ಪುಟ:ಪೈಗಂಬರ ಮಹಮ್ಮದನು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೬ ಪೈಗಂಬರ ಮುಹಮ್ಮದನು ದೊಡ್ಡದೊಂದು ದೋಷವೆಂದು ತೋರುವಂತೆ ಬರೆದಿದ್ದಾರೆ. ಇನ್ನೂ ಕೆಲವರು ಲೇಖಕರು, ಆಗಿನ ಕಾಲದ ರೀತಿ ನೀತಿಗಳನ್ನೂ ಆವಶ್ಯಕತೆ. ಗಳನ್ನೂ ನೋಡಿದರೆ, ಅದು ದೋಷವೆಂದು ಹೇಳುವುದು ಅಸಂಗತ ವೆಂದು ಅಭಿಪ್ರಾಯಪಟ್ಟಿದ್ದಾರೆ. ಮಹಮ್ಮದನು ತನ್ನ ಐವತ್ತೆರಡು ನೆಯ ವಯಸ್ಸಿನವರೆಗೂ ಖದೀಜಳೊಡನೆ ಪ್ರೀತಿಯಿಂದ ಸಂಸಾರ ಮಾಡಿಕೊಂಡಿದ್ದುದೂ ; ಆಕೆಯ ಜೀವಿತ ಕಾಲದಲ್ಲಿ, ಬಹುಪತ್ನಿ ತ್ವವು ರೂಢಿಯಲ್ಲಿದ್ದರೂ, ಮಹಮ್ಮದನು ಮತ್ತಾರನ್ನೂ ಮದುವೆಯಾಗದೆ ಇದ್ದುದೂ ; ಖದೀಜಳ ಮರಣಾನಂತರ, ಅಬೂ ಬಕರನ ಪ್ರಾರ್ಥನೆ. ಯಂತೆ, ಆತನ ಮಗಳಾದ ಅಯಷೆಯನ್ನು ವರಿಸಿದುದೂ ; ಮಹ ಮ್ಮದೀಯರು ಯುದ್ಧದಲ್ಲಿ ಮಡಿಯುತ್ತ ಬಂದಹಾಗೆಲ್ಲ ಅನಾಥೆಯರಾದ. ವಿಧವೆಯರ ಸಂಖ್ಯೆಯು ಹೆಚ್ಚುತ್ತ ಹೋದುದರಿಂದ, ನಿರ್ವಾಹವಿಲ್ಲದೆ ಪುರುಷರು ಹೆಚ್ಚು ಮಂದಿ ಹೆಂಡತಿಯರನ್ನು ವರಿಸಿ ಅವರ ಪೋಷಣೆಯ ಭಾರವನ್ನು ವಹಿಸಬೇಕಾಗಿ ಬಂದುದೂ ; ಮಹಮ್ಮದನು ಈ ಕಾರಣ. ದಿಂದ ಬಹುಪತ್ನಿತ್ವಕ್ಕೆ ಸಮ್ಮತಿಸಿ ಸೌದಾ, ಹಫಾ ಎಂಬಿಬ್ಬರು ವಿತಂತು ಗಳನ್ನು ವಿವಾಹವಾದುದೂ ; ರಾಜಕೀಯ ಕಾರಣದ ಸಂಬಂಧದಿಂದ ಜುವೇರಿಯಾ ಮತ್ತು ಸಫಿಯಾ ಎಂಬ ಯೆಹೂದ್ಯ ಸ್ತ್ರೀಯರನ್ನೂ, ಮೇರಿಯೆಂಬ ಕೈಸ್ತ ಸ್ತ್ರೀಯನ್ನೂ ನಿರ್ವಾಹವಿಲ್ಲದೆ ಮದುವೆಯಾ ದುದೂ ; ತನ್ನ ಪತ್ನಿಯರನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸು. ತಿದ್ದರೂ, ತನಗೆ ಪ್ರಭು ಪದವಿಯೇ ದೊರೆತು ರಾಷ್ಟ್ರದ ಭಂಡಾರವೇ ತನ್ನ ಸ್ವಾಧೀನದಲ್ಲಿದ್ದರೂ, ತನ್ನ ಪತ್ನಿಯರ ಭೋಗಲಾಲಸೆಗೆ ಅವಕಾಶ ಕೊಡದೆ ಬಡತನದಲ್ಲಿಯೇ ಅವರು ಕಾಲ ಕಳೆಯುವಂತೆ ಕಟ್ಟುಮಾಡಿ ದ್ದುದೂ ; ಯುದ್ಧಗಳಲ್ಲಿ ಕೊಳ್ಳೆ ಹೊಡೆದ ಸಾಮಗ್ರಿಗಳಿಂದ ತನ್ನ ಅನು ಯಾಯಿಗಳೆಲ್ಲರೂ ಧನಿಕರಾಗುವಂತೆ ಮಾಡಿ, ತಾನು ಮಾತ್ರ ದರಿದ್ದ) ನಾಗಿಯೇ ಇದ್ದುದೂ ; ರಾಜ ಭೋಗವು ಕರಗತವಾಗಿದ್ದರೂ, ತಾನೂ ತನ್ನ ಪತ್ನಿಯರೂ ಖರ್ಜೂರದ ಚಾಪೆಗಳನ್ನೂ , ಮಣ್ಣಿನ ಹೂಜಿಗಳನ್ನೂ ಉಪಯೋಗಿಸುತ್ತಿದ್ದುದೂ ; ತನ್ನ ಸೇವೆಯ ಫಲವಾಗಿ ದೊರೆತ ಆನು ಕೂಲ್ಯಗಳ ದೆಸೆಯಿಂದ ತನ್ನ ಅನುಯಾಯಿಗಳೆಲ್ಲರೂ ಭೋಗ ರತರಾಗಿ