ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಪೈಗಂಬರ ಮಹಮ್ಮದನು ಕಾರಿಯು ಯಾವನೂ ಇರಲಿಲ್ಲ. ಯಾವನು ಬಲಶಾಲಿಯೋ ಅವನಿಗೇ ಯಾಜಮಾನ್ಯ. ಇದರಿಂದ, ಬಲಿಷ್ಟರೆಲ್ಲರೂ ತಮ್ಮ ತಮ್ಮ ಅನುಯಾಯಿ ಗಳೊಡಗೂಡಿ ಪರಸ್ಪರ ಹೋರಾಡುತ್ತಿದ್ದರು. ಪರ ಸ್ಥಳದಿಂದ ಮಕ್ಕಾ ನಗರಕ್ಕೆ ಬಂದವರಿಗೆ ವಿಷಮ ಸಂಕಟವೊದ ಅವರ ಹಣ ಕಾಸುಗಳು ಸುಲಿಗೆಯಾಗುತ್ತಿದ್ದುವು. ಅವರು ಹೆಂಗಸರೊಡನೆ ಬಂದಿದ್ದರಂತೂ ಹೇಳಬೇಕಾದುದೇ ಇಲ್ಲ. ಪುಂಡು ಪೋಕರ ಹಾವಳಿಯಿಂದ ಅವರ ಮಾನವು ಸೂರೆಯಾಗುತ್ತಿದ್ದಿತು. ಒಮ್ಮೆ ಒಬ್ಬ ಕವಿಯು ಮಕ್ಕಾ ನಗರಕ್ಕೆ ಬಂದು ಕೊರೈಷ್ ಮನೆತನದ ಅಧಿನಾಯಕನ ಆಶ್ರಿತನಾ ಗಿದ್ದನು. ತುಂಟರು ಅವನನ್ನು ಬಹಿರಂಗವಾಗಿ ಬೀದಿಯಲ್ಲಿ ನಿಲ್ಲಿಸಿ ಅವನ ಸರ್ವಸ್ವವನ್ನೂ ಅಪಹರಿಸಿದರು. ಈ ವಿಧದ ಅತ್ಯಾಚಾರಗಳಿಂದ ಮಹಮ್ಮದನು ಮನ ನೊಂದು ಕೆಲವು ಬಲಿಷ್ಠವಾದ ಮನೆತನಗಳ . ಗುಣವಂತರಾದ ವೀರರನ್ನು ಒಟ್ಟುಗೂಡಿಸಿ ಒಂದು ಸಂಘವನ್ನು ಸ್ಥಾಪಿ ಸಿದನು. ಮಕ್ಕಾ ನಗರದವರೇ ಆಗಲಿ, ಹೊರಗಿನಿಂದ ಬಂದವರೇ ಆಗಲಿ, ಅವರು ಯಾವುದೊಂದು ತೊಂದರೆಗೂ ಒಳಗಾಗದಂತೆ ಸುರಕ್ಷಿತವಾಗಿ ಕಾಪಾಡಿ ಪುಂಡರ ಹಾವಳಿಯನ್ನಡಗಿಸುವುದೇ ಈ ಸಂಘದ ಉದ್ದೇಶ. ಮಹಮ್ಮದನ ವಿವಾಹವಾದ ತರುಣದಲ್ಲಿಯೇ ಅವನು ಈ ಸಂಘವನ್ನು ಸ್ಥಾಪಿಸಿ, ಅದರ ಅಧ್ಯಕ್ಷನಾಗಿ ನಿಂತನು. ಕ್ರಿಸ್ತ ಶಕ ೫೯೨ನೆಯ ವರ್ಷದಲ್ಲಿ ಈ ಸಂಘವು ಹುಟ್ಟಿ, ಇದರಿಂದ ದುರ್ಬಲರನ್ನು ಕಾಪಾಡಿ, ದುಷ್ಟರನ್ನು ನೆಕ್ಕುವ ಕೆಲಸವು ಚೆನ್ನಾಗಿ ನೆರವೇರಿತು. ಮಹಮ್ಮದನ ಪರಿಶುದ್ಧ ಜೀವನವೂ, ಧನಿಕನಾಗಿದ್ರೂ ಡಾಂಭಿಕತನಕ್ಕೆ ದೂರನಾಗಿ ಅವನ ಸರಳ ವರ್ತನೆಯ, ಸುಸಂಸ್ಕೃತವಾಗಿ ಮನೋಹರವಾಗಿದ್ದ ಅವನ ಸುಸ್ವಭಾವವೂ, ದೀನಾನಾಥರಲ್ಲಿ ಅವನು ತೋರಿಸುತ್ತಿದ್ದ ಕರು ಣೆಯ, ಮಾನಧನನಾಗಿದ್ದ ಅವನ ಕರ್ತವ್ಯ ನಿಷ್ಟೆಯ ಎಲ್ಲರ ಮನ ಸೃನ್ನೂ ಮುಗ್ಧಗೊಳಿಸಿದುವು. ಅವನಿಗೆ “ ಅಲ್-ಅಮೀನ್ ” (ಎಂದರೆ, ಪ್ರಜೆಗಳ ಪ್ರಾಣ, ಮಾನ, ಧನ ರಕ್ಷಕ) ಎಂಬ ಹೆಸರು ರೂಢಿಯಾಗಿ, ಇದು ಜನರೆಲ್ಲರೂ ಕೊಟ್ಟ ಅಮೋಘವಾದ ಬಿರುದಿನಂತಿದ್ದಿತು. ಈ ಹೆಸರು ಬಂದುದು ಅಲಭ್ಯ ಲಾಭವಲ್ಲವೆ ? ಈ ಬಿರುದನ್ನು ಸಾರ್ಥಕ