ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|1/ಮಾರ್ಗಶಿರ ಪೂರ್ಣ ಕಲಾ ೨೨೯ rAAM ದಯಾದ್ | ಸರ್ವಾನಂದ ಪ್ರದಾತಾ ಹರಿಹರನಮಿತಃ ಪಾತುಮಾಂ ವಿಶ್ವಚಕ್ಷು 8 || ೫ ಶಾಂತಿನಿಕೇತನದಲ್ಲಿ ವಿಜಯೋತ್ಸವ, ಅರುಣೋದಯಸಮಯ, ಶಾಂತಿನಿಲಯದಲ್ಲಿ ಇಂದು ವಾರ್ಷಿ ಕೋತ್ಸವದ ವಿಜಯೋತ್ಸಾಹವನ್ನು ಸೂಚಿಸುವಂತೆ ನಿಲಯದ ಸುತ್ತು ಮುತ್ತಲೂ ತಳಿರು ತೋರಣ, ಬಾಳೆಯ ಕಂಬಗಳೂ, ಅಲ್ಲಲ್ಲಿಗೆ ವಿಜಯ ಪತಾಕೆಗಳೂ ಅಲಂಕೃತವಾಗಿವೆ. ಶಾಂತಿನಿಕೇತನದ ಶಾರದಾಸನದ, ವಿದ್ಯಾರ್ಥಿಮಂದಿರ, ಗುರುಭವನಗಳಲ್ಲೆಲ್ಲೆಲ್ಲಿಯೂ ಸಾರಣೆಕಾರಣೆ ಗಳೂ, ಮತ್ತು ವಿವಿಧ ರಂಗವಲ್ಲಿಗಳ ಚಿತ್ರಗಳೂ ಕಂಗೊಳಿಸುತ್ತಲಿವೆ. ವಾರ್ಷಿಕೋತ್ಸವದ ದಿನವಾದುದರಿಂದ ಇಂದು ನಿಲಯಾಧಿದೇವತೆಯಾದ ಶಾರದೆಗೆ ಅಭಿಷೇಕವು ನಡೆಯಬೇಕಾಗಿದೆ. ದೇವಿಗೆ ಅರುಣೋದಯಕ್ಕೆ ಅಭಿಷೇಕವು ನಡೆದು ಸೂರೆದ ಯಕ್ಕೆ ಸರಿಯಾಗಿ ಮಹಾಮಂಗಳಾರತಿಯು ನಡೆಯುವಂತೆ ನಿಶ್ಚಿತವಾ ಗಿದೆ. ಗುರುವರ ಭಾಸ್ಕರಾಚಾರೈರು ದೇವಿಯಮುಂದೆ ಧ್ಯಾನಾಸಕ ರಾಗಿ ಕುಳಿತಿರುವರು. ಗೀತಾಚಾರೈರು ದೇವಿಯನ್ನು ಅಭಿಷೇಕಕ್ಕಾಗಿ ಆಹ್ವಾನಪೂರ್ವಕವಾಗಿ ಕೀರ್ತಿಸುತ್ತಿರುವರು. ತಾರಾಕಾಂತರು ಅಭಿ ಷೇಕ ಮಹೋತ್ಸವದ ಮತ್ತು ಮುಂದಿನ ಉತ್ಸವದ ಕಾರ ಕಲಾಪಗಳಿ ಗಾಗಿ ಶಿಷ್ಯವರ್ಗವನ್ನು ತಕ್ಕಂತೆ ನಿಯೋಗಿಸುವ ಕಾರ್ ಗೌರವದಲ್ಲಿ ರುವರು, ವಿದ್ಯಾರ್ಥಿಗಳೆಲ್ಲರೂ ಗುರುಗಳ-ಮತ್ತು ಭಗವತಿಯ ಸೇವಾ ಕಾಠ್ಯದಲ್ಲಿ ಶ್ರದ್ಧಾಭಕ್ತಿಗೌರವವನ್ನಿರಿಸಿ ಜಾಗರೂಕತೆಯಿಂದ ತಮ್ಮ ತಮ್ಮ ಕಾಠ್ಯಗಳನ್ನು ನೆರವೇರಿಸುತ್ತಿರುವರು. ಕಲಾಧವ, ಅಕ್ಷಯಕ