ಪುಟ:ನೋವು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ನೋವು ೫೫ ಸುಭದ್ರೆಯ ಮನಸ್ಸಿನಲ್ಲಿ ಏನಿರಲಿಲ್ಲವೋ, ಪದ್ಮನಾಭ ಅವಳನ್ನು ಬಯಸಿದ್ದು ನಿಜ. ಕಾರಣವಿಷ್ಟೆ: ಕಾಲೇಜಿನ ತನ್ನ ತರಗತಿಯ ಹೆಣ್ಹೊಬ್ಬಳಿಗೆ ಅವನು ಮರುಳಾಗಿದ್ದ. ಇನ್ನೇನು ತನ್ನ ಹೃದಯವನ್ನು ಅವಳೆದುರು ತೋಡಿಕೊಳ್ಳಬೇಕು ಎನುಷ್ಟರಲ್ಲೆ ಆಕೆ ತನ್ನ ರವಕೆಯೊಳಗೆ ಅಷ್ಟು ದಿನ ಹುದುಗಿಸಿದ್ದ ಮಾಂಗಲ್ಯ ಚಿಹ್ನೆಯನ್ನು ಹೊರಕ್ಕೆ ಮೆರೆಸಿದ್ದಳು.

         ಆ ಮನೋವ್ಯಾಕುಲದೊಡನೆ ಊರಿಗೆ ಬಂದ ಪದ್ಮನಾಭ, ಸುಭದ್ರೆಯನ್ನು ಕಂಡಾಗ ಒಮ್ಮೆಲೆ ಬೆಚ್ಚಿಬಿದ್ದ. ಇವಳಿಗೂ ಅವನು ಬಯಸಿದ ಹೆಣ್ಣಿಗೂ ರೂಪದಲ್ಲಿ ಹೋಲಿಕೆ ಇದ್ದಂತೆ ಕಂಡಿತು ! ಅಷ್ಟು ದಿನ ಅದನ್ನವನ್ನು ಗಮನಿಸಿಯೇ ಇರಲಿಲ್ಲ, ಪರಿಣಾಮ : ಸುಭದ್ರೆಯ ಸಾನ್ನಿಧ್ಯಕ್ಕಾಗಿ ಪರದಾಟ. 
         ಆ ಗುಂಗಿನಲ್ಲಿ ಅವಳನ್ನು ಪದ್ಮನಾಭ ಕೇಳಿದ್ದ:
         " ನೀನು ನನ್ನ ಮದುವೆಯಾಗ್ತೀಯಾ ಸುಬ್ಬಿ?"
          " ಏ, ಅದೆಂಗಾತದೆ ?'
          "ಯಾಕೆ? ನೀನು ಯಾರ ಹೆಂಡತೀನೂ ಅಲ್ವಲ್ಲ?"
          " ಇಸ್ಸೀ !" 
         " ಅಂದರೆ?  ನಾನು ಒಪ್ಪಿಗೆ ಇಲ್ಲ ಅಂತಲಾ ? "
         "ನಿಮ್ಮನ್ನ ನಾನು ಒಪ್ಪಂಡು ಎಷ್ಟೋ ವರ್ಸ ಆಯ್ತು."
         " ಎಲಾ ಕಳ್ಳಿ ! ಇಷ್ಟು ದಿನ ಹೇಳೇ ಇರೀಲೆಲ“
          " ನಾಚ್ಕೆ"
           ಹಾಗಾದರೆ ನಡಿ. ದಿಬ್ಬದ ಹೊಂಡಕ್ಕೆ ಹೋಗೋಣ.  ನಾಚೈ ಬಿಟ್ಟು ಒಪ್ಪಿಗೆ ಅನ್ನೋದನ್ನ ತೋರಿಸ್ಕೊಡು." 
            ಹೆ  
             "ತುಟಿಗೆ ತುಟಿ..." 
          "ಥುತ್ ಥುತ್ !"
           "ಹಾಗಾದರೆ       ಬಿಟ್ಟೆ." * 
         ನೀವು ಕೆಟ್ಟೋರು.”  
           "ಯಾಕೆ ? ನಿಂತುಬಿಟ್ಟೆಯಲ್ಲ ! ಎತ್ಕೊನ್ದು ಹೋಗ್ಲೇನು ?" 
         "ನನಗೆ ಭಯ.”
       "ನಾನಿದೀನಿ ಸುಬ್ಬಿ.”
     ಅವಳೊಬ್ಬಳಿಗೇ ಅಲ್ಲ; ದಿಬ್ಬದ ಹೊಂಡದಲ್ಲಿ ಮುನಿಯನ ಶವವನ್ನೂ ಅದರ ಮೇಲೆ ಎರಗುತ್ತಿದ್ದ ಹದ್ದುಗಳನ್ನೂ ಕಂಡೊಡನೆ ಇಬ್ಬರಿಗೂ ಭಯವಾಗಿತೌ, ಹುಲಿ ಬಂತೆಂದು ಬಾಲ ಎತ್ತಿ ಓಡುವ ಬಡಪಶುಗಳಾಗಿ ಅವರು ಅಲ್ಲಿಂದ ಹಳ್ಳಿಗೆ ಓಡಿಬಂದಿದ್ದರು.
        ಅದಾದ ಮೆಲೆ

. ಆ ಹಗಲು ಪದ್ಮನಾಭ ಬಹಳ ಯೋಚಿಸಿದ. ಅವನಿಗನಿಸಿತು: ಅರೆನಿದ್ದೆಯಲ್ಲಿದ್ದವ ತಡಕಾಡುವ ಹಾಗೆ ವರ್ತಿಸಿದ್ದೆನಲ್ಲವೆ ? ಈಗ ಪೂರ್ತಿ ಎಚ್ಚರವಾಗಿದೆ. ಸುಬ್ಬಿಯನೆ ಮದುವೆಯಾಗಬೇಕೆಂಬ ಛಲ ತನಗಿಲ್ಲವಲ್ಲ! ಪ್ರೇಮಕಾಗಿ ತಾಗ ಮಾಡಬಹುದ