ಪುಟ:ನೋವು.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

  ಗೋವಿಂದನೆಂದ: 
  " ನನ್ನ ನೀವು ಗೇಲಿ ಮಾಡ್ತಿದೀರಿ."
  " ಛೆ! ಛೆ! ಚಿಕ್ಕೋರತ್ರ ಒಳ್ಳೆ ಇಚಾರಗಳಿರರ್ತವೆ ಮಗನನ್ನೇ ನೋಡಿ,
ಇನ್ನೂ ಡಾಕ್ಕರ್ ಪರೀಕ್ಷೆ ಪ್ಯಾಸಾಗಿಲ್ಲ; ಅಷ್ಟರೊಳಗೆ ಇಂಗ್ಲಿಷ್ ಅವುಸದಿ ಗಿವುಸದಿ ಕೊಡ್ತಾ 
ಅವನೆ."
     " ಎಲಾ !"ಎಂದುಕೊಂಡು ಗೋವಿಂದ. ಕಾಹಿಲೆ ಮಲಗಿರುವವರು ಯಾರು? 

ಔಷಧಿ ಕೊಟ್ಟಿರುವುದು ಯಾರಿಗೆ? ದೊಡ್ಡಮ್ಮನಿಗೆ ಈ ವಿಷಯ ತಿಳಿಸಬೇಕು ಎಂದು ಯೋಚಿಸಿದ.

   ಅಂಗಳದಲ್ಲಿ ಆಳುಗಳು ನಿಂತು ಕಟಕಟೆಯ ಎಡೆಯಿಂದಳಿರ್ತವೆ ಪಡಸಾಲೆಯತ್ತ ನೋಡುತ್ತಿ  

ದ್ದರು.

   "ಓಗ್ರೋ," ಎಂದರು, ಗೌಡರು.
    ಆಳುಗಳು ಚೆದರಿದಾಗ ಗೌಡರೆಂದರು: 
   "ಒರಗಿನ ಜನ ಬಂದು ಇಲ್ಲಿ ನೆಲೆ ಊರಿ ಸಾಲ ಕೊಡೋದು, ದಿನಸಿನ ಅಂಗಡಿ  

ಇಡೋದು ಓಟ್ಲು ಮಡಗೋದು ಇದೆಲ್ಲಾ ನನಗೆ ಇಷ್ಟವಿಲ್ಲ. ಇರೋ ವಿಷಯ ಮುಚ್ಚು ಮರೆ ಇಲ್ದೆ ಯೋಡ್ತೀನಿ. ಓಟ್ಲು ಗೀಟ್ಲು ಬಂದ್ರೆ ಅಳ್ಳಿ ಜನ ಅರಟೆಗೆ ಕುಂತ್ಕೊತಾರೆ. ಮೊದಲೇ ಸೋಮಾರಿಗುಳ್ಳ."

   ವಿಷ್ಟುಮನೂರ್ತಿ ಹರ್ಷಚಿತ್ತೆನಂತೆ ನಟಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಮುಖ  
ಮಾನ್ಲವಾಯಿತು.
    ತಮ್ಮ ಮಾತುಗಳು ಪರಿಣಾಮಕಾರಿಯಾದುವೆಂದು ಗೌಡರು ಸಂತುಷ್ಟರಾದರು.
    ರಾಯಭಾರ ವಿಫಲವಾಗುದೋ ಏನೋ ಎಂದು ಗೋವಿಂದ ಕಳವಳಗೊಂಡ, 
    ಅವನೆಂದ:
    " ಜನ, ವಿದ್ಯಾವಂತರಾಗ್ವೇಕು ಅಂತಾರೆ. ಅದನ್ನ ತಪ್ಪಿಸೋಕಾಗುತ್ತಾ ? ಕಾಫಿ 

ಕುಡೀತೀವಿ, ಹೋಟ್ಲಗೋಗ್ರೀವಿ ಅಂತಾರೆ. ಬೇಡ ಅನ್ನೋಕಾಗುತ್ತಾ? ಆಧುನಿಕ ಸಂಗತಿಗಳ್ಳ ಅಂಗೈ ಅಡ್ಡ ಹಿಡಿದು ತಡೆಯೋದು ಹಾಗೆ ಸಾಧ್ಯ ?"

    ಗೌಡರಿಗೆ ಸಿಟ್ಟು ಬಂತು. ಆದರೂ ಅದನ್ನು ತೋರಗೊಡದೆ ಅವರು ಕಿರುನಗೆ 

ಸೂಸಿದರು.

   ಪರಿಸ್ಥಿತಿ ಹತೋಟಿ ತಪ್ಪಿಹೋಗಬಾರದೆಂದು ವಿಷ್ಟುಮೂರ್ತಿ, ಚೀಲದಿಂದ ಮೂಸಂಬಿ  

ಹಣ್ಣುಗಳನ್ನು ಹೊರಕ್ಕೆ ತೆಗೆದು ಸಾಲಾಗಿ ಜೋಡಿಸಿದರು. ಗೌಡರ ಕಡೆ ನೋಡಿ ಅವರೆಂದರು:

 • "ಅಲ್ಪ ಕಾಣ್ಣೆ, ಸ್ವೀಕರಿಸ್ಬೇಕು.
   " ಛೆ! ಛೆ! ನಮ್ಮೂರಿಗೆ ಬಂದೋರಿಗೆ ಏನಾದರೂ ಕೊಡಬೇಕಾದೋರು ನಾವು." 
   " ಹೆಹ್ಹ ! ಅದನ್ನ ಕೊಟ್ಟಿರಂತೆ . ಆ ಸಹಾಯ ಕೇಳೋಕೆ ನಾನು ಬಂದಿದೀನಿ." 
   ಗೌಡರು ತುಸು ಪ್ರಸನ್ನರಾಗಿ, "ಏನಪ್ಪ, ಎಂಥ ಸಹಾಯ ಆಗ್ವೇಕಪ್ಪ ನನ್ನಿಂದ ?" 
ಎಂದು ಕೇಳಿದರು.