ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ | ಪಂಚತಂತ್ರ ಕಥೆಗಳು, ರುವವರಿಗೆ ಅನ್ನ ವಸ್ತ್ರ ಕ್ಕೆ ಕೊಡದೆ, ಉಪಾಯದಿಂದ ಅರಸನನ್ನು ಕೊಂದು ರಾಜ್ಯವನ್ನೆಲ್ಲಾ ತನ್ನ ವಶಪಡಿಸಿಕೊಳ್ಳುವನು. ಉಪ ಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವನು ಈ ಲೋಕದಲ್ಲಿರುವುದು ಅಪೂರ್ವವು. ಎಲ್ಲರಿಗೂ ತಮ್ಮ ಕೆಲಸವಾದ ಮೇಲೆ ಬುದ್ದಿ ಬೇರೆ ಆಗುತ್ತದೆ. ಬಗೆಬಗೆಯಾದ ಬಹುಮಾನಗಳನ್ನು ಮಾಡಿ ತನ್ನನ್ನು ಆದ ರಿಸಿದ ಅರಸನನ್ನು ವಿಚಾರಿಸದೆ ಪರರಾಜನ ಹತ್ತಿರ ಲಂಚಕ್ಕೆ ಆಶಿಸುವ ದುಮ್ಮನಾದ ಮಂತ್ರಿ ಈ ಲೋಕದಲ್ಲಿ ಅರಸನನ್ನು ಕೆಡಿಸಿ ಪರಲೋಕ ದಲ್ಲಿ ತಾನೂ ಕೆಡುವನು, ವಿಷಕಲಿಸಿದ ಅನ್ನವನ್ನೂ ಕದಲುವ ಹಲ್ಲನ್ನೂ ದುಪ್ಪನಾದ ಮಂತ್ರಿಯನ್ನೂ ಶುದ್ಧವಾಗಿ ತೆಗೆದುಹಾಕುವುದು ಸುಖಕ ರವು. ಸಂಜೀವಕನು ಸಕಲಕಾರ್ಯದಲ್ಲಿ ಸ್ನೇಚ್ಛೆಯಾಗಿ ಪ್ರವರ್ತಿ ಸುತ್ತಾನೆ, ಅದು ನಿಮ್ಮ ಚಿತ್ರಕ್ಕೆ ತಿಳಿದೇ ಇದೆ. ಸಂಪತ್ತನ್ನು ಕೋರ ದವನು ಲೋಕದಲ್ಲಿಲ್ಲ, ಆ ಕೋರಿಕೆಯನ್ನು ಕೊನೆಸಾಗಿಸಿಕೊಳ್ಳಲಾರ ದವನು ಅರಸನನ್ನು ಸೇವಿಸುವನು, ಸೇವಕರಾದವರು ತಾವು ಧನವಂತ ರಾಗಿದ್ದರೆ ಅರಸನನ್ನು ಏತಕ್ಕೆ ಓಲೈಸುವರು ? ಸಾಗದುದರಿಂದಲೇ ಅಲ್ಲವೇ ಹೇಳಿದ ಕೆಲಸಮಾಡುವುದು ? ಇಂಥಾ ಸೇವಕರಾದ ಮತ್ತೊ ಬ್ಬರನ್ನು ಅರಸನ ಹತ್ತಿರಕ್ಕೆ ಸೇರಲೀಯದೆ ಸಂಜೀವಕನು ತಾನೇ ಸರಾಧಿಕಾರಿಯಾಗಿದ್ದಾನೆ. ಇದನ್ನೆಲ್ಲಾ ನೋಡಿದರೆ ಶೀಘ್ರವಾಗಿ ನಿಮ್ಮ ಗೇನೋ ಮೋಸಮಾಡುತ್ತಾನೆಂದು ತೋರುತ್ತದೆ. ನೀವೀಗ ಮೈಮ ರೆದು ಇರಬಾರದು. ನನ್ನ ಮಾತು ನಂಬತಕ್ಕುದಾದರೆ ನಂಬಿ, ಇಲ್ಲದಿ ದ್ದರೆ ರಹಸ್ಯವಾಗಿ ನೀವೇ ವಿಚಾರಿಸಿ- ಎಂದನು. ಅದನ್ನು ಕೇಳಿ ಪಿಂಗಳಕನು ದಮನಕನನ್ನು ನೋಡಿ-ಎಲೈ ಈ ದೇಹವು ದೋಷಮಯವಾಗಿದ್ದರೂ ಇದು ಏತಕ್ಕೆಂದು ಬಿಡುವವ ರುಂಟೋ ? ಹಾಗೆಯೇ ತನ್ನ ಸ್ನೇಹಿತನು ಒಂದುವೇಳೆ ಅಪಕಾರಮಾ ಮಾಡಿದ್ದರೂ ಅವನನ್ನು ಬಿಟ್ಟು ಬಿಡುವುದು ಒಳ್ಳೆಯದಲ್ಲ. ನಾವು ನಂಬಿಕೆಕೊಟ್ಟು ಅಧಿಕಾರದಲ್ಲಿ ಪ್ರವೇಶಪಡಿಸಿ ಒಂದು ಮಾತಿನಿಂದ ಸಾಹ ಸವನ್ನು ಮಾಡಬಾರದು. ಅವನಲ್ಲಿ ತಪ್ಪಿದ್ದರೆ ಅವನ ಪಾಪದಲ್ಲಿ ಅವನೇ