ಲಸಂ|| ಮಾರ್ಗಶಿರ) ಪೂರ್ಣಕಲಾ ೨೨೩ ಭೂತಿಯನ್ನು ಪ್ರದರ್ಶಿಸಲು ಬಂದಿರುವರು; (ಬೃಹನನ ಕಡೆ ತಿರುಗಿ) ಏಕೆ ನಿಂತಿರುವಿರಿ ? ಸಾಹೇಬರೇ ? ಕುಳಿತುಕೊಳ್ಳ ಲು ಇದು ಸರಿಯಾದ ಸ್ಥಾನವಲ್ಲವೆ ? ಆಥವಾ 'ಇವರಾರೂ ಸಮಾನ ಪಾತ್ರರಲ್ಲವೊ ? ಬೃಹನ-ಕೊರಳು ಕೊಂಕಿಸಿ-ಹಾಗೆಂದೇ ಹೇಳು, ಬಾಧಕವೇನು ? ಸಮಾನ ಪಾತ್ರರಲ್ಲವೆಂದು ಹೇಳಬೇಕೆ ? ನೀವು ಶುದ್ಧ ಬ್ರಹ್ಮ ಚಾರಿಗಳು, ನಾನು ಬ್ರಹ್ಮ ಚರವ್ರತದಿಂದ ಕೃತಸಾ ತನಾಗಿ ಮುಂದೆ ಬಂದಿರುವೆನು, ಅಸ್ಥಾನವೆಂಬುದಕ್ಕೆ ಕೂಡ ಉತ್ತರ ಎಲ್ಲದಿಲ್ಲ, ಅದೇನೆಂದೆಯೊ ? ವೇಳ, ಗುಣ, ಪಾತ್ರ, ಸುತ್ತ ಮುತ್ತಲ ಸ್ಥಿತಿಗಳನ್ನು ನೋಡದೆ ಮಂಚದ ಮೇಲೆ ಕುಳಿತು ಕೊಂಡೇನು ಫಲ ? ಕುಮುದಮಿತ್ರ-ಬೃಹತೈನ ! ತಡೆದುಹೇಳು, ನಾಲಿಗೆಯನ್ನು ಅಷ್ಟು ಸಡಲಿಸಿ ಬಿಡಬೇಡ, ಬೃಹ-ನಾಲಿಗೆಯನ್ನು ತಡೆಯಲೇಕೆ ಕುಮುದ ? ಅಂತಹ ಹಂದೆ ತನ ವು ನನಗೀ ಜನ್ನ ನಲ್ಲಿಯೇ ಬರುವಂತಿಲ್ಲ. ಅದರಲ್ಲಿ ಪ್ರಭಾಕರ! ನೀನೇನು ಈಗಾಗಲೇ ಒಂದು ತೊಡಕಿಗೆ ಬಿದ್ದೆಯಂತೆ ! ಅದೆಂ ತಹುದು ? ಕಾಡುಬಳ್ಳಿಯದೊ ! ಅಥವಾ ಚಿನ್ನ ಬೆಳ್ಳಿಯದೊ ? ಪ್ರಭಾ-ಚಿನ್ನ ಬೆಳ್ಳಿಯವಾದರೆ ಅವಕ್ಕೆ ಕಳ್ಳಕಾಕರ, ಪುಂಡು ಪೋಟರ ಭಯವುಂಟು, ಕಾಡುಬಳ್ಳಿಗೆ ಭಯವೇ ಇಲ್ಲ, ನನ್ನ ತೊಡಕು, ಮನೋಜಯನಂದನದಲ್ಲಿ, ನಿರ್ಮಲಪ್ರದೇಶದಲ್ಲಿ, ವನಲಕ್ಷ್ಮಿ ಯು ಪ್ರೀತಿಪಾತ್ರವಾಗಿ ಬೆಳೆಯಿಸಿದ ಲತಾವಿಶೇಷವು. ಅದು ಕೂಡ, ಶ್ವೇಚ್ಛೆಯಿಂದ ತೊಡಕಿಕೊಳ್ಳಲಿಲ್ಲ. ವಿಧಿಪೂರ್ವಕ ವಾಗಿ ನಿರ್ಮಾಪಕರ ಆಜ್ಞಾನುಸಾರವಾಗಿ
ಪುಟ:ಪೂರ್ಣಕಲಾ.djvu/೨೪೨
ಗೋಚರ