ಪುಟ:ಪಾಲಿಗೆ ಬಂದ ಪಂಚಾಮೃತ.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

25

ಸುಮ್ಮನಾಗಿ, ತಾನೇ ಕೊಳಾಯಿ ತಿರುಗಿಸಿ ಬಿಸಿ ನೀರಿನ ಹಂಡೆಗೆ ತಣ್ಣೀರು ಸುರಿದ.
ಸುರಿದಮೇಲೆ ಬೆರಳು ಹಾಕಿದಾಗ ನೀರು ತಣ್ಣಗೆ ತೋರಿತು. ಬೆಪ್ಪನಾಗಿ ಅತ್ತಿತ್ತ
ನೋಡಿ ಪುಟ್ಟಣ್ಣ, ಆ ನೀರೇ ಸರಿಯೆಂದು ಸ್ನಾನಕ್ಕೆ ಸಿದ್ಧನಾದ.
ಸ್ನಾನ ಮಾಡುತಿದ್ದಾಗ ಪುಟ್ಟಣ್ಣ, ಹೃಷ್ಟಪುಷ್ಟವಾದ ತನ್ನ ಅಂಗಾಂಗಗಳನ್ನು
ನೋಡಿಕೊಂಡ. ಹೆಮ್ಮೆ ಎನ್ನಿಸಿತು. ಆ ಹೆಮ್ಮೆಯ ಹೊಗೆಯಲ್ಲೆ, 'ನನಗೆ ಆಕೆ
ತಕ್ಕವಳಲ್ಲ' ಎಂಬ ಮಾತು ಸುರುಳಿ ಸುರುಳಿಯಾಗಿ ರೂಪುಗೊಂಡಿತು.
ಆದರೂ ಮೈ ಒರೆಸಿಕೊಳ್ಳುತ್ತಿದ್ದಾಗ ಅವನಿಗೆನಿಸಿತು: ಏನಿದ್ದರೂ ತಾನಿನ್ನೂ
ಮಗುವೇ. ಹೆಂಡತಿಯನ್ನು ಆಳುವ ವಿಷಯದಲ್ಲಲ್ಲ; ತನ್ನ ಹೊಸ ಹವ್ಯಾಸವಾದ
ಇನ್ನೊಂದರಲ್ಲಿ. ತಾನು ಯಾವಾಗಲೂ ಅಷ್ಟೆ. ಮೊದಮೊದಲಿಗೆ ಎಲ್ಲಿಲ್ಲದ ಎಳೆತನ.
ಮೊದ ಮೊದಲಿಗೆಲ್ಲ ತನಗೇ ಸೋಲು.
__ಅಷ್ಟಕ್ಕೇ ಸುನಂದಾ, ತಾನು ಅಡ್ಡಹಾದಿ ಹಿಡಿದೆನೆಂದು ಭಾವಿಸಿದಳೋ
ಏನೋ? ಹೆಣ್ಣು ಬುದ್ಧಿ ಎಷ್ಟೆಂದರೂ ಅಷ್ಟೇ. ಆದರೆ, ನಿರೀಕ್ಷಿಸಿದ್ದುದು ಕೈಗೆಟಕದೆ
ಇದ್ದಾಗ, ಒಮ್ಮೊಮ್ಮೆ ತನ್ನ ಮನಸ್ಸಿನಲ್ಲೂ ಕಸಿವಿಸಿಯಾದುದಿತ್ತು. ಹಾಗೆ ಕಸಿವಿಸಿ
ಯಾಗಲು ಕಾರಣ ಮಾತ್ರ ಸ್ಪಷ್ಟ. ಅದು ತನ್ನ ದೌರ್ಬಲ್ಯ. ತಾನೆಂದಿಗೂ ದುರ್ಬಲ
ನಾಗಬಾರದು. ತಾನು ಆಳಬೇಕು. ತನಗೆ ಬೇಕಾದ ಪ್ರತಿಯೊಂದೂ ತನ್ನಿಚ್ಛೆಗನು
ಸಾರವಾಗಿಯೇ ನಡೆಯಬೇಕು. ತಾನು ಅಸಹಾಯನಾದ ಬಡವನಾಗಬಾರದು; ದರ್ಪ
ವುಳ್ಳ ಧನಿಕನಾಗಬೇಕು...
... ಸ್ನಾನದ ಮನೆಯಿಂದ ಪುಟ್ಟಣ್ಣ ಕೊಠಡಿಯತ್ತ ನಡೆದ. ಮಗು ತೊಟ್ಟಿಲಲ್ಲಿ
ಎದ್ದು ಕುಳಿತು ಅಳುತಿತ್ತು. ಅದನ್ನು ನೋಡಿಯೂ ನೋಡದವನಂತೆ ಪುಟ್ಟಣ್ಣ
ಕೊಠಡಿ ಸೇರಿದ.

****

ಹಿಂದಿನ ರಾತ್ರೆ ಗಂಡ ಹೇಳಿದ್ದ: “ನಾಳೆ ಬರೀ ಬೇಳೆ ಸಾರು ಮಾಡು.”
ಹಿಂದೆ ಸಾಮಾನ್ಯವಾಗಿ ಸುನಂದಾ ಬೆಳಗ್ಗೆ ಗಂಡನ ಕೊಠಡಿಯ ಬಾಗಿಲಲ್ಲಿ
ನಿಂತು, “ಅಡುಗೆ ಏನು ಮಾಡ್ಲಿ?” ಎಂದು ಕೇಳುತ್ತಿದ್ದಳು. ಆದರೆ ಆ ಪ್ರಶ್ನೆಗೆ ಹಲವು
ಸಾರೆ ಆಕೆಗೆ ದೊರೆಯುತ್ತಿದ್ದ ಉತ್ತರ ಒಂದೇ: “ಪದೇ ಪದೇ ನನ್ನ ಕೇಳ್ಬೇಡ! ಏನಿ
ದೆಯೋ ಅದನ್ನ ಮಾಡು!”
ಈ ದಿನ ಅಂತಹ ಪ್ರಶ್ನೆ ಕೇಳಬೇಕಾದ್ದೇ ಇರಲಿಲ್ಲ. ಏನಿದೆಯೋ ಅದನ್ನು
ಮಾಡುವುದು-ಇದ್ದ ಬೇಳೆಯನ್ನು ಬೇಯಿಸಿ ಸಾರು ಮಾಡುವುದು.
ಅದು ಆ ದಿನಕ್ಕಾಯಿತು. ಆದರೆ ನಾಳೆಗೆ? ಈ ದಿನ ತರಕಾರಿಯ ಅಭಾವ
ವಾದರೆ ನಾಳೆ ಅಕ್ಕಿಯ ಸರದಿ....
ಬೇರೆ ರೀತಿಯಲ್ಲಿ, ಆ ನಾಳೆಗಿಂತಲೂ ಗಭೀರತರವಾದದ್ದು 'ಇವತ್ತು.' ಇದೇ

4