ಪುಟ:ಪಾಲಿಗೆ ಬಂದ ಪಂಚಾಮೃತ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

41

ಅಧ್ಯಾಯದಲ್ಲಿ ಒಂದಾದರೂ ಒಳ್ಳೆಯ ಸವಿ ಮಾತು? ತನಗಾಗಿ ಒಂದು ಕುಚ್ಚು ಹೂ?
ಸೀರೆ? ಸರಸಸಲ್ಲಾಪ?
ಎಲ್ಲರೂ ಹೇಳುತ್ತಿದ್ದರು- ಹೆಣ್ಣಾಗಿ ಹುಟ್ಟಬಾರದೆಂದು. ಆದರೆ ಉದಾತ್ತ
ಚರಿತೆಯ ಸಾಧಕ ಸ್ತ್ರೀಯರ ವಿಷಯ ಓದುತ್ತ, ಸ್ತ್ರೀ ಜನ್ಮದ ಬಗೆಗೆ ಸುನಂದಾ ಹೆಚ್ಚು
ಆದರ ತಾಳಿದ್ದಳು. ಆದರೆ ಈಗ ಅನಿಸುತ್ತಿತ್ತು: ತಲೆ ತಲಾಂತರಗಳಿಂದ ಬಳಕೆ
ಯಲ್ಲಿದ್ದ ಆ ಮಾತೇ ನಿಜವೇನೋ? ಹೆಣ್ಣಾಗಿ ಹುಟ್ಟಬಾರದು, ಹೆಣ್ಣು ಅಬಲೆ—
ಹೆಣ್ಣಿನ ಬಾಳು ಕಣ್ಣೀರು....
ಆದರೆ ರಾಧಮ್ಮ ಇದನ್ನು ಒಪ್ಪುವರೋ ಇಲ್ಲವೋ?
...ಸುನಂದಾ ತನ್ನ ಹಾಸಿಗೆ ಬಿಡಿಸಿದಳು. ಮಗು ನಿದ್ರಿಸಿದ್ದರೂ ಸುಮ್ಮನೆ
ತೊಟ್ಟಿಲನ್ನು ಎರಡು ಸಾರೆ ಮೆಲ್ಲನೆ ತೂಗಿದಳು. ಹಾಸಿಗೆಯ ಮೇಲೆ ಮಲಗಿಕೊಂಡು
ತಾರಸಿ ಛಾವಣಿಯನ್ನು ನೋಡಿದಳು....
ಎಂದಿನಂತೆಯೇ ಇದೂ ಒಂದು ದಿನ. ನಿನ್ನೆಯಂತೆಯೇ ಮತ್ತೊಂದು ಸಂಜೆ...
ಸುನಂದೆಯ ಮನಸ್ಸಿನಲ್ಲೊಂದು ಪ್ರಶ್ನೆ ಮೂಡಿ, ಬಲವಾಗಿ ನಿಂತು, ಆಕೆ
ಯನ್ನು ಕಾಡಿತು:
'ರಾಧಮ್ಮನಿಗೆ ಹೇಳಿಬಿಡಲೆ? ತನ್ನ ಹೃದಯದ ಸಂಕಟವನ್ನು ಆಕೆಯೊಡನೆ
ತೋಡಿಕೊಳ್ಳಲೆ? ಆಕೆ ಅನುಭವಿ. ಖಂಡಿತ ತನಗೆ ಸಹಾಯ ಮಾಡಬಹುದು. ಹೀಗಿ
ರುತ್ತ, ಹೇಳುವುದರಲ್ಲಿ ತಪ್ಪೇನು?'
ಬಹಳ ಹೊತ್ತು ಯೋಚಿಸಿ ಯೋಚಿಸಿ ಸುನಂದಾ 'ನಾಳೆಯ ದಿನ ಹೇಳುವುದೇ
ಸರಿ' ಎಂಬ ತೀರ್ಮಾನಕ್ಕೆ ಬಂದಳು.
ಹಾಗೆ ತೀರ್ಮಾನಿಸಿದ ಮೇಲೆ ಮನಸ್ಸಿಗೆ ಸ್ವಲ್ಪ ಹಾಯೆನಿಸಿತು.
ಇಷ್ಟೊಂದು ಓದಿರುವ ತಿಳಿದಿರುವ ತಾನು, ಹೋರಾಟವನ್ನು ಬಿಟ್ಟು ಕೊಡ
ಬಾರದು. ತನ್ನ ಸಂಸಾರ ಛಿದ್ರವಾಗದಂತೆ ತಾನು ನೋಡಿಕೊಳ್ಳಬೇಕು. ಗಂಡನನ್ನು
ಸರಿ ಹಾದಿಗೆ ತರಬೇಕು. ತಾನು ಜಯಿಸಬೇಕು...ಜಯಿಸಲೇ ಬೇಕು....
....ಹೊರ ಹೋಗಿದ್ದ ಗಂಡ ಬರುವವರೆಗೂ ಕಾದಿರಲಾರದೆ ಸುನಂದಾ
ವಿಶ್ರಾಂತಿಗೆಂದು ಕಣ್ಣು ಮುಚ್ಚಿಕೊಂಡಳು. ದುಡಿದು ಬಸವಳಿದಿದ್ದ ಮೆದುಳು ಅದನ್ನೇ
ಇದಿರು ನೋಡುತ್ತಿತ್ತು. ಆಕೆಗೆ ಸುಲಭವಾಗಿ ಜೊಂಪು ಹತ್ತಿತು.

ಮಾರನೆಯ ದಿನ ರಾಧಮ್ಮನೊಡನೆ ಮಾತನಾಡುವುದು ಸಾಧ್ಯವಾಗಲಿಲ್ಲ.
ಮೂರನೆಯ ದಿನ ರಾಮಯ್ಯನ ತಂಗಿ ಇಬ್ಬರು ಮಕ್ಕಳೊಡನೆ ಹಳ್ಳಿಯಿಂದ ಬಂದು

6