ಪುಟ:ಪೈಗಂಬರ ಮಹಮ್ಮದನು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

II, ಸಂಸಾರದ ಸುಖ ದುಃಖಗಳು ಗೊಳಿಸುವ ಮತ್ತೊಂದು ಘಟನೆಯ ಸಂಧಿಸಿತು : ಜೈದ್ ಎಂಬ ಯುವಕನೊಬ್ಬನನ್ನು ಶತ್ತು ಪಕ್ಷದವರು ಸೆರೆ ಹಿಡಿದು ಖದೀಜಳ ಅಣ್ಣನ ಮಗನಿಗೆ ಗುಲಾಮನನ್ನಾಗಿ ವಿಕ್ರಯಿಸಿದರು. ಆತನು ಈ ಗುಲಾಮ ನನ್ನು ಖದೀಜಳಿಗೊಪ್ಪಿಸಲು, ಆಕೆಯು ಅವನನ್ನು ಮಹಮ್ಮದನಿಗೆ ಕಾಣಿಕೆಯಾಗಿ ಸಮರ್ಪಿಸಿದಳು. ಮಹಮ್ಮದನು ಆ ಯುವಕನಲ್ಲಿ ಅನುತಾಪವನ್ನು ತೋರಿಸಿ, ಅವನಿಗೆ ಸ್ವಾತಂತ್ರವನ್ನು ಕೊಟ್ಟು ದಾಸ್ಯ ದಿಂದ ಬಿಡುಗಡೆ ಮಾಡಿದನು. ಆದರೆ, ಆ ಯುವಕನು ತನ್ನ ತಂದೆಯ ಬಳಿಗೆ ಹೋಗಲೊಲ್ಲದೆ, ಮಹಮ್ಮದನ ಗುಣಕ್ಕೆ ಮನ ಸೋತು, ಅವನ ಬಳಿಯಲ್ಲಿಯೇ ಇರುವುದಾಗಿ ಸಂಕಲ್ಪಮಾಡಲು, ಮಹಮ್ಮದನು ಅವನನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡನು. ಅರಬ್ಬಿಯವರೆಲ್ಲರೂ ಇದನ್ನು ಕಂಡು ಬೆರಗಾದರು. ಮಹಮ್ಮದನ ಈ ವಿಧದ ವರ್ತನೆಯು ಅವರೆಲ್ಲರಿಗೂ ಪ್ರಬೋಧಕವಾಗಿದ್ದಿತು. - ಮಹಮ್ಮದನು ತನ್ನ ಚಿಕ್ಕಪ್ಪನಾದ ಅಬೂತಾಲಿಬನ ಉಪಕಾರ ವನ್ನು ಮರೆಯಲಿಲ್ಲ. ತಾನು ಖದೀಜಳ ಸಂಪತ್ತಿಗೆ ಒಡೆಯನಾದ ಉತ್ಸಾಹದಿಂದ, ಎಂದಿಗೂ ಕರ್ತವ್ಯ ವಿಮುಖನಾಗಿ ಉಪಕಾರ ಸ್ಮರಣೆ ಕೃತಘ್ನನಾಗಲಿಲ್ಲ. ಅವನು ಚಿಕ್ಕಪ್ಪನ ಉಪಕಾರ ವನ್ನು ಸ್ಮರಿಸಿಕೊಂಡು, ಆತನಿಗೆ ಸಹಾಯಮಾಡಿ. ದುದಲ್ಲದೆ, ಆತನ ಮಗನಾದ ಅಲೀಯ ವಿದ್ಯಾಭ್ಯಾಸದ ಹೊರೆಯನ್ನೂ ತಾನೇ ವಹಿಸಿದನು ; ಅಷ್ಟೇ ಅಲ್ಲ; ಅಲೀಯಲ್ಲಿ ಪುತ್ರವಾತ್ಸಲ್ಯವನ್ನಿಟ್ಟು ತನ್ನ ಪುತ್ರ ಶೋಕವನ್ನು ಮರೆಯಲು ಪ್ರಯತ್ನಿಸಿದನು ; ಪರಿಣಾಮ ದಲ್ಲಿ, ತನ್ನ ಮಗಳಾದ ಫಾತಿಮಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದನು.