________________
೧೨೦ ಪೈಗಂಬರ ಮಹಮ್ಮದನು ಮ್ಮದನು ಶವದ ಸಂಗಡ ಸ್ಮಶಾನಕ್ಕೆ ಹೋಗಿ, ಅನುಬಂಧಿಗಳು ಅದನ್ನು 'ಹೂಳುವ ವರೆಗೂ ಅಲ್ಲಿಯೇ ಇರುತ್ತಿದ್ದನು. ಈ ವಿಷಯದಲ್ಲಿ ಮಹ ಮ್ಮದೀಯರ ವರ್ತನೆಯು ಇಂದಿಗೂ ಶ್ರಾವ್ಯವಾಗಿದೆ. ಅತಿಥಿ ಸತ್ಕಾರವು ಪೌರ್ವಾತ್ಯರಲ್ಲಿ ವಂಶಾನುಗತವಾಗಿ ನಡೆದು ಬಂದಿರುವ ಗುಣ ಏಶೇಷ, ಮಹಮ್ಮದನು ನಡೆಸುತ್ತಿದ್ದ ಅತಿಥಿ - ಸತ್ಕಾರವು ಸುಪ್ರಸಿದ್ಧವಾದುದು. ಮಹಮ್ಮದನು ಅತಿಥಿ ಸತ್ಕಾರ ತಾನೇ ಸ್ವಂತವಾಗಿ ಅತಿಥಿಗಳ ಸೇವೆಯನ್ನು ಮಾಡುತ್ತ, ಮನೆಯಲ್ಲಿ ತಕ್ಕಷ್ಟು ಆಹಾರ ಪದಾರ್ಥ ಗಳಿಲ್ಲದಿದ್ದರೆ, ಇದ್ದುದನ್ನೆಲ್ಲ ಅತಿಥಿಗಳಿಗಾಗಿ ಉಪಯೋಗಿಸಿ, ತಾನೂ ತನ್ನ ಮನೆಯವರೆಲ್ಲರೂ ಉಪವಾಸವಿರುತ್ತಿದ್ದರು. ಅತಿಥಿ ಸತ್ಕಾರದಲ್ಲಿ ಮಹಮ್ಮದನು ಅನ್ಯ ಮತಸ್ಥರೆಂಬ ಭಾವನೆಯನ್ನು ಸ್ವಲ್ಪವೂ ಗಮನಕ್ಕೆ ತಂದುಕೊಳ್ಳುತ್ತಿರಲಿಲ್ಲ. ಒಂದು ಸಲ, ಅಬಿಸಿನಿಯಾ ದೇಶದಿಂದ ಬಂದಿದ್ದ ಕ್ರೈಸ್ತ ಮತದ ರಾಯಭಾರಿಗಳಿಗೆ ಮಹಮ್ಮದನು ತನ್ನ ಮನೆಯಲ್ಲಿಯೇ -ಅತ್ಯಾದರದಿಂದ ಉಪಚಾರ ಮಾಡಿ, ತಾನೇ ಅವರಿಗೆ ಊಟಕ್ಕೆ ಬಡಿಸಿ ಗೌರವಿಸಿದನು. ಅತಿಥಿಗಳೆಂಬ ದೃಷ್ಟಿಯಿಂದ ಅವನು ಹಾಗೆ ಉಪಚರಿ ಸಿದನೇ ಹೊರತು ಅವರು ರಾಜನ ಕಡೆಯವರೆಂಬ ಭಾವನೆಯಿಂದಲ್ಲ. ಒಂದು ಸಲ, ಕೇವಲ ಬಡವನಾದ ಅನ್ಯ ಮತೀಯ ಅತಿಥಿಯೊಬ್ಬನು ರಾತ್ರಿಯ ವೇಳೆ ಮಹಮ್ಮದನ ಮನೆಗೆ ಬಹಳ ಹಸಿದು ಬಂದನು. ಆಗ ಮಹಮ್ಮದನ ಮನೆಯಲ್ಲಿ ಅಡಿಗೆಯ ಪದಾರ್ಥಗಳೇ ಇಲ್ಲದಿದ್ದುದರಿಂದ ಅತಿಥಿಯ ಹಸಿವನ್ನು ಹೋಗಲಾಡಿಸುವುದಕ್ಕಾಗಿ, ಏಳು ಮೇಕೆಗಳ ಹಾಲನ್ನು ಕರೆದು ಅತಿಥಿಗೆ ಕೊಡಬೇಕಾಗಿ ಬಂದಿತು. ಇದರಿಂದ, ಮಹಮ್ಮದನಿಗೆ ಆ ರಾತ್ರಿ ಆಹಾರವೇ ಇಲ್ಲದಂತಾಯಿತು. ಮತ್ತೊಂದು ಸಲ ಒಂದು ವಿಚಿತ್ರವಾದ ಸಂಗತಿ ನಡೆಯಿತು: ಪಂಡಿತೋತ್ತಮನಾದ ಅಬೂ ಹುರೈ ಎಂಬಾತನೂ ಅವನ ಸಂಗಡಿಗರೂ ಹಸಿವಿನಿಂದ ಬಳಲಿ ಹೋಗಿದ್ದರು. ಆಹಾರಕ್ಕಾಗಿ ಇತರರನ್ನು ಕೇಳಲು ಆ ಪಂಡಿತನಿಗೆ ಸಂಕೋಚ ; ಕೇಳಿದಲ್ಲದೆ ಆ ದಿನ ಆಹಾರ ದೊರೆಯುವಂತಿರಲಿಲ್ಲ. ಆ ಸಮಯದಲ್ಲಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಅಬೂ ಬಕರನನ್ನು