ಪುಟ:ಪೈಗಂಬರ ಮಹಮ್ಮದನು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದು ಮೂರನೆಯ ಅಧ್ಯಾಯ ಭಗವತ್ಸಂದೇಶ ಮಹಮ್ಮದನ ವಿವಾಹಾನಂತರ ಹದಿನೈದು ವರುಷಗಳು ಕಳೆದು ಹೋದುವು. ಅಜ್ಞಾನ ವಶದಿಂದ ಮೋಹಾಂಧಕಾರದಲ್ಲಿ ತೇಲಿ ಮುಳು ಗುತ್ತಿದ್ದ ತನ್ನ ದೇಶ ಬಾಂಧವರ ದುಸ್ಥಿತಿಯನ್ನು ಅನುತಾಪ ನೋಡಿ ಮಹಮ್ಮದನು ಅಹರ್ನಿಶವೂ ಮನಮರುಗು ತಿದ್ದನು. ಅವರು ಹಿಂಸ್ರ ಪಶುಗಳಂತೆ ಘಾತುಕ ರಾಗಿ, ಭೋಗಲಾಲಸರಾಗಿದ್ದುದರಿಂದ ಅವರ ಅತ್ಯಾಚಾರಗಳಿಗೆ ಕೊನೆ ಮೊದಲೇ ಇರಲಿಲ್ಲ. ಪರಸ್ಪರವಾಗಿ ಜಗಳವನ್ನು ಹೂಡಿ ಹೋರಾಡಿ “ನರ ರಕ್ತವನ್ನು ಹರಿಸುವುದೆಂದರೆ ಅವರಿಗೆ ಲೀಲಾ ಜಾಲ, ಭಗವದ್ಭಕ್ತಿ ಯನ್ನಂತೂ ಅವರು ಕಂಡೇ ಅರಿಯರು ; ವಿಗ್ರಹಗಳೇ ದೇವರೆಂದೆಣಿಸಿ ಪೂಜಿಸುತ್ತಿದ್ದರು. ವಿಗ್ರಹಗಳು ಲಾಂಛನ ಪ್ರಾಯವೆಂಬ ಹಿಂದೂಗಳ ಉದಾತ್ತ ತತ್ತ್ವಕ್ಕೂ ಅವರಿಗೂ ಬಹಳ ದೂರ. ದೂತವೇ ಮುಂತಾದ ದುರ್ವ್ಯಸನಗಳಿಗೆ ಆಶ್ರಯ ಕೊಟ್ಟು ಪಶು ವೃತ್ತಿಯಿಂದ ಅವರೆಲ್ಲರೂ ಕಾಲವನ್ನು ಕಳೆಯುತ್ತಿದ್ದರು. ಮಹಮ್ಮದನು ಇದನ್ನು ಕಂಡು ಬಹಳ ವ್ಯಥೆಪಡುತ್ತ ಅವರನ್ನು ಸನ್ಮಾರ್ಗಕ್ಕೆ ತರುವ ಮಾರ್ಗವು ಯಾವ ದೆಂದು ಹಗಲಿರುಳೂ ಚಿಂತಿಸುತ್ತಿದ್ದನು. ಕೊನೆಗೆ ಜುಗುಪ್ಪೆಯುಂಟಾಗಿ ಅವನು ಏಕಾಂತ ವಾಸದಲ್ಲಿಚ್ಛೆಪಟ್ಟು ಮರಳು ಕಾಡಿನ ಮಧ್ಯದಲ್ಲಿ ಹೀರಾ ಎಂಬ ಹೆಸರಿನ ಒಂದು ಗುಡ್ಡದಲ್ಲಿಯ ಪ್ರಶಸ್ತವಾದ ಗುಹೆಯನ್ನು ತನ್ನ ಆವಾಸ ಸ್ಥಾನವಾಗಿ ಮಾಡಿಕೊಂಡನು. ಹೊನ್ನಿನ ರಾಶಿಯ ಮೇಲೆ ಕುಳಿತಿದ್ದ ಮಹಮ್ಮದನು ಈ ಗುಹೆಯಲ್ಲಿ ಕುಳಿತು ಪ್ರವೃತ್ತಿ ಮಾರ್ಗ ಲಬ್ದವಾದ ಭೋಗವೇ ಜೀವನದ ಸರ್ವಸ್ವವಲ್ಲವೆಂಬ ಚಿಂತೆಯಿಂದ ಬೆಂದು ನಿರ್ವಿಣ್ಣನಾಗಿ ಅಧ್ಯಾತ್ಮ ವಿಷಯವನ್ನು ಯೋಚಿಸತೊಡಗಿದನು. ತರು ಲತೆಗಳ ಸುಳಿವೇ ಇಲ್ಲದೆ ಕಾದ ಮರಳಿನ ಮಧ್ಯದಲ್ಲಿದ್ದ ಬೆಟ್ಟದ ಮೇಲಣ ಶೀತಲವಾದ ಆ ಗುಹಾ ಪ್ರದೇಶವು ಮಹಮ್ಮದನಿಗೆ ಸಿರಿವೀಡಾಗಿ ಸಂತೋಷವನ್ನು ಹುಟ್ಟಿಸಿತು. ಆದರೇನು ? ಬೆಟ್ಟದಲ್ಲಿದ್ದ ಬೆಣಚು