ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಕಳೆಗುಂದಲಿಲ್ಲ. ಕ್ರಿಸ್ತ ಶಕ ೬೨೦ನೆಯ ಸಂವತ್ಸರದಲ್ಲಿ ಯಾತ್ರಿ" ನಗರದಿಂದ ಅಲ್ಲಿಗೆ ಬಂದಿದ್ದ ಆರು ಮಂದಿ ಅವನ ಉಪದೇಶವನ್ನು ಸ್ವೀಕರಿಸಿ ಮಹಮ್ಮದೀಯರಾದರು. ಇದನ್ನು ಕಂಡು ಮಹಮ್ಮದನ ಮನಸ್ಸಿಗೆ ಬಹಳ ಉತ್ಸಾಹದೋರಿ, ದೈವಾಜ್ಞೆಯಿಂದ ತಾನು ಹಿಡಿದಿದ್ದ ಕಾರ್ಯವು ಪರಿಣಾವದಲ್ಲಿ ಸಫಲವಾಗದಿರದೆಂಬ ಅಚಲವಾದ ಭರವಸೆಯುಂಟಾಯಿತು. ಆದರೆ, ಆಗಿನ ಸ್ಥಿತಿಯಲ್ಲಿ ಅದು ಕನ್ನಡಿ ಯೊಳಗಿನ ಗಂಟಿನಂತಿದ್ದಿತು. ಮೃತ್ಯುವಿನ ದವಡೆಯಲ್ಲಿದ್ದಂತಿದ್ದ ಮನುಷ್ಯನು ಎಂದಿಗಾದರೂ ತನ್ನ ಕಾರ್ಯವು ಸಫಲವಾದೀತೆಂಬ ನಿರೀಕ್ಷಣೆಯನ್ನೂ , ಭಗವಂತನು ತನ್ನ ನ್ನು ಕೈಬಿಡುವುದಿಲ್ಲವೆಂಬ ನಂಬಿಕೆಯನ್ನೂ ಇಟ್ಟುಕೊಂಡು ಕಾರ್ಯ ಪಟುವಾಗಿ ಕಾಲ ಹರಣ ಮಾಡುವುದೆಂದರೆ ಸಾಮಾನ್ಯವೆ ? ಅಂತಹ ವಿಷಮ ಸಮಯದಲ್ಲಿಯ ಮಹಮ್ಮದನು, “ ನಾನು ಒಂದು ವೇಳೆ ಹೆಚ್ಚು ಕಾಲ ಬದುಕಿರ ದಿದ್ದರೂ ನಾನು ಹರಡಿದ ಸತ್ಯ ವಾಕ್ಯಗಳು ಸುಳ್ಳನ್ನು ಬಡಿದೋಡಿಸಿ ಅಜ್ಞಾನಾಂಧಕಾರವನ್ನು ತೊಲಗಿಸುವ ಜೀವಜ್ಯೋತಿಗಳಾಗಿ ನಿಲ್ಲುವ ದಿನವು ಬಂದೇ ಬರುತ್ತದೆ' ಎಂದು ಖುರಾನಿನಲ್ಲಿ ಬರೆದಿಟ್ಟನು. ಶತ್ರುಗಳ ಬಾಧೆಯಿಂದ ಸಂತನಾಗಿ ಜೀವಕ್ಕೆ ಹೊಣೆಯನ್ನು ಬೇಡು ತಿರುವ ಸ್ಥಿತಿಯಲ್ಲಿದ್ದ ಮನುಷ್ಯನು ಹೀಗೆ ಬರೆದಿಡುವುದೆಂದರೆ ಅದ್ಭುತ ಸುಸಂಗವಲ್ಲವೆ ? ಶತ್ರುಗಳನ್ನು ಮತ್ತಷ್ಟು ರೋಷ ಭೀಷಣರನ್ನಾಗಿ ಮಾಡುವ ಸನ್ನಿ ವೇಶವು ಕ್ರಿಸ್ತ ಶಕ ೬೨೨ನೆಯ ಸಂವತ್ಸರದಲ್ಲೊದಗಿತು. ಎರಡು ವರುಷಗಳ ಹಿಂದೆ ಮಹಮ್ಮದೀಯ ಮತವನ್ನು ಸ್ವೀಕರಿಸಿದ ಮತಾಭಿ ಮಾನಿಗಳಾದ ಆರು ಮಂದಿಯ ಬೋಧನೆಯಿಂದ ಮೂರನೆಯ ವರುಷ ಯಾತ್ರಿಬ್ ನಗರದಿಂದ ಮತ್ತೆ ಆರು ಮಂದಿ ಮಹಮ್ಮದನ ಬಳಿಗೆ ಬಂದು ಅವನ ಶಿಷ್ಯರಾದರು. ಈ ಹನ್ನೆರಡು ಮಂದಿಯ ತಮ್ಮ ಸದ್ಗುರುವಿನ ಮಾಹಾತ್ಮಿಯನ್ನು ಸಾರುತ್ತ ತವರಿಗೆ ಹಿಂದಿರುಗಿದರು. ಒಂದು ವರುಷ ಕಳೆಯುವ ವೇಳೆಗೆ ಅವರು ಎಪ್ಪತ್ತೈದು ಮಂದಿಯೊಡನೆ ಮತ್ತೆ ಮಕ್ಕಾ ನಗರಕ್ಕೆ ಬಂದು, ಯಾವ ಗಿರಿ ವನ ಮಧ್ಯದಲ್ಲಿ ಆ ಹನ್ನೆರಡು