ಪುಟ:ನೋವು.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೋವು

        "ಓಟ್ಲು ಇಡಿಸ್ಕೊಟು ನಮ್ಮವನೇ ಒಬ್ಬ ಹುಡುಗನಿಗೆ ಜೀವನಕ್ಕೆ ದಾರಿ ಮಾಡೊಡೋ 

ಣಾಂತಿದೀನಿ. ಅನುಮತಿ ಕೊಡ್ಬೇಕು. ಹೋಟ್ಲಿಗಾಗಿ ಸಣ್ಣದೊಂದು ಕಟ್ಟಡ ಬಾಡಿಗೆಗೆ ಕೊಡಿಸ್ಬೇಕು.”

    " ಇಷ್ಟೇ ತಾನೆ? ಆಗಲಪ್ಪ, ನಾನು ಬೇಡ ಅನ್ನೋದಿಲ್ಲ. ಊರಿನ ಬೇರೆ ಪ್ರಮುಖರೂ 

ಬೇಡ ಅನ್ನೆಲಾರರು."

   "ಉಪಕಾರವಾಯ್ತು." 
   " ಯಾವಾಗ ಶುರುಮಾಡ್ತೀರಾ ?" 
   "ಆಷಾಢಮಾಸ ದಾಟಿದ್ಮೇಲೇ ಒಳ್ಳೆ ದಿನ ನೋಡಿ..."
   "ಉ೦."
   " ತಾವು ಉದ್ಘಾಟನೆ ಮಾಡ್ಬೇಕು."
   ಗೋವಿಂದ ಚಕಿತನಾಗಿ ವಿಷ್ಟುಮೂರ್ತಿಯವರನ್ನು ದಿಟ್ಟಿಸಿದ. ತಲೆದೂಗುವಂತಿತ್ತು 

ಅವರ ವ್ಯವಹಾರ ಕೌಶಲ.

   ಗೌಡರೆಂದರು: 
   "ಏನು? ಭಾಷಣವೊ? ಹಹ್ಹ್ಹ ! ಗೋವಿಂದಪ್ಪ ಸೊಸೈಟಿ ಶುರು ಮಾಡ್ಯಾಗ 

ಒಮ್ಮೆ ಆ ಕೆಲಸ ಒಪ್ಕೋ೦ಡಿದ್ವಿ. ಅದೂ ನಮಗೂ ಸರೊಗೋದಿಲ್ಲ . ಅದೇನಿದ್ದರೂ ಗೋವಿಂದಪ್ಪನಂಥವರಿಗೇ ಸೈ. ಸಭೆ ಭಾಷಣ ಅಂದರೆ ಅವನಿಗೆ ಭೋ ಇಷ್ಟ.”

   ಗೋವಿಂದನಿಗೆ ಕಚಗುಳಿ ಇಟ್ಟಂತಾಯಿತು. 
   ವಿಷ್ಟುಮನೂರ್ತಿ ಅ೦ದರು: 
   "ನಮ್ಮ ಹೋಟ್ಲಿನ ಹೊಸ ಕಟ್ಟಡದ ಉದ್ಘಾಟನೆಗೆ ಸಚಿವ ಮಾರಪ್ಪನವರನ್ನ 

ಕರೆಸಿದ್ವಿ.”

    " ಹಾಗೋ?" 
    " ತಮ್ಮ ಊರಿನ ಕೆಲಸ; ತಮ್ಮ ಅಮೃತ ಹಸ್ತದಿಂದಲೇ...” 
    " ನೋಡಾನ, ನೋಡಾನೆ,...ಇನ್ನೂ ಟೈಮೈತೆ..." 
    ಮೂಸಂಬಿ ಹಣ್ಣುಗಳತ್ತ ಮತ್ತೊಮ್ಮೆ ನೋಡಿದ ಗೌಡರೆಂದರು: 
    “ನೀವು ತರಬಾರದಾಗಿತ್ತು, ತಂದಿದೀರಿ. ಮೊನ್ನೆಯಿಂದ ನನ್ನ ಮಗಳಿಗೆ ಸಲ್ಪ 

ಜ್ವರ, ರಸ ಹಿಂಡಿ ಕೊಡೋದಕ್ಕಾಯ್ತದೆ. ತಗೋತೀವಿ."

    ವಿಷಯ ತಿಳಿದ ಗೋವಿಂದ ನಸುನಕ್ಕ. 
    ಅಷ್ಟು ಹೇಳಿ ಅವರು ಆಳನ್ನು ಕರೆದರು: 
    " ಏ ಕರಿಯ ! ಈ ಅಯ್ಯೋರ ಚೀಲತುಂಬಾ ಒಳ್ಳೆ ರಸಪುರಿ ಹಣ್ಣು ತುಂಬಿಸ್ಕೊಡು.
ಅವರ ಹಿಂದೆ ಹೊತ್ತೊಂಡೋಗು."
     “ಬೇಡ ಬೇಡ, ಎಲ್ಲಾದರೂ ಉಂಟೆ ?" 
     "ಏನು ಬೇಡ? ಗೋವಿಂದಪ್ಪ, ಕೊಡು ಆ ಚೀಲಾನ ಕರಿಯನಿಗೆ. ನಿಮ್ಮ ತೋಟದಲ್ಲಾ 

ಮಾವಿನ ಫಸಲು ಚೆಂದಾಕಿ ಆಗೈತೆ ಅಂತ ಗೊತ್ತು, ಆದರೂ ನಮ್ಮನೇದೂ ಇರಲಿ.”

    ಹತ್ತಿರ ಬಂದ ಕರಿಯನಿಗೆ ಗೋವಿಂದ ಚೀಲವನ್ನು ಕೊಟ್ಟ.

5