ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III. ಭಗವತ್ಸಂದೇಶ ೧೫ ಕಲ್ಲುಗಳು ತತ್ವಾರ್ಥವನ್ನು ಅವನಿಗೆ ಬೋಧಿಸಬಲ್ಲವೆ? ದಾವಾನಲನ ನೀಳ ನಾಲಗೆಯಂತಿದ್ದ ಕದ ಮರಳಿನ ಕಾಡಿನಿಂದ ಅವನ ಜೀವನದ ಸಮಸ್ಯೆಯು ಪೂರ್ಣವಾಗಲಿಲ್ಲ. ನಕ್ಷತ್ರಗಳು ಅವನಿಗೆ ಉತ್ತರ ಹೇಳವು; ಸೂರ್ಯನು ಅವನಿಗೆ ದಾರಿ ತೋರಿಸನು; ಹಾಸ್ಯ ವದನನಾದ ಚಂದ್ರಮ ನಿಂದ ಅವನ ಮನಸ್ಸಿನ ಶಂಕೆಯು ಪರಿಹಾರವಾಗದು. ಎಲ್ಲಿ ನೋಡಿ ದರೂ ನಿಶ್ಯಬ್ದ, ಎಲ್ಲಿ ನೋಡಿದರೂ ಸಾರವಿಲ್ಲದ ಶೂನ್ಯತೆ ; ಹೀಗಿದ್ದ ನಿರ್ಜನ ಪ್ರದೇಶದಲ್ಲಿ ಕುಳಿತು, ಸೃಷ್ಟಿಕರ್ತನ ಕಮನೀಯತೆಯನ್ನು ಕುರಿತು ಮಹಮ್ಮದನು ಏಕಾಗ್ರ ಚಿತ್ರದಿಂದ ಆಲೋಚಿಸತೊಡಗಿದನು ; ತನ್ನ ಮನಸ್ಸನ್ನು ಜ್ಞಾನ ದೀಪಿಕೆಯಿಂದ ಬೆಳಗಿಸಬೇಕೆಂದು ಅವನು ಭಗವಂತನಿಗೆ ಮೊರೆಯಿಟ್ಟನು; ದೇವ ದೇವನ ಧ್ಯಾನದಲ್ಲಿ ಮಗ್ನನಾಗಿ ಬಾಹ್ಯ ಸ್ಮರಣೆಯನ್ನು ಮರೆತನು. ಹೀಗೆ ಎಷ್ಟೋ ಕಾಲ ಕಳೆಯಿತು. - ಮಹಮ್ಮದನು ಧ್ಯಾನಾಸಕ್ತನಾಗಿರಲು, ಒಮ್ಮೆ ಗುಡುಗಿಗಿಂತಲೂ ಹೆಚ್ಚಿನ ಗಡಾವಣೆಯುಳ್ಳ ಧ್ವನಿಯೊಂದು ಅವನಿಗೆ ಕೇಳಿಸಿತು. ಮಹ ಮ್ಮದನು ಅದನ್ನು ಆಲಿಸಿ ಕೇಳಲು, ಆ ವಾಣಿಯು. ದೈವಿಕ ಸಂದೇಶ ಧೀರತೆಯಿಂದ ತುಂಬಿದ ಗಂಭೀರ ಧ್ವನಿಯಿಂದ, “ ಸಂಕೀರ್ತನ ಮಾಡು ಎಂದು ಹೇಳಿದ ಹಾಗಾ ಯತು. ಆಗ ಅರ್ಧ ರಾತ್ರಿಯ ನಿಶೀಢ ಸಮಯ ; ಎಲ್ಲಿ ನೋಡಿದರೂ ನಿಶ್ಯ ಮರು ಸಾರಿ ಅದೇ ಮಾತೇ ಅವನ ಕಿವಿಗೆ ಕೇಳಿಸಿತು. ಮಹ ಮ್ಮದನು ತನ್ನ ಮನಸ್ಸನ್ನು ತಾನೇ ನಂಬಲಾರದೆ ಕೊನೆಗೆ ಧೈರ್ಯ ತಂದುಕೊಂಡು, " ಏನನ್ನು ಸಂಕೀರ್ತನ ಮಾಡಲಿ ?” ಎಂದು ಕೇಳಿ ದನು. “ ನಿನ್ನ ಒಡೆಯನಾದ ಭಗವಂತನ ನಾಮ ಸಂಕೀರ್ತನ ಮಾಡಿ ಅವನ ಸಂದೇಶವನ್ನು ಎಲ್ಲರಿಗೂ ಸಾರು ಎಂಬ ನುಡಿಗಳು ಅವನಿಗೆ ಕೇಳಬಂದುವು. ಅನಿರ್ವಚನೀಯವಾದೊಂದು ಭವ್ಯ ದೃಶ್ಯವನ್ನೂ ಕಂಡು. ಗಡ ಗಡನೆ ನಡುಗುತ್ತ ಅವನು ಖದೀಜಳ ಬಳಿಗೆ ಓಡಿಬಂದನು. ಪತಿಯ ಅವಸ್ಥೆಯನ್ನು ನೋಡಿ ಆಕೆಯ ಭಾ೦ತಳಾದಳು. ಮಹಮ್ಮದನು, (( ಖದೀಜಾ, ಖದೀಜಾ! ನನಗೇನೋ ಸಂಭವಿಸಿದೆ, ನೋಡು, ನೋಡು, ಎಂದು ಹೇಳಿ ಮೂರ್ಛಿತನಾದನು. ಮಹಮ್ಮದನ ಈ