ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ{} ಮಾರ್ಗಶಿರ) ಪೂರ್ಣಕಲಾ ೧೩೩ ••••••••••••••••••••••••••

  • * * * * * * * *

ನಿಶೆ ಗಾಬರಿಯಿಂದ ಇದೇಕೆ, ಹೀಗೆ ಕೋಪಿಸುವೆ? ನಾನೇನು ಮಾಡಿದೆ? ನನ್ನಿಂದಾದ ಅಪರಾಧವೇನು?” ಯುವತಿ ಬಲ್ಲೆ-ಬಲ್ಲೆ! ನೀನೂ ಅವನೂ ಒಂದಾಗಿದ್ದೀರೆಂದು ಚನ್ನಾಗಿ ಬಿ. ನಿಶೆಯ ಯುವತಿಯ ಮಾತಿಗೆ ಳುತ್ತ ನಿಂತಳು. ಅಷ್ಟರಲ್ಲಿ ಮನೆಯ ಒಳಗಿನಿಂದ ಸುಮಾರು ೬೦ ವರ್ಷದ ಮುದುಕಿಯೊಬ್ಬಳು ಬಂದು ಯುವತಿಯ ಮಂಕದಬಳಿಯಲ್ಲಿ ನಿಂತು ಪ್ರೀತಿ ವ್ಯಂಜಕ ಸ್ವರ ದಿಂದ “ಮಗು! ರಕ್ತಾಕ್ಷಿ! ಹೇಗಿದ್ದೀಯೆ? ರಕ್ತಾಕ್ಷಿ-“ಇನ್ನು ಹೇಗಿರುವೆನಜ್ಜಿ? ಸಾಯದೆ ಇದ್ದೇನೆ!” ಅಜ್ಜಿ-ಚಃ ! ಹಾಗೆನ್ನ ಬೇಡ! ಮಗು ? ನಿನಗೇನಾಗಿದೆ ಹೇಳು? | ರಕ್ತಾಕ್ಷಿ-ನನಗೇನಾದರೂ ಆದರೆ ನಿನಗೆ ಸಂತೋಷ. ಹಾಳುದೈವವು ಇನ್ನೂ ಅಷ್ಟು ಮಾಡದೆ ಇದೆ. ಅಜ್ಜಿ - ನಿಶೆಯನ್ನು ಕುರಿತು-'ಏನೇ-ಸಿತೆ ; ಇವಳೇಕೆ ಹೀಗಿದ್ದಾಳೆ? ನಿಶೆ ಏಕೆಂದರೆ ಅವಳಿಗೆ ಕೋಪ! ಅಜ್ಜಿ --ಕೋಪವೇಕೆ? ಯಾರಮೇಲೆ? ನಿಶೆ ಅಷ್ಟೇ! ಅವನಾವನೋ ದಿನವೂ ಬರುತ್ತಿದ್ದವನು ನಿನ್ನೆಯಿಂದ ಬರಲಿಲ್ಲವೆಂದೂ, ಅದಕ್ಕೆ ನಾನೇ ಕಾರಣಳೆಂದೂ-ನನ್ನ ಮೇಲೆ ರೇಗಿದ್ದಾಳೆ. ಅಜ್ಜಿ ಕೋಪದಿಂದ-'ನಿನಗಿದೇ ಹಗರಣವಾಯಿತೇ-ರಕ್ತಾಕ್ಷಿ! ದಿನವೂ ನಿನಗೀ ಹಾಡೇ ಹಾಡಾಗಿದೆಯೇ? ಅದಾವ ಗಂಟು ಕಳ್ಳನನ್ನು ಕುರಿತು ಅಳುತ್ತಿದ್ದೀಯೆ?'