________________
ಪೈಗಂಬರ ಮಹಮ್ಮದನು ಕಾಲದಿಂದ ನಡೆದುಬಂದಿರುವ ಮತವನ್ನು ನಾನು ಬಿಡಲಾರೆನು ; ಆದರೆ ನನ್ನ ದೇಹದಲ್ಲಿ ಉಸಿರಾಡುತ್ತಿರುವ ವರೆಗೂ ನಿನ್ನ ಮೇಲೆ ಯಾವ ನೊಬ್ಬನ ಕೈವಾಡದಂತೆ ನೋಡಿಕೊಳ್ಳುತ್ತೇನೆ ಎಂದು ಉತ್ತರ ಹೇಳಿದನು. ಬಳಿಕ ಅಬೂತಾಲಿಬನು ತನ್ನ ಮಗನನ್ನು ಕುರಿತು, 'ಅಲೀ ! ನೀನು ಯಾವ ಮತವನ್ನ ನುಸರಿಸುವೆ ? ಎಂದು ಕೇಳಲು, ಮಕ ಮೈದನು ಬೋಧಿಸುತ್ತಿದ್ದ ಮತವನ್ನು ತಾನು ಅಂಗೀಕರಿಸುವೆನೆಂದು ಅಲೀದು ಉತ್ತರ ಹೇಳಿದನು. ಆ ಮುದುಕನು ಅದಕ್ಕೆ, ಹಾಗೆಯೇ ಮಾಡು ಮಗೂ ! ಹಾಗೆಯೇ ಮಾಡು. ಸನ್ಮಾರ್ಗವನ್ನು ಬಿಟ್ಟು ಮಹಮ್ಮದನು ನಿನ್ನನ್ನು ಮತ್ತೆಲ್ಲಿಗೂ ಕರೆದೊಯ್ಯುವುದಿಲ್ಲ; ಅವಶ್ಯ ವಾಗಿ ಅವನನ್ನು ಅನುವರ್ತಿಸು ಎಂದು ಉತ್ತರ ಹೇಳಿ ಹೊರಟು ಹೋದನು. ಮುಂದೆ, ಜೈದನೆಂಬವನು ಮಹಮ್ಮದನ ಶಿಷ್ಯ ವರ್ಗಕ್ಕೆ ಸೇರಿದನು, ಆ ಬಳಿಕ ಕೊರೈಷಮನೆತನದ ಅಬ್ದುಲ್ಲಾ ಎಂಬಾತನು ಮಹಮ್ಮದನನ್ನು ಗುರುವಾಗಿ ಸ್ವೀಕರಿಸಿದನು. ಪ್ರಬಲವಾಗಿದ್ದ ಈ ಮನೆತನದವನು ಮಹಮ್ಮದನ ಶಿಷ್ಯನಾದುದನ್ನು ಕಂಡು ಇತರ ದೊಡ್ಡ ದೊಡ್ಡ ಮನೆತನಗಳಲ್ಲಿ ಸುಪ್ರಸಿದ್ದರಾಗಿದ್ದ ಐದು ಮಂದಿ ಅದೇ ಮಾರ್ಗ ವನ್ನನುಸರಿಸಿದರು. ಅಲ್ಲಿಂದ ಮುಂದೆ ಅನೇಕರು ಮಹಮ್ಮದನ ಅನು ಯಾಯಿಗಳಾಗುತ್ತ ಬಂದರು; ಬಡವರೂ ಬಲ್ಲಿದರೂ ಸಹ ಅವನ ಶಿಷ್ಯ ರಾದರು. ನಾವು ಮೊದಲೇ ತಿಳಿಸಿರುವಂತೆ, ಅರಬೀಸ್ಥಾನದಲ್ಲಿ ವಿಗ್ರಹಾ ರಾಧನೆಯು ನಡೆಯುತ್ತಿದ್ದುದು ಸರಿಯಷ್ಟೆ. ಅದನ್ನು ತಪ್ಪಿಸು ವುದಕ್ಕಾಗಿ ಮಹಮ್ಮದನು ಹೆಣಗತೊಡಗಿದನು. ಬಲವದ್ದಿರೋಧ ಈ ಸಂದರ್ಭದಲ್ಲಿ ನಾವು ಒಂದು ಅಂಶವನ್ನು ಜ್ಞಾಪಕ ದಲ್ಲಿಟ್ಟಿರಬೇಕು: ಅರಬ್ಬಿಯವರು ಹಿಂದೂಗಳಂತೆ ವಿಗ್ರಹಗಳು ಕೇವಲ ಲಾಂಛನ ಸ್ಥಾನವೆಂದು ನಂಬಿ ದೇವತಾ ರಾಧನೆ ಮಾಡುತ್ತಿರಲಿಲ್ಲ. ಏಕಮೇವಾದ್ವಿತೀಯಂ ಬ್ರಹ್ಮಾ (ಪರಮಾತ್ಮನಿರುವವನೊಬ್ಬನೇ, ಇಬ್ಬರಿಲ್ಲ); ಏಕಂ ಸದ್ವಿಪ್ರಾ ಬಹು ಧಾ ವದಂತಿ' (ಒಬ್ಬನೇ ಆಗಿರುವ ಪರಬ್ರಹ್ಮನಿಗೆ ವಿಪ್ರರು ವಿವಿಧ ನಾವು