ನಳಸಂ|| ಮಾರ್ಗಶಿರ ಪೂರ್ಣಕಲಾ ೨೨ M ಧರಿಸಿ ದೇಶಯಾತ್ರೆಗೆ ಹೊರಟಿರುವದಾಗಿ ಅವನಿಂದ ಊರು, ತಿಥಿ, ವಾರಗಳೊಂದೂ ತಿಳಿಯದ ಒಂದು ಪತ್ರವು ನನಗೆ ಈ ದಿನವೇ ಬಂದಿದೆ. ಕಲಾ-(ಪ್ರಭಾಕರನ ಕಡೆಗೆ ತಿರುಗಿ)-ಮಿತ್ರ! ನೀನು ಇದಿರುಗೊಳ್ಳ ಲಿಕ್ಕೆಂದು ಹೋಗಿದ್ದೆಯಲ್ಲ, ಆಯಿತೇ ಪ್ರಭಾ-ಇಲ್ಲ, ಅವನು ಅಷ್ಟರಲ್ಲಿ ರೈಲಿನಿಂದ ಬಂದು ಮತ್ತೆಲ್ಲಿಗೋ ಹೋಗಿದ್ದನು. ಮಧು-ಇದಿರಿಗೊಳ್ಳುವುದಾರನ್ನು ? ಪ್ರಭಾ-ನಮ್ಮ ರಸಿಕಾಗ್ರೇಸರ ಚಕ್ರವರ್ತಿಯನ್ನು ! ಮಧು-ಹಾಗೆಂದರೆ ಯಾರೆಂಬುದು ತಿಳಿಯಲಿಲ್ಲ. ಪ್ರಭಾ-ಮತ್ತಾರು ? ನಮ್ಮ ಬೃಹನಕುಮಾರನೇ. “ಆಗಲಿ ಆಗಲಿ, ನಾನೇ ರಸಿಕಾಗ್ರೇಸರ ಚಕ್ರವರ್ತಿ ! ಚಕ್ರವರ್ತಿಗೆ ಇಷ್ಟು ಮಟ್ಟಿಗೆ ಸನ್ಮಾನವಾಯಿತಲ್ಲ!! ಭೇಷ್!” ಹೊರಗಿನಿಂದ ಹೊರಟುಬಂದ ಉತ್ತರದಿಂದ ಕುಳಿತಿದ್ದವರೆ ಲ್ಲರೂ ಬೆಜ್ಜರಗೊಂಡು ಸುತ್ತಲೂ ನೋಡಿದರು. ಯಾರೂ ಕಾಣಲಿಲ್ಲ. ಪ್ರಭಾಕರನು ತಲೆದೂಗಿ ನಕ್ಕು 'ಆಗಲಿ, ರಸಿಕಾಗ್ರೇಸರನೆಂದರೆ ಸಾಲದು. ತಂತ್ರಶಿರೋಮಣಿಯೆನ್ನಿ ಸಬೇಕೆಂದಲ್ಲವೆ ಅಭಿಮತವು' ಎಂದು ಹೇಳುತ್ತ, ಎದ್ದು ಬಂದು ಕಿರುಮನೆಯ ಹೊರಗಡೆಗೆ ಬಂದು ನಾಲ್ಕು ಕಡೆಯನ್ನೂ ನೋಡಿದನು; ಒಂದು ಕಂಬದ ಮರೆಯಲ್ಲಿ ನಿಂತಿದ್ದ ಮೋಜುಗಾರ ತರುಣನನ್ನು ನೋಡಿದನು, ತರುಣನು ಇದೇ ತಲೆಯನ್ನು ಚನ್ನಾಗಿನುಣ್ಣಗೆ ಬಾಚಿ, ಓರೆ ಬೈತಲೆಯನ್ನು ತಿದ್ದಿ, ಹಣೆಗೆ ಹುಬ್ಬಿನ ನಡುವೆ ಸಣ್ಣ ಸಾದಿನ ಬಟ್ಟಿರಿಸಿಕೊಂಡು, ತಾಂಬೂಲರಾಗದಿಂದ ತುಟಿಗಳನ್ನು ರಂಜನಗೊಳಿಸಿಕೊಂಡಿದ್ದನಲ್ಲದೆ ಬಲಗಯ್ಯಲ್ಲಿ ಸಣ್ಣಗಿರುವ ಬೆತ್ತವನ್ನೂ,
ಪುಟ:ಪೂರ್ಣಕಲಾ.djvu/೨೩೯
ಗೋಚರ