ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

145

ಕಾಣಸಿಗುವ ವ್ಯಕ್ತಿಯಲ್ಲ. 'ನನ್ನಲ್ಲೂ ಒಳ್ಳೆಯ ಗುಣಗಳಿವೆ. ಪರೀಕ್ಷಿಸಿ ನೋಡಿ'
ಎಂದು ಆತ ಹೇಳಬಹುದು. ಪ್ರಪಂಚವನ್ನೆಲ್ಲ ಪ್ರಯೋಗ ಶಾಲೆಯಾಗಿ ಮಾಡಿ,
ಕಾಣಬರುವ ಅದ್ಭುತ ಸೃಷ್ಟಿಗಳನ್ನೆಲ್ಲ ಅಭ್ಯಸಿಸುವುದು ಸ್ವಾರಸ್ಯದ ಕೆಲಸವೇನೋ
ಹೌದು, ಆದರೆ ಅದನ್ನು ಇತರರು ಮಾಡಬಹುದೇ ಹೊರತು, ಆ ವ್ಯಕ್ತಿಯ
ಸಂಬಂಧಿಕರಲ್ಲ. ಉದಾಹರಣೆಗೆ ಸುನಂದಾ. ಪುಟ್ಟಣ್ಣನಂತಹ ಗಂಡ ದೊರೆತಾಗ,
ಏನನ್ನು ತಾನೆ ಆಕೆ ಮಾಡಬಲ್ಲಳು?
ವಸ್ತುಸ್ಥಿತಿಯಲ್ಲಿ ಸಾಮಾನ್ಯವಾಗಿ ಹೆಣ್ಣು, 'ಹೆಣ್ಣಿನಬಾಳು ಕಣ್ಣೀರೇ' ಎಂದು
ನಂಬಿ, ಇದೆಲ್ಲಾ ತನ್ನ ಪೂರ್ವಜನ್ಮದ ಕರ್ಮ ಫಲ-ಎನ್ನುವುದು ಪದ್ಧತಿ. ಹಾಗೆ ಹೇಳಿ,
ಆಕೆ ಬದುಕಲ್ಲದ ಬದುಕನ್ನು ಬಾಳಿದರೆ, ಸತ್ತವಳಾಗಿ ಬದುಕಿದರೆ, ಕೆಲವರು ಆಕೆಯನ್ನು
ದೇವತೆ ಎನ್ನಲೂಬಹುದು.
ಸುನಂದಾ ಅಂತಹ ದೇವತೆಯಲ್ಲ. ಆಕೆ ಮನುಷ್ಯಳು. ಬಲು ದೀರ್ಘಕಾಲ
ಅವಳು ಎಲ್ಲವನ್ನೂ ಸಹಿಸಿದಳು. ಸಹಿಸುವ ಸಾಮರ್ಥ್ಯವೂ ಇಲ್ಲ ಎನಿಸಿದಾಗ, ಈ
ಸಂಕಟದಿಂದ ಪಾರಾಗುವುದು ಹೇಗೆ?-ಎಂದು ಯೋಚಿಸಿದಳು. ಸಾವು ಒಂದು ಪರಿ
ಹಾರವಾಗಿ ತೋರಿತು. ಆದರೆ ಎಳೆಯ ಮಗುವಿನ ತಾಯಿ ಆ ಹಾದಿ ಹಿಡಿಯಲಿಲ್ಲ.
ಉಳಿದ ಹಾದಿ ಎಂದರೆ ಗಂಡನಿಂದ ಬೇರ್ಪಡುವುದು-ವಿವಾಹ ವಿಚ್ಛೇದನ. ಹಾಗೆ
ಸ್ವಾತಂತ್ರ ಸಂಪಾದಿಸುವ ಯೋಚನೆ ಆಕರ್ಷಣೀಯವಾಗಿತ್ತು. ಆದರೆ ಅದರ ಪರಿ
ಣಾಮದ ಕಲ್ಪನೆ ಏನೇನೂ ರಮ್ಯವಾಗಿರಲಿಲ್ಲ...
ಬಡ ಶ್ರಮಜೀವಿಯ ಹೆಂಡತಿ, ತನ್ನ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿ
ಕೊಂಡಳು. ಒಲ್ಲದ ಗಂಡನಿಂದ ಆಕೆ ಬೇರೆಯಾದಳು.
ಸಮಾಜದ ಏಣಿಯ ಮೇಲಣ ಹಂತದಲ್ಲಿದ್ದ ಶ್ರೀಮಂತ ಕುಮಾರಿಯ ಸುಲಭ
ವಾಗಿ ಗಂಡನಿಂದ ಬೇರೆಯಾದಳು-ಬೇರೆ ಕಾರಣಕ್ಕಾಗಿ.
ಆದರೆ ಅವರ ನಡುವಿದ್ದ ಸುನಂದೆಯ ಪಾಲಿಗೆ ಆ ಹಾದಿ ಕಲ್ಲು ಮುಳ್ಳುಗಳಿಂದ
ಕೂಡಿತ್ತು. ಅದನ್ನು ತುಳಿಯಲು ಆಕೆ ಯತ್ನಿಸಲಿಲ್ಲ. ಅದಕ್ಕೆ ಹಲವು ಕಾರಣ
ಗಳಿದ್ದುವು: ತನ್ನ ಕೈಗೂಸು; ಅವಿವಾಹಿತೆ ತಂಗಿಯ ಪ್ರಶ್ನೆ; ಸಾಮಾಜಿಕ ಭದ್ರತೆಯ
ಕೊರತೆ, ಗಂಡನ ಮನೆ ಬಿಟ್ಟು ಬೀದಿಗೆ ಬಂದರೆ ಆಕೆ ಹೋಗಬೇಕೆಲ್ಲಿಗೆ?
....'ತಾನು ಅಸಹಾಯಳಾಗಿ ಮಗುವನ್ನೆತ್ತಿಕೊಂಡು ಚಿಂದಿಸೀರೆಯುಟ್ಟು ಕೆದರಿದ
ಕೂದಲಿನೊಡನೆ ಬೀದಿ ಅಲೆಯುವ ಚಿತ್ರ'...
'ಆ ಯೋಚನೆಯಿಂದಲೆ ಸುನಂದೆಯ ಮೈ ಬೆವತಿತು.'
ಸುಖ ದಾಂಪತ್ಯವನ್ನು ಅನುಭವಿಸುತ್ತಿರುವ ನವಯುವತಿ ಕುಸುಮಾ ಹೊಸ
ವಿಚಾರಗಳುಳ್ಳ ವ್ಯಕ್ತಿ.
ಆಕೆಯ ದೃಷ್ಟಿಯಲ್ಲಿ-

19