ಪುಟ:ಪೈಗಂಬರ ಮಹಮ್ಮದನು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨೨ ಪೈಗಂಬರ ಮಹಮ್ಮದನು ಮನುಷ್ಯನನ್ನು ಕರೆತಂದರು. ಆ ಮನುಷ್ಯನು ಅರಬ್ಬಿ ದೇಶಕ್ಕೆಲ್ಲ ಪ್ರಭು ಸಮಾನನಾಗಿದ್ದ ಮಹಮ್ಮದನನ್ನು ನೋಡಿ ಭಯದಿಂದ ನಡುಗಲಾರಂಭಿಸಿದನು. ಅವನನ್ನು ಧೈರ್ಯದಿಂದ ನಿಂತು ಮಾತನಾಡು ವಂತೆ ಮಾಡಲು ಮಹಮ್ಮದನಿಗೆ ಆಸೆಯಾಗಿ, “ಅಯಾ ! ಹೀಗೆ ಏತಕ್ಕೆ ನಡುಗುವೆ ? ನಾನೇನು ದೊರೆಯೇನಯಾ ? ನಾನು ಕೇವಲ ದರಿದ್ರಳಾದ ಸಾಮಾನ್ಯ ಹೆಂಗುಸಿನ ಮಗ, ನೀನು ಧೈರ್ಯವಾಗಿ ನಿಂತು ಮಾತನಾಡಯ್ಯಾ ಎಂದು ಹೇಳಿದನಂತೆ. ಮಹಮ್ಮದನು ಯಾಚನಾರ್ಥಿಗಳಾಗಿ ತನ್ನಲ್ಲಿಗೆ ಬಂದವರ ಇಷ್ಟಾರ್ಥವನ್ನು ನೆರವೇರಿಸುತ್ತಿದ್ದನಾದರೂ, ಕೆಲಸ ಮಾಡಲು ಶಕ್ತಿ ರಾಗಿದ್ದವರು ಭಿಕ್ಷೆ ಬೇಡಿ ಜೀವಿಸುವುದು ಪಾಪ ಯಾಚನಾ ವೃತ್ತಿಯಲ್ಲಿ ಕಾರ್ಯವೆಂದು ಭಾವಿಸಿದ್ದನು. ಗಟ್ಟಿಮುಟ್ಟಾಗಿದ್ದ ಅನಾದರ ವರು ಭಿಕ್ಷಕ್ಕೆ ಬಂದರೆ ಮಹಮ್ಮದನಿಗೆ ತಾಳ್ಮೆ ತಪ್ಪಿ ಅವರನ್ನು ಗದರಿಸಿ, ಕಾಡಿಗೆ ಹೋಗಿ ಸೌದೆಯನ್ನು ಹೊತ್ತು ತಂದು ಮಾರಿ ಅದರಿಂದ ಜೀವಿಸುವ ಮನುಷ್ಯನು, ವ್ಯರ್ಥ ಕಾಲಕ್ಷೇಪ ಮಾಡಿ, ಜೀವನಕ್ಕಾಗಿ ಭಿಕ್ಷೆ ಬೇಡುವವನಿಗಿಂತಲೂ ಕೋಟಿ ಪಾಲು ಮೇಲು” ಎಂದು ಹೇಳುತ್ತಿದ್ದನು. ಒಮ್ಮೆ, ಒಬ್ಬ ಭಿಕ್ಷುಕನು ಮಹಮ್ಮದನ ಬಳಿಗೆ ಯಾಚನೆಗೆ ಬಂದಾಗ ಮಹಮ್ಮದನು, ನಿನಗೆ ಏನೂ ಗತಿಯಿಲ್ಲವೆ? ನಿನ್ನಲ್ಲಿ ಯಾವ ವಸ್ತುವೂ ಇಲ್ಲವೆ ? ಎಂದು ಕೇಳಲು, ಅವನ ಮನೆಯಲ್ಲಿ ಒಂದು ಪಾತ್ರೆಯ ಒಂದು ಹಾಸಿಗೆಯ ಇದ್ದುದು ತಿಳಿಯಬಂದಿತು. ಮಹಮ್ಮದನು ಅವನ್ನು ತರಿಸಿ ಹೆಚ್ಚು ಬೆಲೆಗೆ ಅವನ್ನು ಕೊಂಡುಕೊಂಡು ಆ ಬಡವನಿಗೆ ಸಹಾಯ ಮಾಡುವಂತೆ ತನ್ನ ಬಳಿಯಲ್ಲಿದ್ದವರನ್ನು ಕೇಳಿಕೊಂಡನು. ಆ ಸಾಮಾನುಗಳ ಬೆಲೆಯ ನಾಲೆ ದರಷ್ಟು ಮೊತ್ತಕ್ಕೆ ಅವನ್ನು ಹರಾಜು ಮಾಡಿ ಮಹಮ್ಮದನು ಆ ಹಣವನ್ನು ಆ ಭಿಕ್ಷುಕನ ಕೈಯಲ್ಲಿಟ್ಟು, “ಈ ಹಣದಲ್ಲಿ ಸ್ವಲ್ಪವನ್ನು ಉಪಯೋಗಿಸಿಕೊಂಡು ಆಹಾರ ವಸ್ತುಗಳನ್ನು ಕೊಂಡುಕೊ ; ಉಳಿದು ದರಲ್ಲಿ ದೊಡ್ಡದೊಂದು ಹಗ್ಗವನ್ನು ಕೊಂಡುಕೊಂಡು, ಕಾಡಿನಿಂದ ಸೌದೆಯ ಹೊರೆಯನ್ನು ಹೊತ್ತು ತಂದು ಮಾರು ; ಈ ವ್ಯಾಪಾರದಲ್ಲಿ