ಪುಟ:ನೋವು.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ನೋವು ೬೭

" ಹುಂ," ಎಂದರು ಶ್ರೀನಿವಾಸಯ್ಯ.
"ಈಗ ಹೊರಟರೆ ಹನ್ನೊಂದು ಘಂಟೆಯ ಬಸ್ಸು ಸಿಗುತಾ ?” ಎಂದು ವಿಷ್ಣುಮೂತ್ರಿ ಕೇಳಿದರು.
"ಏನವಸರ ? ಇದ್ದು ಹೋಗಿ. ಊಟ ಮಾಡ್ಕೊ೦ಡು..." ಎಂದರು ಶ್ರೀನಿವಾಸಯ್ಯ,
" ಗ್ರಾಮ ಚಾವಡಿ ಹತ್ತಿರದ ಮನೆ ಬೇರೆ ನೀವು ನೋಡ್ಬೇಕು," ಎಂದು ಗೋವಿಂದ ನೆನಪು ಹುಟ್ಟಿಸಿದ.
" ಹೋಗ್ತಾ ನೋಡ್ತೀನಿ. ನಗರದಲ್ಲಿ ಕೆಲಸ ಧಂಡಿಯಾಗಿ ಬಿದ್ದಿದೆ."
" ಎರಡು ಘಂಟೆಗೆ ನಿಮಗೊಂದು ಬಸ್ಸು ಸಿಗುತ್ತೆ, ಸೀಟು ಕೊಡಿಸಿ ಕಳಿಸೋ ಜವಾ ಬ್ದಾರಿ ನನ್ದು," ಎಂದ ಗೋವಿಂದ.

“ ಸರಿ.”

ಗೋವಿಂದ ಅಜ್ಜಿಗೆ ತಿಳಿಸಬೇಕಾದ ವಿಷಯದ ನೆನಪಾಗಿ, " ದೊಡ್ಡಮ್ಮ!" ಎಂದು ಕೂಗುತ್ತ ಒಳಕ್ಕೆ ಹೋದ    ವಿಷ್ಣುಮೂತ್ರಿ ಶ್ರೀನಿವಾಸಯ್ಯನವರ ಕಡೆ ತಿರುಗಿ, " ಬಂದ ಕೆಲಸ ಅರ್ಧ ಆಯ್ತು," ಎ೦ದರು. 

" ಅರ್ಧ ?"

" ಹೌದು. ಉಳಿದದ್ದು ನಿಮ್ಮ ಹತ್ತಿರ ಈಗ ನಾನು ಪ್ರಸ್ತಾಪಿಸಬೇಕು." 
"ಹೇಳೋಣಾಗಲಿ."
ವಿಷ್ಣುಮೂರ್ತಿ ಅರ್ಧ ಕ್ಷಣ ಸುಮ್ಮನಿದ್ದು, ಗಂಟಲು ಸರಿಪಡಿಸಿಕೊಂಡರು.
                            
                            ೯
ಗೋಪಾಲ ಮರಗಳಿಂದ ಕಾಯಿ ಇಳಿಸಲು ಮಾವಿನ ತೋಪಿಗೆ ಆಳುಗಳೊಡನೆ ಹೋಗಿದ್ದ.
ಅವನ ಹೆ೦ಡತಿ ಭಾಗೀರಥಿ ಅಡುಗೆಮನೆಯಲ್ಲಿದ್ದಳು. ಆ ಬೆಳಗ್ಗೆ ಅವಳು ಕೇಳಿದ್ದ ಮಾತುಕತೆ ಒಂದು ಬಗೆಯ ಗೊಂದಲದಲ್ಲಿ ಆಕೆಯನ್ನು ಕೆಡವಿತ್ತು; ವಿಸ್ಮಯ ಒಂದೆಡೆ, ಸಂತೋಷ ಇನ್ನೊಂದೆಡೆ.
ಗೋವಿ೦ದ ಮತ್ತು ಅಜ್ಜಿ.......
"ದೊಡ್ಡಮ್ಮ, ಕೇಳಿದೆಯಾ ? ಸುಬ್ಬಿಗೆ ಜ್ವರವಂತೆ."
"ಹೌದೆ?"
"ಮೊನ್ನೆಯಿಂದ."
"ಆಹಾ? ಶಾಮಣ್ಣ ನಿನ್ನೆ ಬಂದಿದ್ದ ಹೇಳ್ಳೇ ಇಲ್ಲ."
"ಅವರು ಬಂದು ಹೇಳೋ ಕಾಲ ಕಳೆಧ್ಹೋಯ್ತು, ದೊಡ್ಡಮ್ಮ."
"ಹಾಗಂದರೇನು ಗೋವಿಂದೂ ?"