ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

IV, ಮಕ್ಕಾ ನಗರ ಸರಿತಾಗ ಮದನಿಗೆ ಅವರೆಸೆದ ಕಲ್ಲುಗಳು ತಗುಲಿ ಗಾಯಗಳಾಗಿ ರಕ್ತ ಹರಿ ಯುತ್ತಿದ್ದಿತು. ಓಡಿಯೋ ಡಿ ಆಯಾಸದಿಂದ ಅವನು ಬಳಲಿ ಹೋಗಿದ್ದನು. ಕಲ್ಲುಗಳನ್ನೂ ಮುಳ್ಳುಗಳನ್ನೂ ತುಳಿದು ತುಳಿದು ಮುಂದಕ್ಕೆ ಒಂದು ಹಜ್ಜೆಯನ್ನಿಡುವದೂ ಅವನಿಗೆ ಅಸಾಧ್ಯವಾಯಿತು. ಬಾಯಾರಿಕೆಯಿಂದ ಅವನ ನಾಲಗೆಯು ಒಣಗಿಹೋಗಿದ್ದಿತು. ಸಮೀಪದಲ್ಲಿದ್ದ ಐರ್ಜೂರದ ಮರಗಳ ಕೆಳಗೆ ಕುಳಿತು, ದುಃಖ ಕಾತರನಾಗಿದ್ದ ಮಹಮ್ಮದನು ಭಗವಂತನನ್ನುದ್ದೇಶಿಸಿ, “ ದೇವ! ನಾನು ದೈನ್ಯ ಭಾವದಿಂದ ನಿನ್ನ ಮರೆ ಹೊಕ್ಕು ನನ್ನ ಸಂಕಟವನ್ನು ನಿನಗೆ ಹೇಳಿಕೊಳ್ಳುತ್ತಿದ್ದೇನೆ. ನನ್ನ ಆಶೆಯ ಉತ್ಸಾಹವೂ ಮಹತ್ತರವಾಗಿದ್ದರೂ ಯಾರೂ ನನ್ನನ್ನು ಲಕ್ಷಿಸುವಂತಿಲ್ಲ. ಎಲೈ ಕರುಣಾಳುವೆ ! ಎಲೈ ಅಶಕ್ತ ಪೋಷಕನೆ ! ನನ್ನ ನ್ನು ಕೈಬಿಡಬೇಡ ; ಪರಕೀಯರಾಗಲಿ ಶತ್ರುಗಳಾಗಲಿ ನನ್ನ ನ್ನು ಘಾಸಿಪಡಿಸಲು ಅವಕಾಶ ಕೊಡಬೇಡ. ನಿನ್ನಲ್ಲಿ ನಾನು ಅಪರಾಧಿ ಯಾಗದಿದ್ದರೆ ಸಾಕು ; ಆಗ ನಾನು ಕ್ಷೇಮವಾಗಿಯೇ ಇರಬಹುದು. ನೀನೇ ನನಗೆ ದಿಕ್ಕು, ಅಜ್ಞಾನಾಂಧಕಾರವನ್ನು ಹೋಗಲಾಡಿಸುವ ನಿನ್ನ ಜ್ಞಾನ ಪ್ರಭೆಯಿಂದಲೇ ನನಗೆ ಸನ್ಮಾರ್ಗವ ಗೋಚರಿಸಬೇಕು. ನಿನ್ನ ದಯೆಯಿಂದಲೇ ಇಹಲೋಕದಲ್ಲಿಯ ಪರಲೋಕದಲ್ಲಿಯ ನನಗೆ ಸುಖ ಶಾಂತಿಗಳು ಲಭಿಸಬೇಕು. ಪ್ರಭವೇ ! ನಿನ್ನ ಕೃಪಾ ಕಟಾಕ್ಷದಿಂದ ನನ್ನನ್ನು ನೋಡಿ, ನನ್ನ ಕಷ್ಟಗಳನ್ನು ಕೊನೆಗಾಣಿಸು. ನೀನು ಬಿಟ್ಟು ನನಗೆ ಮತ್ತಾರೂ ಸಹಾಯಕರಿಲ್ಲ. ದೇವ ! ರಕ್ಷಿಸು, ರಕ್ಷಿಸು, ನನ್ನನ್ನು ರಕ್ಷಿಸು' ಎಂದು ಮೊರೆಯಿಟ್ಟನು. - ಮಹಮ್ಮದನು ಮತ್ತೆ ಮಕ್ಕಾ ನಗರಕ್ಕೆ ಹೋಗಿ ಮೊದಲಿ ನಂತೆಯೇ ಪರಿತಾಪಕ್ಕೊಳಗಾಗಿ ಎಲ್ಲ ವಿಧದ ಕಷ್ಟಗಳನ್ನೂ ಅನುಭವಿಸಿ ದನು. ಅವನು ಮಕ್ಕಾ ನಗರದ ಜನರೊಡನೆ ಸೇರುವುದನ್ನೇ ಬಿಟ್ಟು ಪರ ಸ್ಥಳದಿಂದ ಅಲ್ಲಿಗೆ ಬಂದವರಿಗೆ ಆಗಾಗ ಬೋಧನೆ ಮಾಡುತ್ತ, ಅವರಿಗಾದರೂ ತನ್ನ ಮತದಲ್ಲಿ ಆದರ ಹುಟ್ಟಿ, ಅವರ ಮೂಲಕ ಇತರರು ತನ್ನ ಹೊಸ ಮತದ ತತ್ವಗಳನ್ನು ತಿಳಿಯಬಹುದೆಂದೆಣಿಸಿದನು. ಶತ್ರುಗಳ ಬಾಧೆಯ ಮಧ್ಯದಲ್ಲಿಯೂ ಅವನು ಉತ್ಸಾಹ ಹೀನನಾಗಿ