ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XVI, ಪರಿಸಮಾಪ್ತಿ ೧೭೫ ಮಹಾ ಪುರುಷ ಲಕ್ಷಣವಾದಲ್ಲಿ, ಅಜ್ಞಾನಾಂಧಕಾರದಲ್ಲಿ ಮುಳುಗಿ ಹೋಗಿದ್ದ ಒಂದು ಜನಾಂಗವನ್ನೇ ಉದ್ಧರಿಸಿದ ಮಹನೀಯನು ಮಹಾ ಪುರುಷನಲ್ಲವೆ ? ಕಟ್ಟು ಕಿತ್ಯ ಪಂಜಿನಂತೆ ಐಕಮತ್ಯದ ಕುರುಹೇ ಇಲ್ಲದೆ ಅವ್ಯವಸ್ಥೆಯಿಂದ ತುಂಬಿದ ಜನಾಂಗದಲ್ಲಿ ಒಕ್ಕಟ್ಟನ್ನುಂಟುಮಾಡಿ, ಭ್ರಾತೃ ಭಾವದಿಂದ ಸಕಲರೂ ಉದ್ದೀಪಿತರಾಗುವಂತೆ ಮಾಡುವುದು ಮಹಾತ್ಮ ಲಕ್ಷಣವಾಗಿದ್ದಲ್ಲಿ ಮಹಮ್ಮದನು ಅರತಹ ಮಹಾತ್ಮರ ಗುಂಪಿಗೆ ಸೇರುವನು. "ಯುದ್ಧ ರಂಗದಲ್ಲಿ ಅಸೀಮ 'ಪರಾಕ್ರಮದಿಂದ ಹೋರಾಡಿ ರಾಜ್ಯ ಸ್ಥಾಪನೆ ಮಾಡುವುದು ಮಹಾತ್ಮ ಲಕ್ಷಣವೆನ್ನು ವು ದಾದರೆ, ಆಗಲೂ ಮಹಮ್ಮದನು ಮಹಾ ಪುರುಷನೇ, ಅಂಧ ಶ್ರದ್ದೆ ಗಳನ್ನು ಹೋಗಲಾಡಿಸಿ ಸಮಾಜ ಪರಿಷ್ಕರಣ ಮಾಡಿದವರು ಮಹಾ ಪುರುಷರೆನ್ನು ವುದಾದರೆ, ಮಹಮ್ಮದನಿಗೂ ಅಂಥವರಲ್ಲಿ ಸ್ಥಾನವುಂಟು. ಒಂದು ಜನಾಂಗವನ್ನು ನವ ಜೀವನದ ಚೈತನ್ಯದಿಂದ ಕಳ ಕಳಿಸಿ ಹುರಿ ದುಂಬುವಂತೆ ಮಾಡುವುದು ಮಹಾತ್ಮ ಲಕ್ಷಣವೆನ್ನುವ ಪಕ್ಷಕ್ಕೆ, ಕಾಡು ಜನರಂತಿದ್ದ ಅರಬ್ಬಿಯವರನ್ನು ನಾಗರಿಕರನ್ನಾಗಿ ಪರಿಣಾಮ ಗೊಳಿಸಿದುದಲ್ಲದೆ, ಇಂದಿಗೂ ತನ್ನ ಕಾರ್ಯ ಸಿದ್ದಿಯ ವರ್ಚಸ್ಸು ನಾಲ್ವತ್ತು ಕೋಟಿ ಮಂದಿ ಮುಸಲ್ಮಾನರಿಗೆ ಸ್ಫೂರ್ತಿ ದಾಯಕವಾಗಿ ತಾಂಡವವಾಡುವಂತೆ ಮಾಡಲು ಮೂಲ ಕಾರಣನಾದ ಮಹಮ್ಮದನು ಮಹಾ ಪುರುಷನಲ್ಲವೆ? ಸಾತ್ವಿಕ ಸ್ವಭಾವದಿಂದ ತುಂಬಿದ ಸರಳ ಜೀವನವು ಮಹಾ ಪುರುಷ ಲಕ್ಷಣವೆನ್ನುವುದಾದರೆ, ಅನಾಥ ಬಾಲಕ ನಾ ಗಿದ್ದುದು ಮೊದಲುಗೊಂಡು ಪ್ರಭು ಪದವಿಯನ್ನಲಂಕರಿಸುವ ವರೆಗೂ, ಆ ಬಳಿಕ ದೈವವೇ ಶರಣೆಂದು ನಂಬಿ ಪರೋಪಕಾರದಲ್ಲಿಯೇ ಕಾಲ ವನ್ನು ಕಳೆಯುತ್, ಸಾಮಾನ್ಯ ಜನರಂತೆ ಕುಟೀರ ವಾಸಿಯಾಗಿದ್ದ. ಆ ಸಾಧು ಶ್ರೇಷ್ಠನು ಮಹಾ ಪುರುಷನೆನ್ನಲು ಅಡ್ಡಿಯುಂಟೆ?, ಹೆಚ್ಚೇಕೆ? ದೈವಾನುಗ್ರಹಕ್ಕೆ ಪಾತ್ರರಾಗಿ ಜಗದುದ್ಧಾರಕರಾದ ಸಾಧು ವರೇಣ್ಯರಲ್ಲಿ ಮಹಮ್ಮದನೂ ಒಬ್ಬನು. ಲೋಕೋದ್ಧಾರಕ್ಕಾಗಿ ,ಅವತರಿಸಿರುವ ಮಹನೀಯರಲ್ಲಿ ಪರಮ ತೇಜಸ್ವಿಗಳೆನಿಸಿರುವವರ ಪ ಗೆ ಮಹಮ್ಮ ದನೂ ಸೇರಿದವನು. ಇಂತಹ ದೈವಾಂಶ ಸಂಭೂತರು ಜಾತಿ ಮತ ಭೇದವಿಲ್ಲದೆ ಸಮಸ್ಯರಿಂದಲೂ ಆರಾಧನೆ ಪಡೆಯಲು ಅರ್ಹರು.