________________
೧೪೨ ಪೈಗಂಬರ ಮಹಮ್ಮದನು ಮಾಡಿ, ಭಗವಂತನ ಆ ಸದ್ಗುಣಗಳು ತನ್ನಲ್ಲಿ ನೆಲೆಗೊಳ್ಳುವಂತೆ ಮಾಡಿ ಕೊಳ್ಳಬೇಕೆಂದೂ ಬೋಧಿಸಿದ್ದಾನೆ. ಆಯಾ ಸದ್ಗುಣಗಳಿಗನುಸಾರ ವಾಗಿ ಮಹಮ್ಮದನು ಭಗವಂತನನ್ನು ವಿವಿಧ ನಾಮಗಳಿಂದ ಸೋತು ಮಾಡಿರುವನು. ಅವುಗಳಲ್ಲಿ ರಬ್, ರಹ್ಮಾನ್, ರಹೀಂ ಎಂಬಿವೇ ಅತಿ ಮುಖ್ಯವಾದುವು. ಅವುಗಳ ಅರ್ಥವನ್ನು ಗ್ರಹಿಸಿದರೆ ಮಹಮ್ಮದನು ಎಷ್ಟು ಉದಾತ್ತ ಭಾವದಿಂದ ಅವುಗಳನ್ನು ಕಲ್ಪಿಸಿರುವನೆಂಬುದು ಗೊತ್ತಾಗುವುದು ; ಆಗ ನಮ್ಮ ದುರಭಿಮಾನವೂ ಮೌಢವೂ ದೂರ ವಾಗುವುವು. ಈಶ್ವರ, ವಿಷ್ಣು, ನಾರಾಯಣ, ಶಂಕರ ಮುಂತಾದ ದಿವ್ಯ ನಾಮಗಳ ವಿಷಯದಲ್ಲಿಯೂ ಮಹಮ್ಮದೀಯರು ಇದೇ ರೀತಿ ಯಲ್ಲಿ ಅರ್ಥ ಗ್ರಹಣಮಾಡಿದರೆ, ಅವರಿಗೂ ದುರಭಿಮಾನ ವಧ್ರಗಳು ದೂರವಾಗಿ ತೊಲಗಿ, ಅವರ ಮನಸ್ಸಿನಲ್ಲಿರುವ ಅವಜ್ಞತೆಯು ನಾಶ ಹೊಂದುವುದು, ರಬ್ ಎಂದರೆ, ನಾನಾ ವಸ್ತುಗಳನ್ನು ಸೃಷ್ಟಿ ಮಾಡಿ ಅವಕ್ಕೆ ಬಗೆ ಬಗೆಯ ಸಾಮರ್ಥ್ಯಗಳನ್ನು ಕರುಣಿಸಿರತಕ್ಕವನು ಎಂದರ್ಥ. ರಹಾನ್ ಎಂದರೆ, ಕರುಣಾ ನಿಧಿಯಾಗಿ ಪ್ರಾಣಿಗಳ ಮೇಲಣ ದಯಾ ವಾತ್ಸಲ್ಯಗಳಿಂದ ಅವುಗಳ ಜೀವನಕ್ಕೆ ಬೇಕಾದ ವಿವಿಧ ಸಾಮಗ್ರಿ ಗಳನ್ನು ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸೃಷ್ಟಿಸಿ ಸಹಾಯ ಮಾಡಿರತಕ್ಕವನು ಎಂದರ್ಥ, ರಹೀಂ ಎಂದರೆ, ಅನುಕಂಪವುಳ್ಳವನಾ ಗಿರುವ ಫಲಪುದಾಯಕನು ಎಂದರ್ಥ. ನಾವು ಮಾಡುವ ಸತ್ಕರ್ಮ ಗಳಿಗೆ, ಒಂದಕ್ಕೆ ಕೋಟಿ ಸಾಲಿನಷ್ಟು ಸತೈಲವನ್ನು ಕರುಣಿಸತಕ್ಕ ಧರ್ಮ ಪ್ರಭುವು ಭಗವಂತನೆಂಬುದು ಈ ದಿವ್ಯ ನಾಮದ ತಾತ್ಪರ್ಯ: ಮೇಲೆ ಸೂಚಿಸಿದಂತೆ, ಜೀವಾತ್ಮನ ಪ್ರಗತಿ ಸಾಧನೆಗೆ ಸಹಾಯ ವಾಗಲೆಂಬ ಉದ್ದೇಶದಿಂದ ದಿನಕ್ಕೆ ಐದು ಸಾರಿ ಭಗವತ್ಪಾರ್ಥನೆಯು ನಡೆಯಬೇಕೆಂದು ಮಹಮ್ಮದನು ಗೊತ್ತುಮಾಡಿ ಪ್ರಾರ್ಥನೆ ದ್ದಾನೆ. ಸ್ನಾನ ಮಾಡುವುದರಿಂದ ಬಹಿಶುದ್ಧಿ
- ಯಾಗುವಂತೆಯೇ, ಪ್ರಾರ್ಥನೆಯಿಂದ ಅಂತಶುದ್ಧಿ ಯುಂಟಾಗುವುದೆಂಬುದು ಮಹಮ್ಮದನ ಅಭಿಪ್ರಾಯ. ನಮ್ಮ ನೈತಿಕ ನಿಷ್ಟೆಯು ಅಚಲವಾಗಿ ನೆಲೆಗೊಳ್ಳಬೇಕಾದರೆ, ಹಲವು ವೇಳೆ