೨೪೦ ಸತೀಹಿತೈಷಿಣೀ (ತ್ರೈಮಾಸಿಕ • • • • • • • • • • • • •••••• ಹಸ್ಥಾಶ್ರಮ ಸ್ವೀಕಾರಮಾಡಲು ನಿಮಗೆ ಇದೋ ಭಗವತಿಯು ಆಜ್ಞೆಯನ್ನು ಕೊಟ್ಟಿರುವಳು, ಕಲಾ-ಪೂಜ್ಯಪಾದರೆ! ಈ ದೀನನಿಗೆ ಮಾತಾಪಿತೃ ಬಂಧುಬಾಂಧವರೇ ಮೊದಲಾದ ಸಮಸ್ತರೂತಾವೇ ಆಗಿರುವಿರಿ, ಶ್ರೀ ಪಾದ ಸೇವೆಯೊಂದು ನಿರ೦ತರವೂ ಲಭಿಸುತ್ತಿದ್ದರೆ ಈ ದೀನನು ಈ ಪರವಾನಂದದ ಮುಂದೆ ಮತ್ತಾವ ಸುಖವನ್ನೂ ಅಪೇಕ್ಷಿಸು ವವನಾಗಿಲ್ಲ. ಭಾಸ್ಕರಾ-ವತ್ಸ ನಿನ್ನ ಗುರುಭಕ್ತಿಯು ಅನ್ಯಾದೃಶವಾದುದು ಮಾ ತ್ರವೇ ಅಲ್ಲ. ನಿನ್ನೀ ಮನೋನಿಗ್ರಹ ಸಾಮರ್ಥ್ಯವೂ ಸದಸದ್ವಿ, ವೇಚನೆಯ, ವಿದ್ಯಾರ್ಥಿಲಕ್ಷಣವೂ ಲೋಕಾದರಣೀಯಗಳಾ ಗಿರುವವು. ಈ ನಮ್ಮ ಶಾಂತಿನಿಕೇತನದ ವಿದ್ಯಾರ್ಥಿಗಳಲ್ಲೆಲ್ಲಾ ನೀನು ನಾಯಕರತ್ನ ದಂತೆ ಪ್ರಕಾಶಿಸುತ್ತಿರುವೆಯೆಂದೂ, 'ಇಲ್ಲಿಯ ನಿಯಮಗಳಿಗೂ ಅಧಿಕವಾದ ನಿಯಮದಿಂದ ನೀನು ನಿನ್ನ ಈ ವರೆಗಿನ ಗುರುಕುಲವಾಸವನ್ನು ಸಾಂಗಗೊಳಿಸಿ, ನಿನ್ನ ಸಹಾ ಧ್ಯಾಯಿಗಳ ಮತ್ತು ಆಚಾರರ ಮನಸ್ಸನ್ನು ನಿನ್ನದಾಗಿ ಮಾಡಿ ಕೊಳ್ಳುವವನಾದೆಯೆಂದೂ ತಿಳಿದು, ನಾನು ನಿನ್ನನ್ನು ಮನಃಪೂ ರ್ವಕವಾಗಿ ಆಶೀರ್ವದಿಸುವುದಲ್ಲದೆ, ಮುಂದೆ ಈ ನಿಕೇತನದ ಕಾರನಿರ್ವಾಹಕಸ್ಥಾನದಲ್ಲಿ ನಿನ್ನನ್ನು ನಿಯಮಿಸಬೇಕೆಂದಾಗಿ ರುವ ಭಗವರಣೆಯನ್ನು ನಿನಗಿದೋ ಸೂಚಿಸಿರುವೆನು, (ಎಲ್ಲ ರೂ ಕರತಾಡನ ಮಾಡಿದರು.) ಕುಮುದವಿತ್ರ-ಗುರುದೇವ ! ಮೇಲಿನ ತಮ್ಮ ಆಜ್ಞೆಯು ನಮಗೆ ಅನುಲ್ಲಂಘೋವು. ಆದರೂ ಶ್ರೀಪಾದ ಸನ್ನಿಧಾನದಲ್ಲಿ ಗೃಹಸ್ಥಾ ಶ್ರಮ ಸ್ವೀಕಾರದಲ್ಲಿ ಈಗಲೇ ನಮ್ಮನ್ನು ನಿರ್ಬಂಧಿಸಬಾರದೆಂ
ಪುಟ:ಪೂರ್ಣಕಲಾ.djvu/೨೬೦
ಗೋಚರ