b೪೨ ಸತೀಹಿತೈಷಿಣಿ (ಿ ಮಾಸಿಕ • 1, g/ ರುಗಿಒಂದು ತಮ್ಮ ಮುಂದಿನ ಕರ್ತವ್ಯವನ್ನು ಕೈಗೊಳ್ಳುವಂತೆ ಸೂಚಿಸಲು;- ಭಾಸ್ಕರಾಚಾದ್ಯರು--ಒಮ್ಮೆ ಸುತ್ತಲೂ ನೋಡಿ, ಬಳಿಕ ಮೇಲೆ ನೋಡಿ ಬಳಿಕ ಕೆಲವು ಹೊತ್ತು ಶಾರದಾದೇವಿಯ ಮುಖವನ್ನೇ ದೃಷ್ಟಿ ಸುತ್ತಿದ್ದು ಅನಂತರ ಶಿಷ್ಯವರ್ಗವನ್ನು ಕುರಿತು ಹೀಗೆ ನಿರೂ ಪಿಸಿದರು, “ ಸುಕುಮಾರರೇ ! ನೀವು ಈಗ ದೇಶಸಂಚಾರಕ್ಕೆ ಹೊರಟಿರು ಪರಿ, ನಿಮ್ಮ ಪ್ರಯತ್ನಕ್ಕೆ ಸರ್ವತೋಮುಖವಾಗಿ ಫಲಗಳುಂಟಾಗುವು ದರಲ್ಲಿ ಸಂಶಯವಿಲ್ಲ. ಹಾಗೆ ನೀವು ವಿಜಯೋತ್ಸಾಹದಿಂದ ಬಂದ ಬಳಿಕ ಇಲ್ಲಿ ನಿಮಗಾಗಿ ಕಾದಿರುವ ರತ್ನಗಳನ್ನೂ ನೀವು ಧಾರಣಮಾ ಡಬೇಕಾದುದು ಅತ್ಯಗತ್ಯವಾಗಿದೆ. ಈ ವಿಷಯದಲ್ಲಿ ನೀವು ಆತಂಕ ಪಡುವ ಕಾರಣವಿಲ್ಲ, ಆದ್ಯರಾದ ನಮಗೆ ಮಾತೃದೈವವೇ ಪರಮಪೂಜ್ಯ ವಸ್ತುವೆಂದು ನಮ್ಮ ಶಾಸ್ತ್ರಗಳು ಹೇಳುತ್ತಿರುವದರಿಂದ ಆ ಮಾತೃವಾಕ್ಯ ಪರಿಪಾಲನೆಗಾಗಿ ನಾವು ನಿಮ್ಮಲ್ಲಿ ಕಲಾಧವನಿಗೆ ಪೂಣ೯ ಕಲೆಯನ್ನೂ ಅಕ್ಷಯಕುಮಾರನಿಗೆ ಶಾರದೆಯನ್ನೂ ಸಹ ಧರ್ಮಚಾರಿಣಿಯರಾಗಿ ಮಾಡಲು ಪ್ರೇರಿತರಾಗಿರುವೆವು. ಮಧುಮಿತ್ರನಿಗೆ ಕುಮುದೆಯೂ ಸಹಧರ್ಮಣಿಯಾಗಲು ಅಂದೇ ನಿಶ್ಚಿತವಾಗಿರುವುದು. ಇನ್ನೂ ಕುಮುದಮಿತ್ರನಿಗೂ ಬೇರೆ ಕಡೆ ಗೊತ್ತಾಗಿಯೇ ಇರುವುದು. ನಮಗೆ ನಮ್ಮ ಮಾತೃವಾಕ್ಯವು ಹೇಗೆ ಮಾನ್ಯವೋ-ಹಾಗೆಯೇ ನಿಮಗೆ ನಮ್ಮ ಆಜ್ಞೆಯು ಅನುಲ್ಲಂಘನೀಯವಾಗಿರುವುದು, (ನೆರದೆದ್ದವರೆಲ್ಲರೂ ಮತ್ತೊಮ್ಮೆ ಕರತಾಡನ ಮಾಡಿದರು.) ಅಕ್ಷಯ ಕಲಾಧವರು ಮರುನುಡಿಯಿಲ್ಲದೆ ನಿಂತಿದ್ದರುಪ್ರಭಾಕರ-ಗುರುದೇವ ! ನಮ್ಮ ಸಹಾಧ್ಯಾಯಿಗಳಿಗೆ ದೇಶಯಾತ್ರೆ
ಪುಟ:ಪೂರ್ಣಕಲಾ.djvu/೨೬೨
ಗೋಚರ