ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

47 ಮಿತ್ರಭೇದತಂತ್ರ ಳನ್ನು ಮಾಡಿದವರೂ ಸಮಸ್ತ ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡಿದ ವರೂ ಎಂಥ ಪುಣ್ಯಲೋಕವನ್ನು ಹೊಂದುವರೋ ಅಂಥ ಪುಣ್ಯ ಲೋಕವನ್ನು ಯುದ್ಧದಲ್ಲಿ ಮಡಿದವರು ಹಣವಲ್ಲಿ ಹೊಂದುವರು. ಯುದ್ಧದಲ್ಲಿ ತಾನು ಮೃತನಾದರೆ ಸ್ವರ್ಗಲೋಕದ ಸುಖವನ್ನನುಭವಿಸಬ ಹುಮ, ತನ್ನ ಕೈಯಲ್ಲಿ ಶತ್ರು ಸತ್ತರೆ ಅವನ ಸಂಪತ್ತುಗಳನ್ನನುಭ ವಿಸಬಹುದು. ಇವೆರಡೂ ಶೂರರಿಗೆ ಉತ್ತಮಗುಣಗಳು. ಆದಕಾ ರಣ ಇದು ನನಗೆ ಯುದ್ಧ ಕಾಲವೆಂದು ಸಂಜೀವಕನು ನುಡಿದನು, He who opposes one stronger than himself is defeated, The Ilark and the Sea. ಅದನ್ನು ಕೇಳಿ ದಮನಕನು -ರಣಮರಣವು ಒಳ್ಳೆಯದೆಂದು ಅಸಾಧ್ಯವಾದ ಶತ್ರುಬಲದ ಮೇಲೆ ಬೀಳಬಹುದೇ? ಶತ್ರುವಿನ ಪರಾಕ್ಕೆ ಮವನ್ನ ರಿಯದೆ ಯಾವನು ವಿರೋಧಿಸುವನೋ ಅವನು ಅಪಜಯವನ್ನು ಹೊಂದುವನು. ಪೂರ್ವದಲ್ಲಿ ಟಿಟ್ಟಿಭದಿಂದ ಸಮುದ್ರವು ಅಪಜಯ ವನ್ನು ಹೊಂದಲಿಲ್ಲವೆ ?-ಎನಲು, ಸಂಜೀವಕನು- ಆ ಕಥೆಯನ್ನು ನನಗೆ ತಿಳಿಸು ಎಂದನು. ದಮನಕನು ಹೇಳುತ್ತಾನೆ. ಸಮುದ್ರ ತೀರದಲ್ಲಿ ಒಂದು ಮರದ ಮೇಲೆ ಟಿಟ್ಟಿಭಪಕ್ಷಿಯು ಗೂಡು ಕಟ್ಟಿಕೊಂಡು ತನ್ನ ಹೆಂಡತಿಯೊಂದಿಗೆ ಒಕ್ಕಲಿರುತ್ತಿದ್ದಿತು. ಕೆಲವು ದಿವಸಕ್ಕೆ ಅದರ ಹೆಂಡತಿ ಬಸರಾಯಿತು. ಒಂದು ದಿನ ಅದು ಚಿಂತೆ ದೊಡಗೂಡಿರುವುದನ್ನು ಕಂಡು ಗಂಡುಹಕ್ಕಿ-- ನಿನಗೇನು ಬೇಕೋ ಹೇಳು, ತಂದು ಕೊಡುತ್ತೇನೆ ಎಂದಿತು. ಆಗ ಹೆಣ್ಣು ಹಕ್ಕಿಯು ನನಗೆ ಯಾವ ವಸ್ತುವಿನ ಮೇಲೂ ಮನಸ್ಸಿಲ್ಲ. ನನ್ನ ಮನಸ್ಸಿನಲ್ಲಿ ಒಂದು ವ್ಯಾಕುಲವು ಹುಟ್ಟಿದೆ. ಅವನ್ನು ನಿವಾರಣೆ ಮಾಡಬೇಕು. ಅದೇನೆಂದರೆ, ಪರ್ವದಿನದಲ್ಲಿ ಸಮುದ್ರನು ಉಕ್ಕಿಬರುವನು; ಆಗ ನಾವು ಗೂಡು ಕಟ್ಟಿಕೊಂಡಿರುವ ಗಿಡದ ಕೊಂಬೆಯನ್ನು ತಾಕುವ ಹಾಗೆ ಆಲೆ ಗಳು ಬರುವುವು. ನಾನಿಟ್ಟ ಮೊಟ್ಟೆಗಳು ಆಗ ನೀರಿನ ಪಾಲಾಗುವುವು. ಆದುದರಿಂದ ನಾವೀಗಲೆ ಎಲ್ಲಾದರೂ ಒಂದು ಸ್ಥಳವನ್ನು ನೋಡಿಕೊಂಡು