ವಿಷಯಕ್ಕೆ ಹೋಗು

ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ಮಿತ್ರಭೇದತಂತ್ರ. ಒಳ್ಳೇ ಸಿಹಿನೀರು ನದಿಗಳು ಉಪ್ಪು ಸಮುದ್ರದಲ್ಲಿ ಬಿದ್ದು ಕೆಟ್ಟ ಹಾಗೆ, ಅವನ ಗುಣವು ಕೆಟ್ಟು ಹೋಗುತ್ತದೆ. ಬೆಳ್ಳಿಯ ಬೆಟ್ಟದ ಮೇಲೆ ಚಂದ್ರ ಕಿರಣಗಳು ತುಂಬಾ ಪ್ರಕಾಶಿಸುವಂತೆ, ಒಳ್ಳೆಯ ಗುಣವುಳ್ಳ ಪುರುಷನಲ್ಲಿ ಇತರನ ಅಲ್ಪಗುಣವಾದರೂ 'ಪ್ರಕಾಶಿಸುತ್ತದೆ. ಕಾಡಿಗೆಯ ಬೆಟ್ಟದಲ್ಲಿ ರಾತ್ರಿಯಲ್ಲಿ ಪೂರ್ಣಚಂದ್ರಕಿರಣಗಳು ಪ್ರಸರಿಸಿದರೂ ಪ್ರಕಾಶಿಸದ ಹಾಗೆ, ಕೆಟ್ಟ ಗುಣಗಳುಳ್ಳವನಲ್ಲಿ ಅನ್ಯನ ಒಳ್ಳೆಯಗುಣಗಳಷ್ಟಾದರೂ ಪ್ರಕಾಶಿಸವು. ದುಪ್ಪರಿಗೆ ಎಷ್ಟು ಉಪಕಾರಮಾಡಿದರೂ, ಮೂಢರಿಗೆ ಎಷ್ಟು ವಿದ್ಯೆ ಕಲಿಸಿದರೂ, ಹೇಳಿದ ಹಾಗೆ ಕೇಳದವರಿಗೆ ಎಷ್ಟು ಬುದ್ಧಿ ಹೇಳಿದರೂ, ಅಪಾತ್ರರಿಗೆ ಎಷ್ಟು ಕೊಟ್ಟರೂ ಫಲವಿಲ್ಲ. ಕಾಡಿನಲ್ಲಿ ಅಳು ವುದೂ, ಹೆಣಗಳನ್ನಲಂಕರಿಸುವುದೂ, ಮಿಟ್ಟೆ ಭೂಮಿಯಲ್ಲಿ ಕಮಲ ಲತೆಯನ್ನು ನಾಟುವುದೂ, ನಾಯಬಾಲವನ್ನು ನೆಟ್ಟಗೆ ಮಾಡುವುದ ಕ್ಕಾಗಿ ದಬ್ಬೆಗಳಟ್ಟು ಕಟ್ಟುವುದೂ, ಕಿವುಡನೊಂದಿಗೆ ಏಕಾಂತವಾಡು ವು, ಚೌಳುನೆಲದಲ್ಲಿ ವರ್ಮಿಸುವುದೂ, ಕುರುಡನಿಗೆ ಕನ್ನಡಿತೋರಿಸು ವುದೂ, ಬೂದಿಯಲ್ಲಿ ತುಪ್ಪವನ್ನು ಹೋಮಮಾಡುವುದೂ ಹೇಗೆ ನಿಪ್ಪಲ ವೋ ಹಾಗೆಯೇ, ಅವಿವೇಕಿಯಾದ ಅರಸನಲ್ಲಿ ಸೇವೆಮಾಡುವುದು ನಿಷ್ಪ ) ಯೋಜನವು. ಒಳ್ಳೆಯ ಗಂಧದ ಮರಕ್ಕೆ ಹಾವು ಸುತ್ತಿಕೊಂಡಿರುತ್ತದೆ, ಮಡುವುಗಳಲ್ಲಿ ಮೊಸಳಗಳು ಇರುತ್ತವೆ, ಕಮಲವು ಕೆಸರಿನಲ್ಲಿ ಬೆಳಯು ತದೆ; ಶ್ರೇಷ್ಠ ವಾದ ವಸ್ತು ನಿರುಪದ್ರವವಾಗಿ ಇರುವುದು ಅಪೂರವು. ಸೇವಕರು ಏವೇಕಿಯಾದ ಅರಸನನ್ನು ಓಲೈಸಿದರೆ ಭಯವಿಲ್ಲ. ದುರ್ಜ ನನು ತನ್ನ ಬಳಿಗೆ ಬರುವವನನ್ನು ಕಾಣುತ್ತಲೇ ಬಹು ವಿನಯದಿಂದ ಎದ್ದು ಅವನನ್ನು ತಣ್ಣಗೆ ನೋಡಿ ತಬ್ಬಿಕೊಂಡು ತನ್ನ ಅರ್ಧಾಸನದಲ್ಲಿ ಕುಳ್ಳಿರಿಸಿ ಒಳಗೆ ವಿಷವಿಟ್ಟುಕೊಂಡು ಹೊರಗೆ ಅಮೃತಸೋರುವಹಾಗೆ ಪ್ರಿಯವಚನಗಳನ್ನು ನುಡಿಯುವನು, ಬುದ್ಧಿವಂತರು ಸಮುದ್ರವನ್ನು ದಾಟುವುದಕ್ಕೆ ಹಡಗನ್ನೂ, ಕತ್ತಲೆಯನ್ನು ಹೋಗಲಾಡಿಸುವುದಕ್ಕೆ ದೀಪವನ್ನೂ, ಸುಖವಾಗಿಯೂ ವೇಗವಾಗಿಯೂ ಸುಲಭವಾಗಿ ಸಂಚರಿಸಲಿಕ್ಕೆ ಲೋಹವಾರ್ಗವನ್ನೂ, ಬಲು ಬೇಗ ಸಮಾಚಾರವನ್ನು ತಿಳಿಸಲಿಕ್ಕೆ ತಂತಿಯ ತಪಾಲನ್ನೂ ಉಪಾಯದಿಂದ ನಿರ್ಮಿಸಿದರು ;