ಪುಟ:ಪೈಗಂಬರ ಮಹಮ್ಮದನು.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಮಾತ್ರ ಮಹಮ್ಮದನಿಗೆ ಎಂದಿಗೂ ಒಪ್ಪಿಗೆಯಾಗುತ್ತಿರಲಿಲ್ಲ. ಇದಕ್ಕೆ ಒಂದೆರಡು ನಿದರ್ಶನಗಳನ್ನು ಕೊಡುವೆವು: ಮಹಮ್ಮದನಿಗೆ ಪರಮಾನ್ಯ ನಾದ ಅಬೂ ಬಕರನು ಮಹಮ್ಮದನಿಗಾಗಿ ತನ್ನ ಪ್ರಾಣವನ್ನು ಕೊಡುವು ದಕ್ಕೂ ಹಿಂದು ಮುಂದು ನೋಡದೆ ಸಿದ್ದವಾಗಿದ್ದವನು. ಈತನೂ ಮಹಮ್ಮದನೂ ಮಕ್ಕಾ ನಗರದಿಂದ ತಲೆ ತಪ್ಪಿಸಿಕೊಂಡು ಓಡಿಬಂದಾಗ ಅಬೂ ಬಕರನು ಮಹಮ್ಮದನಿಗೆ ಪಯಾಣಕ್ಕಾಗಿ ತನ್ನ ಒಂಟೆಯೊಂದನ್ನು ಕೊಟ್ಟನು. ಆ ಒಂಟೆಯನ್ನು ಕಾಣಿಕೆಯಾಗಿ ಕೊಟ್ಟಿರುವೆನೆಂದು ಅಬೂ ಬಕರನು ಎಷ್ಟು ಹೇಳಿದರೂ ಕೇಳದೆ ಮಹಮ್ಮದನು ಅದರ ಬೆಲೆಯನ್ನು ಕೊಟ್ಟು ತನ್ನ ಸಾಲದ ಹೊರೆಯನ್ನು ಇಳಿಸಿಕೊಂಡನು. ಮದೀನಾ ನಗರದಲ್ಲಿ ಒಂದು ಮಸೀದಿಯನ್ನು ಕಟ್ಟಿದರಷ್ಟೆ! ಅದರ ನಿವೇ ಶನವನ್ನು ಉಚಿತವಾಗೊಪ್ಪಿಸಿ, ಆ ಮೂಲಕ ಗುರುಸೇವೆ ಮಾಡಲು ಆ ಸ್ವತ್ತಿನ ಯಜಮಾನನು ಬಯಸಿದನು. ಮಹಮ್ಮದನು ಅದಕ್ಕೆ ಸ್ಪದೆ, ನಿವೇಶನದ ಬೆಲೆಯನ್ನು ಸಲ್ಲಿಸುವ ವರೆಗೂ ನೆಲಕ್ಕೆ ಗುದ್ದಲಿಯನ್ನು ಹಾಕಿಸಲಿಲ್ಲ. ಒಮ್ಮೆ, ಓಮರನೂ ಅವನ ಮಗನೂ ಮಹಮ್ಮದನೂ ಒಂಟೆಗಳ ಮೇಲೆ ಕುಳಿತು ಪ್ರಯಾಣ ಹೊರಟಾಗ, ಮಹಮ್ಮದನ ಒಂಟೆ ಯನ್ನು ಮುಂದೆ ಬಿಟ್ಟು ತಾವಿಬ್ಬರೂ ಹಿಂದೆ ಹೋಗಬೇಕೆಂದು ತಂದೆ ಮಕ್ಕಳಿಬ್ಬರೂ ಅಪೇಕ್ಷೆ ಪಟ್ಟರು. ಓಮರನ ಮಗನು ಕುಳಿತಿದ್ದ ಒಂಟೆಯು ಮಹಮ್ಮದನ ಒಂಟೆಗೆ ಆ ಗೌರವವನ್ನು ಬಿಟ್ಟುಕೊಡಲು ಒಪ್ಪದೆ ಹೋಯಿತೋ ಏನೋ ಎಂದು ತೋರುವಂತೆ ಮುಂದೆ ಹೊರ ಟಿತು. ಆತನು ತನ್ನ ಒಂಟೆಯ ಮಗಿನ ಹಗ್ಗವನ್ನು ಎಷ್ಟು ಎಳೆ ದರೂ ಒಂಟೆಯು ಹಿಂದಕ್ಕೆ ಬಾರದೆ ಹೋಯಿತು. ಇದನ್ನು ಕಂಡು ಓಮರನು ಅಸಮಾಧಾನ ಹೊಂದಿ, ಒಂಟೆಯ ತಪ್ಪಿಗಾಗಿ ಮಗನನ್ನು ಗದರಿಸಿದನು. ಮಹಮ್ಮದನು ನಸು ನಕ್ಕು, ನಿರಪರಾಧಿಯಾದ ಅವನ ನೋಕೆ ಬರುವೆ ? ಆ ಒಂಟೆಯನ್ನೇ ನನಗೆ ಕೊಟ್ಟುಬಿಡು ಎಂದನು. ಓಮರನು ಬಹಳ ಸಂತೋಷಪಟ್ಟು, ಆ ಒಂಟೆಯನ್ನು ಕಾಣಿಕೆಯಾಗಿ ಸ್ವೀಕರಿಸಿ ತನ್ನನ್ನು ಕೃತಾರ್ಥನನ್ನಾಗಿ ಮಾಡಬೇಕೆಂದು ಮಹಮ್ಮದನನ್ನು ಬೇಡಿಕೊಂಡನು. ಮಹಮ್ಮದನು ಅದಕ್ಕೆ ಸ್ಪದೆ ಬೆಲೆ ಕೊಟ್ಟು ಆ ತುಂಟ