ಪುಟ:ಪೈಗಂಬರ ಮಹಮ್ಮದನು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III. ಭಗವತ್ಸಂದೇಶ ಮೂಲ ಸ್ಥಾನದಲ್ಲಿ ಮಹಾ ನದಿಯು ಕೂಡ ಸಣ್ಣಗಿರುತ್ತದೆ. ಮತ ಸ್ಥಾಪಕರ ಅನುಯಾಯಿಗಳ ವಿಷಯವೂ ಹೀಗೆಯೇ, ಯಾವನು ಬೋಧಿಸಿದ ಇಸ್ಲಾಂ ಮತದಲ್ಲಿ ಇಂದು ಕೋಟ್ಯಂತರ ಶಿಷ್ಯ ವರ್ಗ ಜನ ಸಂಖ್ಯೆ ಇರುವುದೋ ಆ ಮಹಮ್ಮದನ ಬೋಧೆ ಯನ್ನು ಮೊಟ್ಟಮೊದಲು ನಂಬಿ ಅವನಲ್ಲಿ ಶಿಷ್ಯ ಯಾದವಳು ಅವನ ಪತ್ನಿಯಾದ ಖದೀಜಳೇ ! ಆಕೆಯು ತನ್ನ ಪತಿಯ ಮೂಲಕ ದೊರೆತ ದೈವಿಕ ಸಂದೇಶವನ್ನು ನಂಬಿ, ತಮ್ಮ ದೇಶದವರಂತೆ ತಾನೂ ಅಧುವರೆಗೆ ಆಚರಿಸುತ್ತಿದ್ದ ವಿಗ್ರಹಾರಾಧನೆಯನ್ನು ಪರಿತ್ಯಜಿಸಿ, ಹೊಸ ವಿಧದ ಆರಾಧನಾ ಕುಮವನ್ನನುಸರಿಸಿದಳು. ಇಷ್ಟೇ ಅಲ್ಲ; ಇತ ರರು ಮಹಮ್ಮದನನ್ನು ಅಪಹಾಸ್ಯ ಮಾಡಿ ದ್ವೇಷಿಸತೊಡಗಿದಾಗ, ಅವ ನಿಗೆ ಧೈರ್ಯ ಹೇಳಿ ಹುರಿದುಂಬಿಸಿದವಳೂ ಆಕೆಯೇ ಮಹಮ್ಮದನ ಎರಡನೆಯ ಶಿಷ್ಯನು ಅಲೀ. ಈ ಇಬ್ಬರು ಶಿಷ್ಯರೊಡನೆ ಮಹಮ್ಮದನು ಮರಳು ಕಾಡಿನ ನಿರ್ಜನ ಪ್ರದೇಶವನ್ನು ಸೇರಿ ಸರ್ವೆಶ್ವರನಾದ ಭಗ ವಂತನನ್ನು ಅವರೊಡನೆ ತಾನೂ ಧ್ಯಾನಿಸುತ್ತಿದ್ದನು. ಒಮ್ಮೆ ಅವರು ಮೂವರೂ ಭಗವಂತನನ್ನು ಹೀಗೆ ಧ್ಯಾನಿಸುತ್ತಿರುವಲ್ಲಿ, ಅಲೀಯ ತಂದೆಯು ಅಲ್ಲಿಗೆ ಬಂದು, ' ನಮ್ಮ ಸಂಪ್ರದಾಯ ವಿರುದ್ದವಾದ ಪದ್ಧತಿಯು ಇದೇನು ? ನೀನು ಬೋಧಿಸುತ್ತಿರುವ ಈ ಮತವು ಯಾವುದು ? ಎಂದು ಪ್ರಶ್ನೆ ಮಾಡಿದನು. ಆಗ ಮಹಮ್ಮದನು, * ಭಗವಂತನ ಸಂದೇಶವನ್ನ ನುಸರಿಸಿ ನಾನು ಈ ಮತವನ್ನು ಬೋಧಿಸು ತಿದ್ದೇನೆ ; ಅಜ್ಞಾನಾಂಧಕಾರದಲ್ಲಿ ತತ್ತರಿಸುತ್ತಿರುವವರನ್ನು ಜ್ಞಾನ ಜ್ಯೋತಿಯ ಬೆಳಕಿಗೆ ಕರೆದೊಯ್ಯುತ್ತೇನೆ. ಚಿಕ್ಕ ಪ್ಯಾ! ನೀನು ಬಹಳ ಯೋಗ್ಯನು; ನೀನು ಈ ಮತಕ್ಕೆ ಸೇರಿ ಇದನ್ನು ಹರಡಲನುಕೂಲಿಸು ವಂತೆ ನನಗೆ ಸಹಾಯಮಾಡಬೇಕೆಂದು ಬೇಡಿಕೊಳ್ಳುತ್ತೇನೆ ಎಂದನು. ಆಗ ಅಬೂತಾಲಿಬನ ಮನಸ್ಸಿನ ಒಳ ತೋಟಿಯನ್ನು ಕೇಳಬೇಕೆ ? ಇತ್ಯ, ಅಣ್ಣನ ಮಗನ ಸವಿ ನುಡಿಯ ಪ್ರಾರ್ಥನೆ ; ಅತ್ಯ, ಸಂಪ್ರದಾಯ ಬದ್ದ ವಾಗಿ ನಡೆದು ಬಂದಿದ್ದ ಗೊಡ್ಡು ನಂಬಿಕೆಯನ್ನು ಬಿಡಲಾರದೆ ಕಳವಳ. ಈ ವಿಧದ ಭಾವ ವೈವಿಧ್ಯದ ಸುಳಿಗೆ ಸಿಕ್ಕಿದ್ದ ಆತನು ಕೊನೆಗೆ, 'ಹಿರಿಯರ