ಪುಟ:ಪೈಗಂಬರ ಮಹಮ್ಮದನು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

11. ಸಂಸಾರದ ಸುಖ ದುಃಖಗಳು ವುದೇ ವಿಧಿಯು ಸಂಕಲ್ಪವಿರಬಹುದೇನೋ ! Kಿ ಯಿಂದ ಬಾಳುತ್ತ, ಆಗಿನ ಕಾಲದಲ್ಲಿ ಲಭಿಸುತ್ತಿದ್ದ ಸಮಸ್ತ ಸುಖ ಸಾಮಗ್ರಿಗಳನ್ನೂ ಪಡೆದಿದ್ದ ಆ ದಂಪತಿಗಳಿಗೆ ಪುತ್ರ ಶೋಕವು ಬಂದೊದಗಿತು. ಅವರಿಗೆ ಮೂವರು ಪುತ್ರರೂ ನಾಲ್ವರು ಪುತ್ರಿಯರೂ ಜನಿಸಿದರು. ಆದರೆ, ಮೂವರು ಪುತ್ರರೂ ಶೈಶವದಲ್ಲಿಯೇ ಮೃತರಾದರು. “ ಪುತ್ರ ದುಃಖಂ ನಿರಂತರಂ' ಎಂಬ ಲೋಕೋಕ್ತಿಯಂತೆ, ಮಕ್ಕಳ ಸಾವಿನಿಂದ ಹುಟ್ಟಿ ಸರ್ವದಾ ಮನಸ್ಸನ್ನು ಕೊರೆಯುತ್ತಿರುವ ದುಃಖವು ಅನುಭವ ವೇದ್ಯವೇ 'ಹೊರತು ವರ್ಣನೆಗಳವಲ್ಲ. ದುಸ್ಸಹವಾದ ಪುತ್ರ ಶೋಕವು ತನ್ನ ನ್ನು ಬಾಧಿಸುತ್ತಿದ್ದರೂ ಮಹಮ್ಮದನು ಕರ್ತವ್ಯ ವಿಮುಖನಾಗದೆ ತನ್ನ ಮೇಲೆ ಹೊತ್ತಿದ್ದ ಭಾವಿ ಮಹತ್ಕಾರ್ಯಕ್ಕೆ ಆತ್ಮ ನಿಷ್ಠೆಯಿಂದ ಅನು ವಾಗುತ್ತಬಂದನುಅವನ ಸಹ ಧರ್ಮಿಣಿಯ ಅದಕ್ಕೆ ನೆರವಾದಳು. ವಿವಾಹವಾದನಂತರ ಸುಮಾರು ಹದಿನೈದು ವರುಷಗಳ ಅವಧಿಯು ಮಹಮ್ಮದನ ಆತ್ಮ ಸಂಯಮದ ಮತ್ತು ಅಂತರಾತ್ಮ ಸಂಶೋಧನೆಯ ಕಾಲವೆಂದು ಹೇಳಬಹುದು. ಆಗಿನ ಕಾಲಕ್ಕೆ ಮಕ್ಕಾ ನಗರವು ಬಹಳ ದೊಡ್ಡ ಪಟ್ಟಣ. ಅಲ್ಲಿ ದೊಡ್ಡ ದೊಡ್ಡ ಮನೆಗಳೂ ಮಹಲುಗಳೂ ಮಳಿಗೆಗಳೂ ತುಂಬಿದ್ದು ವು; ವ್ಯಾಪಾರವು ವಿಶೇಷವಾಗಿ ನಡೆಯುತ್ತಿದ್ದಿತು. ಮಕ್ಕಾ ನಗರದಲ್ಲಿದ್ದ ಒಂದು ದೇವಾಲಯದಲ್ಲಿ ಮುನ್ನೂರರವು ವಿಗ್ರಹಗಳನ್ನಿಟ್ಟು ಅವನ್ನು ದಿನ ಕೊಂದರಂತೆ ವರ್ಷವೆಲ್ಲ ಪೂಜಿಸುತ್ತಿದ್ದರು. ಒಂದು ವಿಗ್ರಹಕ್ಕೆ ಒಂದು ದಿನ ಪೂಜೆಯಾದ ಮೇಲೆ ಅದೇ ವಿಗ್ರಹಕ್ಕೆ ಮತ್ತೊಮ್ಮೆ ಪೂಜೆಯು ಸಲ್ಲಬೇಕಾದರೆ ಸರಿಯಾಗಿ ಒಂದು ವರ್ಷವಾಗುತ್ತಿದ್ದಿತು. ಮಹಮ್ಮದನ ತಾತನು ಜೀವಂತನಾಗಿದ್ದಾಗ ಮಕ್ಕಾ ನಗರದ ಪೌರ ಕಾರ್ಯಗಳು ಆತನ ಆಧಿಪತ್ಯದಲ್ಲಿ ದಕ್ಷತೆಯಿಂದ ನಡೆಯುತ್ತಿದ್ದುವು. ಆತನ ಮರಣಾನಂತರ ಅವುಗಳ ವ್ಯವಸ್ಥೆಯ ಹದಗೆಟ್ಟು ಜನರಲ್ಲಿ ಐಕಮತ್ಯವು ತಪ್ಪಿತು. ಜನರು ನೆಮ್ಮದಿಯಾಗಿ ಬಾಳುವಂತೆಯ ಅವರ ಸ್ವತ್ತುಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಲು ದಂಡಾಧಿ. ಅನುಕಂಪ