ಪುಟ:ನೋವು.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೫೪ ನೊವು

ನಿನ್ನ ತಾಯಿ ಇದ್ದಾಗಲೂ ನೀನು ನನಗೇ ಅಂಟಿಕೊಳ್ತಿದ್ದೆ. ನೀವೆಲ್ಲ ತಬ್ಬಲಿಗಳಾದ ಮೇಲೂ ನನ್ನ ಕೈ ಅನ್ನ ಉಂಡೇ ನೀನು ಬೆಳೆದೆ. ಸಾಕಿದ ಅಜ್ಜಿ ಮೇಲೆ ನಿನಗೆ ಪ್ರೀತಿ ಇದೆಯೇನಪ್ಪ?"

       " ಏನು ದೊಡ್ಡಮ್ಮ ಇದೆಲ್ಲ?"
       "ಪ್ರೀತಿ ಇದ್ದರೆ ನಾನೊಂದು ಕೇಳ್ವಿನಿ, ನಡಸ್ಕೊಡು."
       "............"
       " ಸುಮ್ಮನಿದೀಯಲ್ಲೆಯೊ.. ಹೂಂ ಅನ್ನೋಲ್ಟೆ?"
       " ಹೇಳು ದೊಡ್ಡಮ್ಮ." -
       " ಕಿರೇ ಮೊಮ್ಮಗನ ನಡತೆ ನೋಡಿ ಮುದುಕಿ ಕೊರಗಿ ಕೊರಗಿ ಸತೋದ್ಲು ಅ೦ತ ಜನ ಅಡ್ಕೊಳ್ಳದ ಹಾಗೆ ಮಾಡಿಕೊಡಪ್ಪ."
       "ಈಗೇನಾಯಿತು ?"
       "ಸುಬ್ಬೀನ ಕಂಡರೆ ನಿನಗೆ ಇಷ್ಟವೇನೊ ಪದ್ಮ?"
       "............"
       "ನೀನೂ ಸುಬ್ಬಿಯೂ ಅಣ್ಣ ತಂಗಿ ಹಾಗೆ. ನಿಮ್ಮ ವಿಷಯ ಅಪಖ್ಯಾತಿ ಬರೋ ಮಾತು ಯಾರಾದರೂ ಆಡಿದರೆ ಅವರ ನಾಲಿಗೆಗೆ ಹುಳ ಬೀಳ್ಲಿ." 
        "..........."
        " ಇಷ್ಟೇ ಪದ್ಮ, ತನ್ನ ಮಗಳ ಹತ್ತಿರ ನೀನು ಮಾತಾಡೋದು ಶಾಮಣ್ಣನಿಗೆ ಇಷ್ಟ ವಿಲ್ಲವಂತೆ. ನೀನು ಅಲ್ಲಿಗೆ ಹೋಗಲೇಬೇಡ."
        "ಕಾಫಿ ತಿ೦ಡಿಗೆ ಬಾ"
        “ನನಗೇನೂ ಬೇಡ ದೊಡ್ಡಮ್ಮ."
        " ಮುದುಕಿ ಏನೋ ಅಂದೂಂತ ಬೇಜಾರಾಯ್ತೇನಪ್ಪ? ಗೋವಿಂದನಿಗೂ ನಿನಗೂ ಮದುವೆಯಾಗಿ, ಇನ್ನಿಬ್ಬರು ಗೃಹಲಕ್ಷ್ಮಿಯರು ಮನೆಗೆ ಬಂದು, ನಿಮ್ಮ ಮಕ್ಕಳನ್ನೂ ಎತ್ತಿ ಆಡಿಸಿ, ನಿಮ್ಮ ಕಣ್ಣೆದುರಲ್ಲೇ ಸಾಯಬೇಕೂಂತ ನನ್ನ ಆಸೆ, ಪದ್ಮ- ಪ್ರೀತಿಯ ಮೊಮ್ಮಗ ಕುಲಕ್ಕೆ ಕಳಂಕಪ್ರಾಯನಾದ ಅಂತ ಕಣ್ಣೀರಿಟು ಕೊರಗಿ ನಾನು ಸಾಯೋ ಹಾಗೆ ಮಾಡ್ಬೇಡ."
      " ಸಾಕು, ಸಾಕು ದೊಡ್ಡಮ್ಮ, ದಯವಿಟು ಒಳಗೆ ಹೋಗು."
       "ಹೋಗ್ತಿನಿ ಕ೦ದ ಕಾಫಿ ತಿ೦ಡಿ ಇಲ್ಲಿಗೇ ತೊಗೊ೦ಡ್ಭ.
        "ಬೇಡ, ನನ್ನಾಣೆ, ಹಸಿವಾದರೆ ನಾನೇ ಕೇಳ್ತೀನಿ."
        "ನಿನ್ನಿಷ್ಟ" ಎಂದು ಹೇಳಿ ದೊಡ್ಡಮ್ಮ ನೆಟ್ಟುಸಿರು ಬಿಟ್ಟು, ಅಗಣಿ ತೆಗೆದರು.
      "ಇವತು ಕೆಟ್ಟ ದಿವಸ ಮನೆ ಬಿಟು ಹೋಗ್ಭೇಡ ಅಂತ ಆಗ್ಲೆ ಅಂದಿದೀನಿ," 
      –ಎಂದು ಮತ್ತೊಮ್ಮೆ ನೆನಪು ಮಾಡಿಕೊಟ್ಟು  ಹೊರಬಿದ್ದರು. ತಾವು ಆಡಿದುದನ್ನು ಜೀರ್ಣಿಸಿಕೊಳ್ಳಲು ಮೊಮ್ಮಗನಿಗೆ ಏಕಾಂತ ಬೇಕು ಎಂದು, ಬಾಗಿಲನ್ನೆಳೆದು ಮುಚ್ಚಿಕೊಂಡರು. 
     ಆ ಏಕಾಂತದಲ್ಲಿ ಪದ್ಮನಾಭನ ಮನಸ್ಸು ಬಹಳ ಹೊತು ರೋದಿಸಿತು. ತಂದೆ ಚೀರಾಡಿ ಏನಾದರೂ ಅಂದಿದ್ದರೆ ಖಂಡತುಂಡವಾಗಿ ತಾನೂ ಉತ್ತರಿಸಬಹುದಿತು, ಆದರೆ ಮಮತೆಯ ಅಜ್ಜಿಗೆ ಹೇಗೆ ತಾನೇ ಆತ ಇದಿರಾಡಬಲ್ಲ ?