ಪುಟ:ಪೈಗಂಬರ ಮಹಮ್ಮದನು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ನಾಲ್ಕನೆಯ ಅಧ್ಯಾಯ ಮಕ್ಕಾ ನಗರ ಪರಿತ್ಯಾಗ ಅಬೂತಾಲಿಬನ ಮರಣಾನಂತರ ಮಹಮ್ಮದನಿಗೆ ಶತ್ರುಗಳ ಕಾಟವ್ರ ಇಮ್ಮಡಿಯಾಯಿತು. ಮಹಮ್ಮದನ ಪಕ್ಷಪಾತಿಯ ಸದ್ಯುಣ ಮಂಡಿತನೂ ಆಗಿದ್ದ ಆತನು ಜೀವಂತನಾ ಶತ್ರುಗಳ ಕಾಟ ಬರುವ ವರೆಗೂ ಅವರ ವಿಗಡ ತನಕ್ಕೆ ಸ್ವಲ್ಪ ತಡೆ ಯಿದ್ದಿತು. ಅವನು ಮೃತನಾದ ಬಳಿಕ ಅವರಿಗೆ ನಿರಾತಂಕವಾಯಿತು. ಮಹಮ್ಮದನು ಬೋಧಿಸುತ್ತಿದ್ದ ಇಸ್ಲಾಂ ಮತದ ಗುರುತೇ ಮಕ್ಕಾ ನಗರದಲ್ಲಿಲ್ಲದಂತೆ ಮಾಡಲು ತಮಗೆ ಒಳ್ಳೆಯ ಸಮಯವು ದೊರೆತಿತೆಂದು ಬಗೆದು ಅವರೆಲ್ಲರೂ ತಮ್ಮ ಘಾತುಕತನಕ್ಕೆ ಪ್ರಾರಂಭಿಸಿದರು. ಈ ಬಗೆಯ ದುಸ್ಥಿತಿಯೊದಗಿದುದಕ್ಕಾಗಿ ಮಹ ಮದನಿಗೆ ಬಹಳ ವ್ಯಥೆಯುಂಟಾದರೂ ಅವನು ನಿರಾಶ ಹೃದಯನಾಗದೆ, ಇದ್ದುದರಲ್ಲಿ ಧೈರ್ಯತಂದುಕೊಂಡು ಭಗವತೇವೆಗೆ ಬದ್ಧ ಕಂಕಣನಾಗಿ ನಿಂತನು. ವಿಘ್ನಗಳು ಒದಗಿದಷ್ಟೂ ಅವುಗಳನ್ನು ಅಡಗುಮೆಟ್ಟಿ ಕಾರ್ಯ ಸಾಧನೆಗಾಗಿ ಉತ್ಸಾಹದಿಂದ ನೆಟ್ಟಗೆ ನಿಲ್ಲುವುದೇ ಮಹಾತ್ಮರ ಲಕ್ಷಣ. ಮಕ್ಕಾ ನಗರದಲ್ಲಂತು ಮಹಮ್ಮದನ ಬೋಧನೆಯನ್ನು ಕೇಳುವ ಹೊಸಬರೇ ಇಲ್ಲದಂತಾಯಿತು ; ತಾಯೆಫ್ ನಗರದವ ರಾದರೂ ತನ್ನ ಸಂದೇಶವನ್ನು ಲಾಲಿಸಬಹುದೆಂದಾಲೋಚಿಸಿ, ಅವನು ತನ್ನ ಆಪ್ತ ಸೇವಕನಾದ ಜೈದನೊಡನೆ ಅಲ್ಲಿಗೆ ಹೋಗಿ, ಆ ನಾಗರಿಕರಿಗೆ ತಮ್ಮ ದುರಾಚಾರಗಳನ್ನು ಬಿಟ್ಟು ನೂತನ ವಿಧದಲ್ಲಿ ಭಗವಂತನನ್ನು ಆರಾಧಿಸಬೇಕೆಂದು ಉಪದೇಶಿಸಿದನು. ಅವರೆಲ್ಲರೂ ರೇಗಿ, ತಮ್ಮ ಸಂಪ್ರದಾಯಗಳನ್ನು ಬಿಡುವಂತೆ ಬೋಧಿಸಲು ಮಹಮ್ಮದನಿಗೆ ಅಧಿ ಕಾರವಿಲ್ಲವೆಂದು ಹೇಳಿ, ಅವನನ್ನು ನಗರದಿಂದಾಚೆಗೆ ಓಡಿಸಿದರು. ತುಂಟರು ಗುಂಪು ಸೇರಿ ಅವನನ್ನು ಮದಲಿಸಿ ಹಾಸ್ಯ ಮಾಡಿ ಗದರಿ ಸುತ್ತ ಕಲ್ಲುಗಳನ್ನು ಬೀರಿ ಓಡಿಸಿಕೊಂಡು ಹೋದರು. ಅಷ್ಟರಲ್ಲಿ ಕತ್ತಲೆಯಾಗಲು, ಅವರೆಲ್ಲರೂ ತಮ್ಮ ಊರಿಗೆ ಹಿಂದಿರುಗಿದರು. ಮಹ