15 ಮಿತ್ರಭೇದತಂತ್ರ ರತ್ನವನ್ನು ಹಿತ್ತಾಳೆಯಲ್ಲಿ ಕೆತ್ತಿದರೆ ರತ್ನಕ್ಕೇನು ಕುಂದುಕ ಬಂದೀತು ? ತನ್ನ ಭಂಟನಿಗೆ ತಕ್ಕಕೆಲಸ ಇಡದಿದ್ದರೆ ಆ ತಪ್ಪು ಅರಸನದೇ ಹೊರತು ಭಂಟನದಲ್ಲ. ಇವನು ಬುದ್ದಿವಂತನು, ಇವನು ತನ್ನಲ್ಲಿ ಪ್ರೀತಿಯುಳ್ಳ ವನು, ಇವನು ಮಂದನು, ಎಂದು ಅರಸನು ತಿಳಿದುಕೊಂಡು ಅವರವರನ್ನು ತಕ್ಕ ಕೆಲಸಗಳಲ್ಲಿ ಇಟ್ಟರೆ ಅವರು ಆತನನ್ನು ಬಿಡದೆ ಬಹುಕಾಲ ಸೇವಿ ಸುತ್ತಿರುವರು. ಕುದುರೆಗೂ ಆಯುಧಕ್ಕ ಶಾಸ್ತ್ರಕ್ಕೂ ವೀಣೆಗೂ ವಾಕ್ಕಿಗೂ ಹೆಂಗಸಿಗೂ ಕಲಿತ ಮನುಷ್ಯನಿಗೂ ಒಂದನೊಂದು ಪುರುಷ ನನ್ನು ಹೊಂದುವುದರಿಂದ ಯೋಗ್ಯತೆಯುಂಟಾಗುವುದು ; ಒಂದಾನೊಂದು ಪುರುಷನನ್ನು ಹೊಂದುವುದರಿಂದ ಅಯೋಗ್ಯತೆಯುಂಟಾಗುವುದು. ಸೇವ ಕನು ಭಕ್ತಿಯುಳ್ಳವನಾಗಿದ್ದರೂ ಅಸಮರ್ಥನಾದರೆ ಪ್ರಯೋಜನವೇನು ? ಸಮರ್ಥನಾದರೂ ಭಕ್ತಿಯಿಲ್ಲದವನಾದರೆ ಪ್ರಯೋಜನವೇನು? ಸಮರ್ಥ ನಾಗಿ ಭಕ್ತಿಯುಳ್ಳ ನನ್ನನ್ನು ನೀವು ಅಲಹವಾಗಿ ಕಾಣಬೇಡಿ. ಅರಸನು ಅವಮಾನಪಡಿಸುವುದರಿಂದ ಪರಿಜನರು ಬುದ್ಧಿಹೀನರಾಗುವರು ; ಅವರು ಬುದ್ದಿ ಹೀನರಾಗುತ್ತಲೇ ದೊಡ್ಡವರು ಅರಸನನ್ನು ಬಿಡುವರು; ದೊಡ್ಡವರು ಅರಸನನ್ನು ಬಿಡುತ್ತಲೇ ನ್ಯಾಯವು ನಶಿಸಿ ಅನ್ಯಾಯವು ವೃದ್ಧಿಯಾಗುವುದು ; ನ್ಯಾಯವು ನಶಿಸುತ್ತಲೇ ಸಮಸ್ತವೂ ಕೆಟ್ಟು ಹೋಗು ವುದು. ಆದುದರಿಂದ ಅರಸನು ವಿವೇಕವುಳ್ಳವನಾಗಿ ಇರಬೇಕು. ಎಂದು ದಮನಕನು ನುಡಿಯಲು ಪಿಂಗಳಕನಿಂತೆಂದನು-ಎಲೈ ನೀನು ನಮ್ಮ ಪ್ರಧಾನಮಂತ್ರಿಪುತ್ರನು. ಆದಕಾರಣ ಹೇಳಬೇಕಾದ ಮಾತುಗಳನ್ನು ಹೇಳಬಹುದು; ಅದರಿಂದ ತಪ್ಪೇನು ?-ಎನಲು ; ದಮನಕನಿಂತೆಂದನು -ಓ ಮಹಾನುಭಾವಾ, ನೃತನು ನಿಮ್ಮ ಸಂಗಡ ಒಂದು ಬಿನ್ನಹ ಮಾಡಿಕೊಳ್ಳುತ್ತಾನೆ; ಏನಂದರೆ, ನೀವು ನೀರು ಕುಡಿ ವುದಕ್ಕಾಗಿ ಯಮುನಾನದಿಯಲ್ಲಿ ಇಳಿದಾಗ ಆಶ್ಚ ಕೃಪಟ್ಟವರಹಾಗೆ ಅಲ್ಲಿ ಯೇಕೆನಿಂತಿರಿ ? ಪಿಂಗಳಕನಿಂತೆಂದನು,ಕೇಳು ದಮನಕಾ, ಸಮಸ್ತ ಜಂತುಗಳ ಸಮೂಹಗಳುಳ್ಳ ಈ ಅರಣ್ಯ ನನ್ನ ಅಧೀನ. ಇಷ್ಟು ದಿನ ಈ ಅರಣ್ಯವನ್ನು ಬಿಡದೆ ಇದ್ದೆನು; ಇನ್ನು ನಾನು ಬಿಡಬೇಕಾಗಿ ಬಂದಿತು.
ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೫
ಗೋಚರ