ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

19 ಮಿತ್ರಭೇದತಂತ್ರ ವಿರಲಾಗಿ ನಿಂಹವು ತನ್ನ ಪರಿಜನರನ್ನೂ ಬಂಧುಗಳನ್ನೂ ಮರೆತು ಸಂಜೀವಕನಮೇಲೆ ತುಂಬ ಪ್ರೀತಿಯಾಗಿದ್ದಿತು. The second council of Karataka and Damanaka. ಆ ಮೇಲೆ ಕರಟಕ ದಮನಕರು ಮನಸ್ಸಿನಲ್ಲಿ ಬಹಳ ವಿಚಾರ ಹೊಂದಿ ನಾನಾವಿಧವಾಗಿ ಮಾತುಗಳಾಡುತ್ತಾ, ಕರಟಕನು ದಮನಕ ನನ್ನು ನೋಡಿ-ನೀನು ಸಂಜೀವಕನನ್ನು ಕರೆತಂದು ಅರಸನ ಹತ್ತಿರ ಮಂತ್ರಿಯಾಗಿ ನಿಲ್ಲಿಸಿದುದರಿಂದ ನಮ್ಮ ಮೇಲೆ ಆದರಣೆ ತಪ್ಪಿತು. ಇದು ನಿನ್ನಿಂದ ಬಂದ ತಪ್ಪಲ್ಲವೋ ?-ಎಂದು ನುಡಿಯಲಾಗಿ, ದಮನಕನಿಂ ತೆಂದನು:-ಹದು, ನೀನು ಹೇಳಿದುದು ಸರಿ, ಈಗ ನಮ್ಮರಸನು ಮುಂಚಿನ ಪರಿವಾರವನ್ನು ಬಿಟ್ಟು ಸಂಜೀವಕನು ಹೇಳಿದಹಾಗೆ ಕೇಳು ವುದರಿಂದ ಸೇವಕರು ಆಹಾರಕಾಣದೆ ನೊಂದುಹೋದರು. ನಾನಿನ್ನು ದೂರ ಆಲೋಚಿಸದೆ ಇಬ್ಬರಿಗೂ ಸ್ನೇಹಮಾಡಿದೆನು. ಇಂಥ ಕಾರಗೆ ೪ಗೆ ಕರ್ತೃ ದೇವರೇ ಹೊರತು ಇತರರಿಂದೇನಾದೀತು ? ಇದು ನನ್ನ ದೋಷವೆಂದು ಮೂರಬೇಡ ; ಸ್ವಯಂಕೃತಾಪರಾಧ ನನಗೆ ಮಾತ್ರವಲ್ಲ One's own fault:--Ashadhabhuti deceives Devasarma, ಜಂಕೋ ಮೇಷಯುದ್ದೇನ ವಯಂ ಚಾಪಾಢಭೂತಿನಾ| ವಿಶ್ವಾಸಪಾತ್ರತಾಜ್ಞಾನಾತಿ ಸದೋಪಾದ್ದು ಖತಾವಿಮಣ || ಮೇಷಯುದ್ಧದಿಂದ ಜಂಬುಕವೂ ಆಷಾಢಭೂತಿಯಿಂದ ಸಿದ್ದಮು ನಿಯ ಈ ಇಬ್ಬರೂ ಪಾತ್ರವನ್ನ ರಿಯದೆ ನಂಬಿದುದರಿಂದ ಸ್ವಯಂಕ ತಾಪರಾಧವುಳ್ಳವರೇ ಎಂದು ನುಡಿಯಲು, ಅದು ಹೇಗೆ ನನಗೆ ಹೇಳಿ ಬೇಕು.-ಎಂದು ಕರಟಕನು ಕೇಳಲಾಗಿ, ದಮನಕನು ಹೇಳುತ್ತಾನೆ. ಒಂದಾನೊಂದು ಕಾಲದಲ್ಲಿ ದೇವಶರನೆಂಬ ಹೆಸರುಳ್ಳ ಒಬ್ಬ ಯೋಗಿಯಿದ್ದನು. ಆತನು ಭೂ ಸಂಚಾರಮಾಡುತ್ತಾ ತಾನು ಸಂಪಾದಿ ಸಿದ ಧನವನ್ನೆಲ್ಲಾ ತನ್ನ ಬೊಂತೆಯಲ್ಲಿ ಅಡಗಿಸಿ ಹೊಲಿದು ಅದನ್ನು