ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತ್ರಭೇದತಂತ್ರ 45 ದರೂ ಅರಸನಿಗೂ ಅರಸನ ಪರಿವಾರದವರಿಗೂ ಮನಸ್ಸು ಕಲೆತು ಇರಲಾ ರದು ಎಂದು ನಡಿಯಲು, ಸಂಜೀವಕನು ದಮನಕನನ್ನು ನೋಡಿ-- ಅರಸನ ಹತ್ತಿರ ಕುದ್ರಪರಿವಾರ ಸೇರಿ ಇರುವುದರಿಂದ ಆಶ್ರಿತರಿಗೆ ಸುಖ ವಿಲ್ಲ. ಪೂರ್ವಕಾಲದಲ್ಲಿ ಕುಯುಕ್ತಿಗಳುಳ್ಳೆ ನರಿ ತೀಕವಾದ ಮೂಗು ಕಾಗೆ ಈ ಇಬ್ಬರೂ ನಿನ್ನ ಬಳಿಯಲ್ಲಿದ್ದ ರಾದುದರಿಂದ ನಾನು ಮರ ವೇರಿದೆನು ; ನಿನ್ನ ಪರಿವಾರ ಒಳ್ಳಯವಲ್ಲವೆಂದು ಒಬ್ಬ ಬಡಗಿಯು ಒಂದು ಸಿಂಹಕ್ಕೆ ಹೇಳಿದ ಮಾತನ್ನು ನೀನು ಕೇಳಲಿಲ್ಲವೇ ? ಎಂದು ನುಡಿಯಲು, ದಮನಕನುಆ ಕಥೆಯನ್ನು ನನಗೆ ಹೇಳು-ಎಂದು ಕೇಳಿದನು. ಸಂಜೀವಕನು ಹೇಳುತ್ತಾನೆ. Evils of bad company-The Carpenter and the Lioo. ಒಂದು ಪಟ್ಟಣದಲ್ಲಿ ಒಬ್ಬ ಬಡಗಿಯಿದ್ದನು. ಅವನು ನಿತ್ಯವೂ ಕಾಡಿಗೆ ಹೋಗಿ ಮರಗಳನ್ನು ಕಡಿದು ತಂದು ಮಾರಿ ಜೀವಿಸುತ್ತಿ ದ್ದನು. ಒಂದು ದಿನ ಸುದ್ದಿಲೋಚನನೆಂಬ ಹೆಸರು ಬಂಡವು ಕಾಡಿನಲ್ಲಿ ಸಂಚರಿಸುತ್ತಾ ಅವನ ಕಣ್ಣಿಗೆ ಬಿದ್ದಿತು. ಅವನು ಅದನ್ನು ಕಂಡಂಜಿ ನಿಶ್ಚಸ್ಮಿತನಾದನು. ಆಗ ಸಿಂಹವು ಅವನಿಗೆ ಅಭಯ ವಿತ್ತು ಹೆದರಬೇಡವೆಂದು ಹೇಳಿತು. ಆ ಮೇಲೆ ಅವನು ತನ್ನ ಮನೆ ಯಿಂದ ತಂದ ಅನ್ನ ಮುಂತಾದುವನ್ನು ಸಿಂಹಕ್ಕೆ ಇಟ್ಟನು, ಸಿಂಹವು ತೃಪ್ತಿ ಹೊಂದಿ ಅವನ ಮೇಲೆ ದಯೆಯಾಗಿದ್ದಿತು. ಬಳಿಕ ಪ್ರತಿದಿನವೂ ಅವನು ಸಿಂಹಕ್ಕೆ ನಾನಾವಿಧವಾದ ಆಹಾರಗಳನ್ನು ತಂದು ಕೊಡುತ್ತಾ ಬಂದನು. ಹೀಗೆ ಇಬ್ಬರಿಗೂ ಬಹು ಸ್ನೇಹವಾಗಿ ಬಹುಕಾಲ ಕಳಯಿತು. ಆ ನಿಂಹಕ್ಕೆ ಒುದು ಕಾಗೆಯ ಒಂದು ನರಿಯೂ ಇಬ್ಬರೂ ಅನುಚರ ರಾಗಿದ್ದರು, ಅವರು ಒಂದು ದಿನ ನಿಂಹವನ್ನು ನೋಡಿ ನಮ್ಮ ಆಹಾ ರವನ್ನು ವಿಚಾರಿಸದೆ ನೀವು ಮಾತ್ರ ಆಹಾರವನ್ನು ಸಂಪಾದಿಸಿಕೊಳ್ಳು ತೀರಿ, ನಮ್ಮ ಗತಿ ಏನು ? ಎಂದು ಕೇಳಿದರು. ನಾನೆಲ್ಲಿಗೂ ಹೋ ಗುವದಿಲ್ಲ ಎಂದು ಸಿಂಹವು ಹೇಳಿತು. ಆದರೆ ನಿಮಗೆ ಆಹಾರವನ್ನು ಯಾರು ತಂದು ಕೊಡುತ್ತಾರೆ ? ನಮ್ಮ ಸಂಗಡ ಹೇಳಬೇಕು