ಬ್ರೀಫ್ ಕೇಸ್ ಚೆನ್ನಾಗಿದೆ."
ಪಾಸ್ಟಿಕ್ಕಿಂದು, ಐದು ರೂಪಾಯಿ ಕೊಟ್ಟೆ, ಕಾಗದ ಪತ್ರ ಇಡೋಕೆ ಬೇಕಲ್ಲ ಒಂದು."
ಬೇಕು, ಬೇಕು.' -
ರಂಗಣ್ಣನಿಗನ್ನಿಸಿತು: ಇವನಿಗೆ ಈ ಬ್ರೀಫ್ಕೇಸ್, ತನಗೆ ಡಾಕ್ಟರರ ಬಾಗು; ಇವನದೂ ಒಂದು ವೃತ್ತಿಯೇ
ಗೋವಿಂದ ಕೇಳಿದ:
ಇತ್ತೀಚೆಗೆ ಪದ್ಮನೂ ನೀನೂ ಜತೇಲಿ ಓಡಾಡೋದು ಕಮ್ಮಿಯಾದ ಹಾಗಿದೆಯಲ್ಲ? ಎಲ್ಲಿ, ಒಂದು ಸಿಗರೇಟು ಕೊಡು."
ನಾನೆಲ್ಲಿ ಸೇದ್ತೀನಿ ಸಿಗರೇಟು ?"
ಬಿಡು ರಂಗಣ್ಣ ಅದೆಲ್ಲ."
ರಂಗಣ್ಣ ಕೊಟ್ಟ ಪಾಕೆಟಿನಿಂದ ಒಂದನ್ನು ಎತ್ತಿಕೊಂಡು, ಇನ್ನೊಂದನ್ನು ರಂಗಣ್ಣನಿಗಾಗಿ ಗೋವಿಂದ ಮುಂದಕ್ಕೆ ಚಾಚಿದ. -
ನನಗೆ ಬೇಡ. ನೀವು ಸೇದಿ, ಯಾಚಿಸ್ ಕೊಡ್ಲೋ ?”
ಪಾಕೆಟನ್ನು ಮುಚ್ಚಿ ಹಿಂತಿರುಗಿಸಿ ಗೋವಿಂದನೆಂದ: *
ಮ್ಯಾಚಿಸ್ ನಮ್ಮ ಹತ್ರ ಯಾವಾಗಲೂ ಇರುತ್ತೆ, ಸಿಗರೇಟು ಸಿಕ್ಕಿದರೆ ಸಾಕು, ಹಚ್ಚ್ಕೊಂಡ್ಬಿಡ್ತೀವಿ.
ಪುಢಾರಿಗಳೂಂದ್ರೆ ಹೀಗೇನೋ ?"
ನನ್ನ ಯಾರಪ್ಪಪ ಪುಢಾರಿ ಅಂತಾರೆ? ನಾನೊಬ್ಬ ಕಾರ್ಯಕರ್ತ, ಸ್ವಯಂಸೇವಕ. ಜನತೆಗೋಸ್ಕರ ಕೈಲಾದದ್ದು ಮಾಡ್ತಿನಿ. ಎಲ್ಲಿ ನನ್ನ ಪ್ರಶ್ನೆಗೆ ಉತ್ತರ ಬರ್ಲಿಲ್ವಲ್ಲಾ?"
ಯಾವುದು? "
ಪದ್ಮನೂ ನೀನೊ ಒಟ್ಟಿಗೆ ಓಡಾಡೋದು—"
“ಓ ಅದಾ? ನನಗೆ ಪುರುಸೊತ್ತಿಲ್ಲ. ಸ್ಟಡೀಸ್ ಜಾಸ್ತಿ."
ಇನ್ನೆಷ್ಟು ವರ್ಷ ಉಳಿತಪ್ಪ ಡಿಗ್ರಿ ತಗೊಳ್ಳೋಕೆ?" "
ಮೂರು ವರ್ಷ."
ಇನ್ನೂ ಮೂರು ವರ್ಷವೆ?" *
ಅದೇನು ಬಿ. ಎ., ಬಿ.ಎಸ್.ಸಿ. ' ಥರ ಅಂದ್ಕೊಂಡ್ರೋ ?" *
ಪಾಸಾಗೋದು ಕಷ್ಟವಿಲ್ಲ, ಅಲ್ವೆ ?"
" ಬುದ್ಧಿವಂತರಿಗೆ ಕಷ್ಟವಿಲ್ಲ, ದಡ್ಡರು ಎಂಟು ಹತು ವರ್ಷ ತಗೋತಾರೆ."