ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಒಂದು ಅಡವಿಯಲ್ಲಿ ಇಡುಗುತೊಡಗು ಭೂಮಿಯಲ್ಲಿ ಮೊಣಕಾಲುಗಳು ಮುರಿದು ಬಿದ್ದ ಸಂಜೀವಕನನ್ನು ನೋಡಿ ಆ ವರ್ತಕನು ಸ್ವಲ್ಪಹೊತ್ತು ಚಿಂತಿಸಿ, ಬಳಿಕ ಆ ಬಂಡಿಯ ಮೇಣ ಸರಕುಗಳನ್ನೆಲ್ಲಾ ಮನುಷ್ಯರ ಕೈಯಿಂದ ಎತ್ತಿಸಿಕೊಂಡು, ಬಿದ್ದಿದ್ದ ಸಂಜೀವಕನ ಕಾಲುಗಳಿಗೆ ಕಟ್ಟು ಕಟ್ಟಿಸಿ, ಆ ಎತ್ತಿನ ಮೇಲಣ ಪ್ರೀತಿಯಿಂದ ಕೆಲವರನ್ನು ಅಲ್ಲಿ ಕವಲಿಟ್ಟು ಮುಂದಕ್ಕೆ ಸಾಗಿಹೋದನು,

ಅನಂತು ಅಲ್ಲಿ ಕಾವಲಿದ್ದವರು--ನಾವು ಈ ಭಯಂಕರವಾದ ಕಾಡಿನಲ್ಲಿದ್ದು ಸಾಯಬೇಕಾದುದೇನು ? ಹೋಗೊಣ-ಎಂದು ಅತಿ ತೊರೆಯಾಗಿ ಹೋಗಿ ಪ್ರಭುವನ್ನು ನೋಡಿ ಸ್ವಾಮಿ, ಆ ವನವಲ್ಲಿ ಹುಲಿ ಮುಂತಾದ ದುಷ್ಯಮೃಗಗಳು ಅನೇಕವುಂಟು. ನಾವು ಅಂಜಿ ಅಲ್ಲಿ ವೃಷಭಕ್ಕೆ ಕಾವಲಿರಲಾರದೆ ಅದನ್ನು ಬಿಟ್ಟು ಬಿಟ್ಟು ತಮ್ಮ ಸನ್ನಿ ಧಾನಕ್ಕೆ ಬಂದೆವು. ತಮ್ಮೊಂದಿಗೆ ಈ ಮಾತು ಹೇಳಲಿಕ್ಕೆ ನಾಚಿಕೆಯಾ ಗುತ್ತದೆ ಎಂದು ಮಹಾಭಕ್ತಿಯಿಂದ ನುಡಿದರು.

ಅಲ್ಲಿ ಆ ಸುಜೀವಕನಿಗೆ ಮುರಿದಕಾಲು ದಿನೇ ದಿನೇ ಚೆನ್ನಾಗಿ ಬಂದ ಕಾರಣ, ಆ ಎತ್ತು ಮೆಲ್ಲಮೆಲ್ಲಗೆ ಎದ್ದು ತಿರುಗಾಡುತ್ತಾ, ಎಳಯ ಗರಿಕೆ ಯನ್ನು ಮೇಯುತ್ತಾ, ಸಿಹಿನೀರು ಕುಡಿಯುತ್ತಾ, ಮೈತಿಳಿಯದೆ ಕೊಬಿ ಸ್ವಲ್ಪವಾದರೂ ಭಯವಿಲ್ಲದೆ ಒಂದುದಿನ ಗಟ್ಟಿಯಾಗಿ ಗುಟರುಹಾಕಿತು. *

The Story of the Lion Pingalaka.

ಆ ವನದಲ್ಲಿ ಪಿಂಗಳಕನೆಂಬ ಸಿಂಹವು ಹುಲಿಗಳು ಕಾಡುಹಂದಿಗಳು ಕರಡಿಗಳು ಕಾಡುಕೋಣಗಳ ಆನೆಗಳು ಖಡ್ಗಮೃಗಗಳು ಸಾರಂಗ ಗಳು ಹುಲ್ಲೆಗಳು ಚಿಗರಿಗಳು ಮುಂತಾದ ಸಕಲಮೃಗಗಳನ್ನು ಶಿಕ್ಷೆ ಸುತ್ತಾ ರಕ್ಷಿಸುತ್ತಾ, ಎಮರಿಲ್ಲದ ಭುಜಬಲದಿಂದ ಗರಿಸಿ ಸ್ನೇಚ್ಛೆಯಾಗಿ ತಿರುಗುತ್ತಾ, ತನ್ನ ಪರಾಕ್ರಮದಿಂದ ಸಂಪಾದಿಸಲ್ಪಟ್ಟ ರಾಜ್ಯವನ್ನನುಭವಿ ಸುತ್ತಾ ಇದ್ದಿತು. ಆ ಸಿಂಹವು ಒಂದುದಿನ ಬಾಯಾರಿಕೆಯಿಂದ ಬಳಲಿ ನೀರು ಕುಡಿಯುವುದಕ್ಕಾಗಿ ಯಮುನಾನದಿಯ ತೀರದಲ್ಲಿ ಇಳಿಯು ತಿದ್ದು, ಮಹಾಭಯಂಕರವಾಗಿ ಪ್ರಳಯಕಾಲದ ಮೇಘದಿಂದ ಹುಟ್ಟಿದ