ಪುಟ:ನೋವು.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ನೋವು ೬೬ ಗೌಡರು ಮಗನನ್ನು ಕರೆದರು : "ರ‍೦ಗಾ." ರಂಗಣ್ಣ ಕಾಣಿಸಿಕೊಂಡ. ಗೌಡರು ಕೇಳಿದರು: "ಸುಬ್ಬಿಗೆ ಜರ ಬಿಟ್ಟೈತಾ? ಡಿಕ್ರಿ ಇಟ್ಟು ನೋಡ್ದಾ ?" "ಹುಂ. ಈಗ ಕಮ್ಮಿ," ಎಂದ ರಂಗಣ್ಣ, ಜಮಖಾನದ ಮೇಲೆ ಕುಳಿತಿದ್ದ ಇಬ್ಬರನ್ನೂ ಮೂಸಂಬಿ ಹಣ್ಣುಗಳನ್ನೂ ನೋಡಿ.

  • ಸುಬ್ಬಿಗೆ ಈ ಹಣ್ಣಿನ ರಸ ಕೊಡಬೌದು, ಅಲ್ಲವಾ ?

"ಕೊಡಬಹುದು." ಎಂದು ನುಡಿದು, ರಂಗಣ್ಣ ಒಳಕ್ಕೆ ಸರಿದ.

"ಮಗ. ಇವನೇ ಡಾಕ್ಟರಾಗೋನು," ಎಂದರು ಗೌಡರು ಅಭಿಮಾನದಿಂದ.

ತುಸು ಯೋಚಿಸಿ ಶಾಮೇಗೌಡರು ಗೋವಿ೦ದನೊಡನೆ ಅ೦ದರು: " ಓಗ್ತಾ ಈ ಇವರಿಗೆ ಗ್ರಾಮಚಾವಡಿ ಮಗ್ಗುಲಲ್ಲಿ ಒಂದು ಖಾಲಿ ಮನೆ ‍ಐತಲ್ಲ, ಅದನ್ನ ತೋರ್ಸು, ಕೃಷ್ಣೇಗೌಡನ್ದು. ಇವರಿಗೆ ಒಪ್ಗೆ ಆದ್ರೆ, ಹೇಳಿ ಕೊಡ್ಸಾನ." " ಹೊ೦,"ಎಂದ ಗೋವಿಂದ.

" ಯಾವುದಾದರೂ ಸರಿಯೆ. ಒಪ್ಗೆ ಆಗ್ದೆ ಏನು? ನೋಡ್ಕೊ೦ಡು ಹೋಗ್ತೀನಿ,"ಎ೦ದರು ವಿ‌‌‌‌ಮೂತ್ರಿ

ಹೋಟೆಲು ಮಾಲಿಕನ ಬಗೆಗೆ ಗೌಡರು ಒಂದೆರಡು ಪ್ರಶ್ನೆ ಕೇಳಿದರು. ಉತ್ತರಿಸಿದ ವಿಮೂತ್ರಿ ತಾವು ಸ್ಥಿತಿವಂತರೆಂಬುದನ್ನು ಸೂಚಿಸದಿರಲಿಲ್ಲ. ಕೆಲ ನಿಮಿಷಗಳಲ್ಲಿ ಅವರು ಎದ್ದು ಗೌಡರಿಗೆ ಕೃತಜ್ಞತೆ ಸೂಚಿಸಿ, ಹೊರಟರು. ಮಾವಿನ ಹಣ್ಣುಗಳಿಂದ ಬೀಗುತ್ತಿದ್ದ ಚೀಲ ಹೊತ್ತುಕೊ೦ಡು ಕರಿಯ ಅವರನ್ನು ಹಿಂಬಾಲಿಸಿದ. ದಾರಿಯಲ್ಲಿ ಗೋವಿಂದ ಯೋಚಿಸಿದ:

ಸುಬ್ಬಿಗೆ ಜ್ವರ, ಈಗ ಕಮ್ಮಿ, ಇಂಗ್ಲಿಷ್ ಔಷಧಿ. ಹಾಗಾದರೆ ರಂಗಣ್ಣ ಭಾಗ್ಯನಗರಕ್ಕೆ ನಿನ್ನೆ ಹೋದುದು ಔಷಧಿ ತರಲು. ತನಗೆ ಹೇಳಲೇ ಇಲ್ಲ. ತುರ್ತು ಕೆಲಸ; ಡೀನ್ರನ್ನು ಕಾಣಬೇಕು–ಎಂದ. ಗೌಡರು ನಿನ್ನೆ ಬೆಳಗ್ಗೆ ಮನೆಗೆ ಬಂದು ತಂದೆಯವರನ್ನು ಕಂಡರು. ಮಾತನಾಡಿಸಿದ ದೊಡ್ಡಮ್ಮನಿಗೆ ಮಗಳ ಅಸ್ವಾಸ್ಥದ ವಿಷಯ ತಿಳಿಸಲಿಲ್ಲ.

ಏನೋ ನೆಡೆಯುತ್ತಿದೆ-ಎನಿಸಿತು ಗೋವಿ೦ದನಿಗೆ. "ಸುಮ್ನಿದೀರಲ್ಲ ಗೋವಿಂದರಾವ್ ?” ಎಂದು ಕೇಳಿದರು ವಿಷ್ಟುಮೂರ್ತಿ

“ ಏನಿಲ್ಲ, ಏನಿಲ್ಲ ”ಏ೦ದ ಗೋವಿ೦ದ.
ಮನೆ ತಲಪಿದಾಗ ವಿಷುಮೂರ್ತಿಯನ್ನು ಕುರಿತು ಶ್ರೀನಿವಾಸಯ್ಯ ಕೇಳಿದರು:
“ಏನಾಯ್ತು ಹೋದ ಕೆಲಸ ? ಗಂಡೋ ಹೆಣ್ಣೋ ?”
ತಾವು ವಿಜಯಿ ಎಂಬುದನ್ನು ಮುಖಭಾವದಿಂದಲೇ ತೋರಿಸುತ್ತ, “ಹೆಹ್ಹೆ !” ಎಂದು ವಿಷ್ಟುಮನೂರ್ತಿ ನಕ್ಕರು.

ಗೋವಿ೦ದನೆ೦ದ:

" ಹೈಸ್ಕೂಲು, ಹೋಟೆಲು ಇ೦ತಾದೆಲ್ಲ ಪಟೇಲರಿಗೆ ಇಷ್ಟವಿಲ್ವಂತೆ. ಆದರೂ ವಿಮೂತ್ರಿಯವರಿಗೆ ಅನುಮತಿ ಕೊಟ್ರು."