ಪುಟ:ಪೈಗಂಬರ ಮಹಮ್ಮದನು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III. ಭಗವಂದೇಶ ರೂಪಗಳನ್ನು ಕಲ್ಪಿಸಿ ಅಧಿಕಾರಿ ಭೇದದಿಂದ ಬಗೆ ಬಗೆಯಾಗಿ ಹೇಳು. ತಾರೆ): ಎಂಬಿವೇ ಮುಂತಾದ ಪ್ರತಿ ವಾಕ್ಯಗಳು ಆರ್ಯರ ದೇವತಾ ಭಾವನೆಯ ನಿಜ ಸ್ವರೂಪವನ್ನು ತಿಳಿಸುತ್ತವೆ. ಅರಬ್ಬಿಯವರು ಭಗವಂತನು ಒಬ್ಬನೇ ಎಂಬುದನ್ನು ನಂಬಿರದೆ ಹಲವು ದೈವಗಳಿರುವುವೆಂದೂವಿಗ್ರಹಗಳೇ ದೇವರುಗಳೆಂದೂ ವರುಷದಲ್ಲಿ ಒಂದೊಂದು ದಿನವೂ ಒಂದೊಂದು ವಿಗ್ರಹವನ್ನು ಪೂಜಿಸಬೇಕೆಂದೂ ನಂಬಿದ್ದರಷ್ಟೆ ! ನಕಾಷ್ಟೇ ವಿದ್ಯತೇ ದೇವೋ ನಪಾಷಾಣೇ ನ ಮೃಣ್ಮಯೇ | ಭಾವೇಹಿ ವಿದ್ಯತೇ ದೇವೋ ತಸ್ಮಾದ್ಯಾವೋಹಿ ಕಾರಣಂ || [ಮರದಲ್ಲಾಗಲಿ ಕಲ್ಲಿನಲ್ಲಾಗಲಿ ಮೃಣ್ಮಯ ವಿಗ್ರಹದಲ್ಲಾಗಲಿ ದೇವರಿಲ್ಲ; ದೇವರಿರುವದು ಭಾವದಲ್ಲಿ ಮಾತ್ರ. ಆದುದರಿಂದ, ಭಾವವೇ ಕಾರಣ.] ಎಂಬುದೇ ಮುಂತಾದ ಶ್ಲೋಕಗಳನ್ನು ನೋಡಿದರೂ ಸಹ, ನಮ್ಮ ಭಾರತೀಯ ವಿಗ್ರಹಾರಾಧನೆಗೂ ಅರಬ್ಬಿಯವರ ವಿಗ್ರಹಾರಾಧನೆಗೂ ಪರಸ್ಪರ ವ್ಯತ್ಯಾಸವು ಎಷ್ಟು ಮಟ್ಟಿನದೆಂಬುದು ಗೊತ್ತಾಗು ತದೆ. ಅ೦ತು ಮಹಮ್ಮದನು ವಿಗ್ರಹಾರಾಧನೆಯನ್ನು ಖಂಡಿಸಿದನು. ಇದು ಸಂಪ್ರದಾಯ ಶರಣರಿಗೆ ಸರಿಬೀಳಲಿಲ್ಲ. ಆಗಿನ ಕಾಲದಲ್ಲಿ ಬಹಳ ಪ್ರಬಲರಾಗಿದ್ದ ಕೊರೈಷ್ ಮನೆತನದವರು, ಹಿಂದೆ ಹೇಳಿದಂತೆ, ಅವನಿಗೆ ವಿರೋಧಿಗಳಾಗಿದ್ದು, ಅವರಲ್ಲಿ ಒಬ್ಬನೇ ಮಹಮ್ಮದನ ಶಿಷ್ಯ ನಾಗಿದ್ದನು. ಆದರೇನು ? ಆಗ ಮಕ್ಕಾ ನಗರದಲ್ಲಿ ದೊರೆಯೇ ಇಲ್ಲದೆ, ಬಲಿಷ್ಟರಾದವರು ಸಬಲಿಸಿ ದಾಂಧಲೆಮಾಡಿ, ದೊರೆತಷ್ಟು ದ್ರವವನ್ನು ವಿವಿಧ ವಿಧಗಳಲ್ಲಿ ದೋಚುತ್ತಿದ್ದರು. ಇಂಥವರಲ್ಲಿ ಕೋರೈಸ್ ಮನೆತನ ದವರೇ ಹೆಚ್ಚು ಬಲಿಷ್ಟರಾಗಿದ್ದು ಮಹಮ್ಮದನ ಮತ ಬೋಧೆಗೆ ಎದುರು. ಬಿದ್ದುದರಿಂದ ಅವನಿಗೆ ಬಲವದ್ವಿರೋಧವು ಪ್ರಾಪ್ತವಾಯಿತು. - ಪ್ರಬಲರಾದ ಕೊರೈಮ್ ಮನೆತನದವರು ಅವನ ಶತ್ರುಗಳಾದ ಬಳಿಕ ಅವನ ಸತ್ವ ಪರೀಕ್ಷೆಗೆ ಮೊದಲಾಯಿತೆಂದೇ ಹೇಳಬಹುದು. ಅವರು ಹಲವು ವಿಧಗಳಲ್ಲಿ ಅವನಿಗೆ ಕಿರುಕುಳವ. ಕಷ್ಟ ಪರಂಪರೆ ನ್ನುಂಟುಮಾಡುತ್ತಿದ್ದರು : ಮಹಮ್ಮದನು ಬೋಧೆ. ಮಾಡಲಾರಂಭಿಸಿದರೆ ಸಾಕು, ಶತ್ರು) ಪಕ್ಷದವರು.