ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇದತಂತ್ರ ಹೊತ್ತಿಗೆ ಮೂರ್ಛ ತಿಳಿದು ಕಣ್ಣುಗಳ ಬಿಟ್ಟು ನಾಲ್ಕು ಕಡೆಗಳನ್ನ ನೋಡಲು, ಆ ಸಮಿಾಪದಲ್ಲಿ ನೆಲದಲ್ಲಿ ಬಿದ್ದಿರುವ ಭೇರಿಯ ಮುಖದ ಮೇಲೆ ಮರದಕೊಂಬೆ ಗಾಳಿಯಿಂದ ತಗಲುವುದರಿಂದ ಆ ಶಬ್ದ ವುಂಟಾ ಗುತ್ತದೆಯೆಂದು ತಿಳಿದು ತನ್ನ ಮನಸ್ಸಿನಲ್ಲಿಯ ಭಯವನ್ನೆಲ್ಲಾ ಬಿಟ್ಟು, * ಓಹೋ, ನನ್ನ ಅದೃಷ್ಟ್ಯವನ್ನೇ ನೆಂದು ಹೇಳಲಿ! ನನಗೆ ಒಳ್ಳಯಾಹಾರ ಸಿಕ್ಕಿತು' ಎಂದು ಸಂತೋಷಿಸಿತು. ಬಳಿಕ ಆ ಭೇರಿಗೆ ಹೊಲಿದಿದ್ದ ತೊಗಲನ್ನು ಕಚ್ಚಿ ತುಂಡುತುಂಡು ಮಾಡಿ ಅದರೊಳಕ್ಕೆ ನುಗ್ಗಿ ಹೊರ ಗೆಬಂದು ನಾನು ಮುಂಚೆಯೇ ತಿಳಿದುಕೊಳ್ಳಲಾರದೆ ಹೋದೆ. ಈಗ ಒಳಕ್ಕೆ ನುಗ್ಗಿ ಇದರ ಸಂಗತಿಯನ್ನು ಚೆನ್ನಾಗಿ ತಿಳಿದುಕೊಂಡೆನು. ಮುಂಚೆ ಭಯದಿಂದ ಈ ಸ್ಥಳವನ್ನು ಬಿಟ್ಟೋಡಬೇಕೆಂದೆಣಿಸಿದೆನು. ನಿಧಾನಿಸಿದವರಿಂವಲ್ಲವೇ ಉಳ ಸ್ಥಿತಿ ತಿಳಿಯಿತು ? ಆದುದರಿಂದ ಶಬ್ದ ಮಾ ತ್ರಕ್ಕೆ ಭಯಪಡಕೂಡದು' ಎಂದು ನೆನೆದು, ನರಿ ತನಗೆ ಬೇಕಾದ ಆಹಾ ರವನ್ನು ಭಕ್ಷಿಸುತ್ತಾ ಸ್ನೇಚ್ಛೆಯಾಗಿ ಹೋಯಿತು, ಆದಕಾರಣ ಶಬ್ದ ಮಾ ತ್ರಕ್ಕೆ ಭಯಪಡಕೂಡದು.” ಆ ಶಬ್ದ ಹುಟ್ಟಿದ ಸ್ಥಳಕ್ಕೆ ನಾನು ಹೋಗಿ ತಿಳಿದುಕೊಂಡು ಬರುತ್ತೇನೆ ಎಂದು ನುಡಿಯು, ಪಿಂಗಳಕನುಹಾಗೆವಾಡು--ಎಂದು ವಮನಕನಿಗೆ ಅಪ್ಪಣೆ ಕೊಟ್ಟನು. Danmanaku introduces himself to Sanjivaka. ಆಗ ದಮನಕನು ಸಂಜೀವಕನಿರುವ ಸ್ಥಳಕ್ಕೆ ಹೋಗಿ-ಎಲೆ, ನಾನು ಮೃಗರಾಜನ ಹಿತಕೃತ್ಯನು. ಆತನು ನನ್ನನ್ನು ನೀನಿರುವೆ ಸ್ಥಳಕ್ಕೆ ಹೊಗೆನಲಾಗಿ ಬಂದೆನು. ಆತನು ಈ ಅರಣ್ಯದಲ್ಲಿರುವ ಮೃಗಗಳಿಗೆ ಅಧಿಪತಿಯಾದುದರಿಂದ ನೀನು ಆತನ ಆಜ್ಞೆಯಲ್ಲಿದ್ದುಕೊಂ ಡು ಆತನ ಪಾದಗಳ ದರ್ಶನ ಮಾಡುತ್ತಾ ಮಂತ್ರಿಯಾಗಿ ಆತನ ಕಾರ್ ಗಳನ್ನು ವಿಚಾರಿಸಿಕೊ, ಹೆದರಬೇಡ ಬಾ---ಎನಲು, ಸಂಜೀವಕನು ಸಮ್ಮತಿಸಿದನು. ಆಮೇಲೆ ದಮನಕನು ತಾನು ಮುಂದಾಗಿ ಬರಲು ಆ ಜಂತುವನ್ನು ನೋಡಿದೆಯಾ ? ಎಂದು ಸಿಂಹವು ಕೇಳಲಾಗಿ, ದವು