ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 ದಿ ಮಿತ್ರಭೇದತಂತ್ರ. ವನ್ನೇ ನಾವೀಗ ತಾಳಲಾರೆವು. ಎಲ್ಲಿಗಾದರೂ ಓಡಿ ಹೋಗೋಣವೇಎಂದು ರೋಸಿಕೊಂಡಿತು. ಆಗ ಹುಲಿಯು ನಮ್ಮ ಸ್ವಾಮಿ ಮಹಾ ವ್ಯಾಧಿಯಿಂದ ಪೀಡಿತನಾಗಿ ಹಸಿಗೊಂಡಿರುವಾಗ, ನಾವು ಆತನನ್ನು ಬಿಟ್ಟು ಹೋಗುವುದು ನೃತೈನ್ಯಾಯವಲ್ಲ. ಆತನ ಸಮ್ಮುಖಕ್ಕೆ ಹೋದಮೇಲೆ ಅದೃಷ್ಟವಿದೆ ಆಗುತ್ತದೆ, ಹೋಗೋಣ ಎಂದು ಕಾಗೆಗೆ ಹೇಳಿ ಹೊರಡುವ ಸಮಯದಲ್ಲಿ ಒಂಟಿ ಸಹ ಸೇರಿಕೊಂಡಿತು. ಆ ಮೇಲೆ ಈ ಮೂವರೂ ಅದನ್ನು ತಲೆಬಾಗಿಲಲ್ಲಿ ನಿಲ್ಲಿಸಿ ನಿಂಹದ ಬಳಿಗೆ ಹೋಗಿ-ಎಲೈ ಮಹಾ ಪ್ರಭುವೇ, ನಾವು ನಿಮ್ಮ ಆಜ್ಞೆಯ ಪ್ರಕಾರ ಅಡವಿಗಳಿಗೆ ಹೋಗಿ ಅಲ್ಲಿ ಮಾಂಸ ಸಿಕ್ಕದೆ ತಿರುಗಿ ಸಾಕಾಗಿ ಎಂದೆವು. ಈಗ ಆಹಾರವಿಲ್ಲದೆ ಶ್ರಮಪಡಬೇಕಾದುದೇನು? ನಾವು ಒಂದು ಬಿನ್ನಣೆ ಮಾಡುತ್ತೇವೆ, ಚಿಸಬೇಕು. ಕಥನಕನು ತನ್ನ ಕಾರಕ್ಕಾಗಿ ನಿಮ್ಮ ಬಳಿಗೆ ಬಂದನೇ ಹೊರತು, ನೀವು ಕರೆಯಿಸಿ ಬಂದ ವನಲ್ಲವ ? ಆದುದರಿಂದ ಅವನನ್ನು ಆಹಾರವಾಗಿ ಸ್ವೀಕರಿಸಿದರೆ ನಿಮಗೂ ನನಗೂ ಬೇಕಾದಷ್ಟು ಆಹಾರವಾಗುತ್ತದೆ-ಎನಲು; ನಿಂಹ ವು ಕೇಳಿ, ಹಸಿ ಹರೀ! ಎಂದು ಕಿವಿಗಳನ್ನು ಮುಚ್ಚಿಕೊಂಡು ಅಭ ಯಪ್ರದಾನ ಮಾಡಿದ ತರವಾಯ ಇಂಥ ಆಲೋಚನೆ ಮಾಡಬಹುದೇ ? ಗೋದಾನ, ಭೂದಾನ, ಅನ್ನದಾನ, ವಸ್ತ್ರ ದಾನ, ಸುವರ್ಣದಾನ, ಇವು ಅಭಯವಾಗ್ತಾನಕ್ಕೆ ಸಮನಲ್ಲವೆಂದು ದೊಡ್ಡವರು ಹೇಳುವರು, ಹೆದರಿ ಮರಕ್ಕೆ ಒಬ್ಬ ನನ್ನು ಕಾಪಾಡಿದರೆ ಅಶ್ವಮೇಧಯಾಗ ಮಾಡಿದ ಫಲವು ಬರುವುದೆಂಬುದನ್ನು ನೀವು ಕೇಳಲಿಲ್ಲವೇ ?-ಎಂದು ನುಡಿಯಿತು. ಆಗ ಆ ಮೂವರಲ್ಲಿ ಕಾಗೆನ್ನು, ಕುಲವನ್ನು ರಕ್ಷಿಸುವುದ ಕಾಗಿ ದುಪ್ಪನಾದ ಮಗನನ್ನು ಬಿಡುವರು; ಗ್ರಾಮವನ್ನು ಕಾಪಾಡುವು ದಕ್ಕಾಗಿ ಕುಲವನ್ನು ಬಿಡುವರು ; ಭೂಮಿಯನ್ನು ರಕ್ಷಿಸುವುದಕ್ಕಾಗಿ ಗ್ರಾಮವನ್ನು ಬಿಡುವರು ; ತನ್ನನ್ನು ಕಾಪಾಡಿಕೊಳ್ಳುವುದಕ್ಕಾಗಿ ಸರಸ ವನ್ನೂ ಬಿಡುವರು. ಆದುದರಿಂದ ದೇಹಸಂರಕ್ಷಣಾರ್ಥವಾಗಿ ಏನುಮಾ ಡಿದರೂ ಮಾಡಬಹುದು, ಇದೂ ಅಲ್ಲದೆ ನೀವು ಕಥನಕನನ್ನು ಬಲಾ ತಾರವಾಗಿ ಕೊಲ್ಲಬೇಕಾದುದಿಲ್ಲ. ಅವನು ಸಮ್ಮತಿಸುವಹಾಗೆ ಮಾಡು