ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇದತಂತ್ರ 41 ವರ್ತಕನು ನನ್ನ ಬೆನ್ನಿನ ಮೇಲೆ ಭಾರವಿಟ್ಟು ಹೊರಿಸುತ್ತಿರಲಾಗಿ ನಾನು ಹೊತ್ತು ಹೊತ್ತು ದಣಿದು ಈಗ ಅವನಿಗೆ ಕಾಣಿಸದೆ ಅವಿತು ಕೊಂಡಿದ್ದೇನೆ, ನನಗೆ ನೀವೇ ಗತಿ, ನನ್ನ ರಕ್ಷಿಸಬೇಕು, ನಾನು ನಿಮ್ಮ ಲ್ಲಿರುತ್ತೇನೆ ಎನಲು, ನರಿಯು-ಈ ಅರಣ್ಯದಲ್ಲಿ ಒಬ್ಬ ಮೃಗರಾಜನು ಮಹಾಬಲಸಾಕ್ರಮಸಂಪನ್ನನಾಗಿದ್ದಾನೆ. ನಾವು ಆತನನ್ನು ಕುಲ ಸ್ವಾಮಿಯಾಗಿ ಮಾಡಿಕೊಂಡು ಯಾವಾಗಲೂ ಸೇವಿಸುತ್ತಿರುವೆವು. ನೀನು ನಮಗೆ ಮಿತ್ರನಾದೆ. ಆದುದರಿಂದ ಮೃಗರಾಜನ ಬಳಿಗೆ ನಿನ್ನ ಕರೆದುಕೊಂಡು ಹೋಗಿ ದರ್ಶನಮಾಡಿಸಿ ನಿನಗೆ ಮೇಲುಂಟಾಗುವ ಹಾಗೆ ಮಾಡುತ್ತೇವೆ. ನೀನು ಭಯವನ್ನು ಬಿಟ್ಟು ಧೈರದಿಂದಿರು. ನಮ್ಮ ಮಾತಿನಲ್ಲಿ ನಂಬಿಕೆಯಿಟ್ಟು ನಮ್ಮನ್ನು ಹೊಸಬರಾಗಿ ಎಣಿಸದೆ ಸಂಗಡ ಬಂದರೆ, ನಿನ್ನ ಸಂಗತಿಯನ್ನು ಮೃಗೇಂದ್ರನಿಗೆ ತಿಳಿಸಿ ಸಿನ್ನಲ್ಲಿ ಪ್ರೀತಿ ಹುಟ್ಟಿಸಿ ನಿನ್ನನ್ನು ಆತನ ಊಳಿಗಕ್ಕೆ ಸೇರಿಸಿಕೊಳ್ಳುವಂತೆ ಮಾಡು ತೇವೆ. ನಾವು ನಾಲ್ವರೂ ಏಕೀಭವಿಸಿ ಇರೋಣ. ಮೃಗೇಂದ್ರನ ಊಳಿಗದಲ್ಲಿರುವವರನ್ನು ಮಾತನಾಡಿಸುವವರು ಬೇರೊಬ್ಬ ರಾಂಟೋ ? ಚಿಂತೆಯೇನೂ ಇಲ್ಲದೆ ನೆಮ್ಮದಿಯಾಗಿರಬಹುದು ಎಂದು ಹೇಳಲಾಗಿ, ಒಂಟಿ ತನ್ನ ಮನಸ್ಸಿನಲ್ಲಿ ಸಂತೋನಿ ಅವರ ಹಿಂದೆ ಹೋಯಿತು. ಆ ಒಂಟೆಯ ಸಂಗತಿಯನ್ನು ಮೃಗರಾಜನಿಗೆ ತಿಳಿಸಿದರು. ಆಗ ಮೃಗ ರಾಜನು ಒಂಟೆಗೆ ಅಭಯಹಸ್ತವನ್ನು ಕೊಟ್ಟು ಸಂತೋಪ್ರಪಡಿಸಿ ಸ್ವಲ್ಪ ಹೊತ್ತು ಮಾತನಾಡಿ, ಅದಕ್ಕೆ ಕಥನಕನೆಂಬ ಹೆಸರನ್ನಿಟ್ಟು ನನ್ನ ಮಂತ್ರಿಗಳಲ್ಲಿ ನೀನೊಬ್ಬ ಮಂತ್ರಿಯಾಗಿರು-ಎಂದು ನಿಯಮಿಸಿದನು. ಆ ಒಂಟೆಯು ಕಾಗೆ ಹುಲಿ ನರಿಗಳ ಸಂಗಡ ಸೇರಿ ಅತಿಸ್ನೇಹವಾಗಿ ಬಹುಕಾಲವಿದ್ದಿತು. ಹೀಗಿರಲಾಗಿ ಒಂದು ದಿನ ಅವುಗಳನ್ನು ಸಿಂಹವು ನೋಡಿ, - ಎಲೈ ಮಂತ್ರಿಗಳಿರಾ, ಈಗ ನನಗೆ ಮೈ ಚೆನ್ನಾಗಿಲ್ಲ. ನನಗೆ ಗುಣವಾಗುವ ತನಕ ನಾನು ಅಡವಿಯಲ್ಲಿ ಸಂಚರಿಸಲಾರನು, ಆಮದ ರಿಂದ ನನಗೆ ಹೊತ್ತೇರುವುದಕ್ಕಿಂತ ಮುಂಚೆ ಆಹಾರವನ್ನು ತಂದುಕೊ ಡಬೇಕು-ಎನಲು; ಮಂತ್ರಿಗಳಲ್ಲರೂ ಏಕೀಭವಿಸಿ-ನಾವು ಅಲ್ಪರು, ನಿಮ- ಬೇಕಾದ ಆಹಾರವನ್ನು ಒಪ್ಪೋಗೆ ಸಹ ತಂದು ಕೊಡಲಾರವು. k'