ಪುಟ:ಪೈಗಂಬರ ಮಹಮ್ಮದನು.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮGಲ ತತ್ತ್ವಗಳು ೧೫೫ ಕೊಡಬೇಕಾಗಿ ಬಂದರೆ, ಅವರ ಸಹಾಯಕ್ಕೆ ತಕ್ಕಷ್ಟು ಮಂದಿ ಕಲಸ ಗಾರರನ್ನು ಗೊತ್ತುಮಾಡಬೇಕು ?' ಎಂಬ ಅಮೋಘವಾದ ಉಪದೇಶ ವಾಕ್ಯಗಳಿವೆ. - ಇಸ್ಲಾಂ ಮತದ ಅನುಯಾಯಿಗಳಲ್ಲಿ ಗುಲಾಮರು ಕೂಡ ಇತರ ರಂತೆಯೇ ಮಹತ್ಪದವಿಗಳನ್ನು ಪಡೆಯಬಹುದಾಯಿತು. ಗುಲಾಮೂಾಸಂತತಿಯವನಾದ ಕುತ್ತು ದೀನನು ದೆಹಲಿಯ ಸಿಂಹಾಸನವನ್ನು ಹತ್ತಿ ಪುಭುಮಾಡಿದನು. ಹದಿಮೂರನೆಯ ಶತಮಾನದ ಆದಿ ಭಾಗದಲ್ಲಿ ಈತನು ಕಟ್ಟಿಸಿದ ಕುತುಬ್ ಮಿನಾರ್ ಎಂಬ ಸ್ತಂಭವು ಇಸ್ಲಾಂ ಮತ. ತುಗಳನ್ನ ನುಸರಿಸಿ ನಡೆದ ಪತಿತೋದ್ದಾರದ ಸ್ಮರಣಾರ್ಥವಾಗಿ ಈಗಲೂ ದೆಹಲಿಯಲ್ಲಿ ಕಂಗೊಳಿಸುತ್ತಿದೆ. ದೆಹಲಿಯಲ್ಲಿ ರಾಣಿಯಾಗಿ ಪ್ರಭುತ್ವ ಮಾಡಿದ ರಜಿಯಾ ಬೇಗಮ್ಮಳೂ ಗುಲಾಮೀ ಸಂತತಿಯವಳೇ, ಘಜನಿಯ ಮಹಮ್ಮದನ ತಂದೆಯಾದ ಸಬಕ್ತಗೀನನೂ ಒಬ್ಬ ಗುಲಾಮನಾಗಿದ್ದನು. ಹೀಗೆ ಗುಲಾಮರಿಗೆ ಸಮಾಜದಲ್ಲಿ ಉತ್ತಮ ಸ್ಥಾನವು ದೊರೆತುದು ಮಹಮ್ಮದನ ಅಧ್ಯವಸಾಯದ ಫಲ; ಇಸ್ಲಾಂ ಮತದ ಉದಾತ್ತ ತತ್ತ್ವದ ಸತ್ಪರಿಣಾಮ. ಇಸ್ಲಾಂ ಮತವು ಹುಟ್ಟುವುದಕ್ಕೆ ಮುಂಚೆ ಅರಬ್ಬಿ ದೇಶದ ಸ್ತ್ರೀಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದ್ದಿತು. ಹೆಂಗುಸು ಒಂದು ವಿಧದ ಪ್ರಾಣಿ ವಿಶೇಷವೆಂದೇ ಅರಬ್ಬಿಯವರ ಸ್ತ್ರೀತ್ವದ ಘನತೆ ಭಾವನೆ. ಮಹಮ್ಮದನು ಸ್ತ್ರೀಯರ ಇಂತಹ ದುಸ್ಥಿತಿ. ಗಾಗಿ ಮರುಕಗೊಂಡು, ಸ್ತ್ರೀಯು ಪುರುಷನ ಅರ್ಧಾಂಗಿಯೆಂದು ಸಾರಿ, ಸಮಾಜ ಪರಿಷ್ಕರಣಕ್ಕೆ ಪ್ರಾರಂಭ ಮಾಡಿದನು; ಸ್ತ್ರೀಯರ ಹಕ್ಕುಬಾಧ್ಯತೆಗಳನ್ನು ಕಾಪಾಡಿಕೊಡದೆ ತಪ್ಪಿದವರ ವಿಷಯ. ದಲ್ಲಿ ಭಗವಂತನು ಅಸಂತುಷ್ಟನಾಗುವನೆಂದು ಧರ್ಮಬೋಧೆ ಮಾಡಿದನು; ಗೃಹಿಣಿಯೇ ಗೇಹದ ರಾಣಿಯೆಂದು ಉದ್ಯೋಷಿಸಿದನು. ಮಹಮ್ಮದನ ಈ ಉಪದೇಶ ವಾಕ್ಯಗಳನ್ನೊದಿದಾಗ, ಭಾರತೀಯರಲ್ಲಿ ಪತ್ನಿ ಯು ಅರ್ಧಾ೦ಗಿ ಯೆ೦ದೂ ಗೃಹಲಕ್ಷ್ಮಿ ಯೆ೦ದೂ ವರ್ಣಿತಳಾಗಿರುವುದು. ನೆನಪಿಗೆ ಬಾರದಿರದು. ಸ್ತ್ರೀಯರಿಗೂ ಪುರುಷರ ಸಮಾನವಾದ ಹಕ್ಕು.