________________
೧೫೨ ಪೈಗಂಬರ ಮಹಮ್ಮದನು ಮಹಮ್ಮದನು ಗುಲಾಮರ ದಾಸ್ಯವನ್ನು ಬಿಡುಗಡೆ ಮಾಡಿ `ಇತರರಿಗೂ ಅವರಿಗೂ ಒಂದೇ ಸಮವಾದ ಹಕ್ಕು ಬಾಧ್ಯತೆಗಳುಂಟೆಂಬು ದನ್ನು ತೋರ್ಪಡಿಸುವ ಪ್ರಯತ್ನದಲ್ಲಿ ಯಥಾ ಶಕ್ತಿ ಸಮದರ್ಶಿ ಯಾಗಿ ಕೆಲಸ ನಡೆಯಿಸಿದನು. ಈ ಭಾಗದಲ್ಲಿ ಮಹಮ್ಮದನು ನೆರವೇರಿಸಿದ ಕಾರ್ಯ ಕಲಾಪ ಗಳನ್ನು ವಿಶದವಾಗಿ ಪ್ರಸ್ತಾವಿಸುವುದಕ್ಕೆ ಮೊದಲು, ಆ ಕಾಲದಲ್ಲಿ -ಗುಲಾಮರ ಸ್ಥಿತಿಯು ಹೇಗಿದ್ದಿತೆಂಬುದನ್ನು ಸಂಕ್ಷೇಪವಾಗಿ ಸೂಚಿ `ಸುವುದು ಆವಶ್ಯಕ. ಇಸ್ಲಾಂ ಮತವು ಹುಟ್ಟುವುದಕ್ಕೆ ಮುಂಚೆ ಸಾವಿರಾರು ವರುಷಗಳಿಂದಲೂ ಈ ವಿಧದ ದಾಸ್ಯ ವೃತ್ತಿಯು 'ಆಚರಣೆಯಲ್ಲಿದ್ದಿತು. ಯುದ್ಧದಲ್ಲಿ ಸೆರೆ ಸಿಕ್ಕಿದವರೇ ಮೊದಲಾದವರನ್ನು ಇಂತಹ ದಾಸ್ಯ ವೃತ್ತಿಗಾಗಿ ಮಾರಿಬಿಡುವುದು ಆಗಿನ ವಾಡಿಕೆ. ಒಮ್ಮೆ ಗುಲಾಮರಾದವರು ಜೀವಾವಧಿಯಾಗಿಯೂ ವಂಶ ಪಾರಂಪರ್ಯ ವಾಗಿಯೂ ದಾಸ್ಯ ವೃತ್ತಿಯಲ್ಲೇ ಇರಬೇಕಾಗಿದ್ದಿತು. ಅವರ ಯಜಮಾನ ರೆನಿಸಿಕೊಂಡಿದ್ದವರು ಅವರನ್ನು ತಿರಗ್ಧಂತುಗಳಿಗಿಂತಲೂ ಕಡೆಯಾಗಿ ಕಾಣುತ್ತಿದ್ದರು. ಗುಲಾಮರ ಗೋಳನ್ನು ಕೇಳುವವರೇ ಇರಲಿಲ್ಲ. ಗ್ರೀಸ್ ದೇಶದ ತತ್ತ್ವಜ್ಞಾನಿಯಾದ ಅರಿಸ್ಟಾಟಲ್ ಮುಂತಾದವರೂ, ಸ್ಟೋಯಿಕ್ಸ್ ಮುಂತಾದ ದಾರ್ಶನಿಕರೂ, ಈ ವಿಧದ ವೃತ್ತಿಯು ಇರತಕ್ಕುದು ಪ್ರಕೃತಿ ಸಹಜವಾದುದೆಂದು ವಾದಿಸುವವರಾದರು. `ಸಮಾಜದಲ್ಲಿ ಮುಂದಾಳುಗಳೆನಿಸಿದ ಮೇಧಾವಿಗಳೇ ಹೀಗೆ ಭಾವಿಸಿದ ಬಳಿಕ ಉಳಿದವರ ಮನೋವೃತ್ತಿಯು ಎಂತಹದೆಂಬುದನ್ನು ಹೇಳಬೇಕೆ ? ರೋಮನರ ಅಭ್ಯುದಯ ಕಾಲದಲ್ಲಂತು ಗುಲಾಮರು ಕಿರುಗುಟ್ಟಿ ಹೋದರು. ಯಜಮಾನನೆನಿಸಿದವನು ತನ್ನ ಗುಲಾಮರನ್ನು ಕೊಂದು ಹಾಕಿದರೂ ಅದೊಂದು ಅಪರಾಧವೆಂಬ ಭಾವನೆಯೇ ಇರಲಿಲ್ಲ. ನಾಯಿಯ ಕೊರಳಿಗೆ ಸರಪಳಿಯನ್ನು ಕಟ್ಟುವಂತೆಯೇ ಗುಲಾಮರ ಕೊರಳಿಗೂ ಸರಪಳಿಗಳನ್ನು ಹಾಕುತ್ತಿದ್ದರು. ಅವರು ಎಷ್ಟು ದುಡಿದರೂ “ಯಜಮಾನರಿಗೆ ತೃಪ್ತಿಯಾಗುತ್ತಿರಲಿಲ್ಲ; ದುಡಿಯಲಾರದೆ ಹೋದರೆ ಅವರಿಗೆ ಚಾವಟಿಯ ಪೆಟ್ಟುಗಳು ಬೀಳುತ್ತಿದ್ದುವು. ರೋಮ್ ಪಟ್ಟಣ