ಪುಟ:ಪೈಗಂಬರ ಮಹಮ್ಮದನು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III. ಭಗವತ್ಸಂದೇಶ ಕೊನೆ ಕೊನೆಗೆ, ಮಹಮ್ಮದನ ಶಿಷ್ಯರು ಜೀವದಿಂದುಳಿದಿರುವ ಭರವಸೆಯೇ ತಪ್ಪಿ ಹೋಗುತ್ತ ಬರಲು, ಅವರೆಲ್ಲರನ್ನೂ ನೆರೆಯ ರಾಜ್ಯ ವಾದ ಅಬಿಸೀನಿಯಾ ದೇಶಕ್ಕೆ ವಲಸೆ ಹೋಗಿರೆಂದು ಸಲಹೆ ಹೇಳಿದನು. ಬಹು ಮಂದಿ ಶಿಷ್ಯರು ತಮ್ಮ ಗುರುವಿನ ಸಲಹೆಯನ್ನು ಕೇಳಿ, ಸ್ವಲ್ಪ ಕಾಲ ತಲೆಯನ್ನು ಮರೆಯಿಸಿಕೊಂಡಿದ್ದು ಮತ್ತೆ ಮಕ್ಕಾ ನಗರಕ್ಕೆ ಬರೋಣವೆಂದು ನಿರ್ಧರಿಸಿ, ಅಬಿಸಿನಿಯಾ ದೇಶಕ್ಕೆ ಹೊರಟು ಹೋದರು. ಅಲ್ಲಿಯ ದೊರೆಯು ಕೈಸ್ತ ಮತದವನಾದರೂ ಅನ್ಯ ಮತ ದ್ವೇಷಿಯಲ್ಲ. ಗುಣ ಪಕ್ಷಪಾತಿಯಾದ ಆ ದೊರೆಯು ಆಗಂತುಕರನ್ನು ಆದರದಿಂದ. ಬರಮಾಡಿಕೊಂಡು ಹಳೆಯ ಮತವನ್ನು ಅವರು ಬಿಟ್ಟುದಕ್ಕೇನು ಕಾರಣವೆಂದು ಕೇಳಿದನು. ಅಬೂತಾಲಿಬನ ಮಗನಾದ ಚಾಫರನು ದೊರೆಯೊಡನೆ, “ ಮಹಾ ಸ್ವಾಮೀ ! ನಾವು ಅಜ್ಞಾನಾಂಧಕಾರದಲ್ಲಿ ಬಿದ್ದು ಪಶುಗಳಂತೆ ಜೀವಿಸುತ್ತಿದ್ದೆವು ; ಸತ್ಯ ಮೃಗಗಳ ಮಾಂಸವನ್ನು ತಿನ್ನುತ್ತಿದ್ದೆವು; ಹೊಲಸು ನುಡಿಗಳನ್ನು ಆಡುತ್ತಿದ್ದೆವು ; ದಯೆಯ ದಾಕ್ಷಿಣ್ಯವೂ ಅತಿಥಿ ಸತ್ಕಾರವೂ ನಮ್ಮ ಮನಸ್ಸಿನಿಂದ ದೂರವಾ fದ್ದುವು; ಬಲಿಷ್ಟರು ಯಾರೋ ಅವರ ಕೈಯೇ ಮೇಲಾಗಿ, ಇತರ ರೆಲ್ಲರೂ ಅವರ ಅನುವರ್ತಿಗಳಾಗಿರಬೇಕೆಂಬುದು ಹೊರತು ಮತ್ತೆ ಯಾವ ನಿಯಮ ನಿಬಂಧನೆಗಳೂ ನಮಗೆ ತಿಳಿದಿರಲಿಲ್ಲ. ಇಂತಹ ದುಸ್ಥಿತಿ ಯಿಂದ ನಮ್ಮನ್ನು ಪಾರು ಮಾಡಿ ಉದ್ದರಿಸಲು ಭಗವಂತನು ಒಬ್ಬ ಮಹಾ ಪುರುಷನನ್ನು ನನಗೆ ಅನುಗ್ರಹಿಸಿದನು. ಆತನು ಸತ್ಯವಾದಿ, ಪ್ರಾಮಾಣಿಕನು, ಪರಿಶುದ್ದ ಹೃದಯನು. ಭಗವಂತನು ಒಬ್ಬನೇ ಹೊರತು ಇಬ್ಬರಿಲ್ಲ ಎಂಬ ಘನವಾದ ತತ್ತ್ವವನ್ನು ಆತನು ನಮಗೆ ಬೋಧಿಸಿದನು. ವರುಷದಲ್ಲಿ ದಿನಕ್ಕೊಬ್ಬ ದೇವರೆಂಬ ನಂಬಿಕೆಯಿಂದ ನಾವು ಪೂಜಿಸುತ್ತಿದ್ದ ಮುನ್ನೂರರವತ್ತು, ವಿಗ್ರಹಗಳ ಆರಾಧನೆಯು ತಪ್ಪು ನಡೆವಳಿಕೆಯೆಂಬುದನ್ನು ಆತನು , ನಮಗೆ ಮನದಟ್ಟು ಮಾಡಿ. ಕೊಟ್ಟನು. ನಮ್ಮ ನೆರೆಹೊರೆಯವರ ಹಕ್ಕು ಬಾಧ್ಯತೆಗಳನ್ನು ಮನ್ನಿಸಿ, ನಾವೆಲ್ಲರೂ ಸತ್ಯ ಭಾಷಿಗಳಾಗಿಯ ಕರುಣ ಹೃದಯರಾಗಿಯೂ ಇರ ಬೇಕೆಂದು ಆತನು ನಮಗೆ ವಿವೇಕವನ್ನು ಹೇಳಿದನು. ದುರಾಚಾರಗಳಿಗೆ