________________
iv. ಮಕ್ಕಾ ನಗರ ಪರಿತ್ಯಾಗ ಮಂದಿಯ ಹಿಂದೆ ಇಸ್ಲಾಂ ಮತವನ್ನು ಸ್ವೀಕರಿಸಿದ್ದರೋ, ಅದೇ ಗಿರಿ ವನ ಮಧ್ಯದಲ್ಲಿ ಅಕಾಬಾ ಪರ್ವತದ ತಪ್ಪಲಿನಲ್ಲಿ ಸಭೆ ಸೇರಿದರು. ಮಹಮ್ಮದನ ಸವಿಾಪ ಬಂಧುವಾದ ಅಬ್ಬಾಸ್ ಎಂಬಾತನು ಅಂದಿನ ಸಭಾಧ್ಯಕ್ಷನಾದನು. ವಿನೀತ ಭಾವದಿಂದ ಕೂಡಿದ ಮಹಮ್ಮದನು ಅಂದು ಪ್ರೇಕ್ಷಕನಾಗಿ ಸಭೆಯಲ್ಲಿ ಸುಮ್ಮನೆ ಕುಳಿತಿದ್ದನು. ಆಗಂತುಕ ರೆಲ್ಲರೂ ಇಸ್ಲಾಂ ಮತಕ್ಕೆ ಸೇರಬೇಕೆಂಬುದೇ ಅಂದಿನ ಸಭೆಯ ಉದ್ದೇಶ. ಆದರೆ, ಸಭಾಧ್ಯಕ್ಷನು ಆ ಮತಕ್ಕೆ ಸೇರಿದವನಲ್ಲದಿದ್ದರೂ, ಇಸ್ಲಾಂ ಮತವು ಅಭಿವೃದ್ಧಿಯಾಗಬೇಕೆಂಬುದು ವಿಶಾಲ ಮತಿಯಾದ ಆತನ ಹಾರೈಕೆ. ಇಸ್ಲಾಂ ಮತಕ್ಕೆ ಸೇರಿ ಮಹಮ್ಮದನನ್ನು ಯಾತ್ರಿಮ್ ನಗರಕ್ಕೆ ಕರೆ ದೊಯ್ಯುವ ಸಂಕಲ್ಪದಿಂದ ಮಕ್ಕಾ ನಗರಕ್ಕೆ ಬಂದಿದ್ದ ಆಗಂತುಕರೆಲ್ಲರೂ ಉತ್ಸಾಹದಿಂದ ಸಭಾಧ್ಯಕ್ಷನ ಭಾಷಣವನ್ನು ಆಲಿಸಿ ಕೇಳಿದರು. ಇಸ್ಲಾಂ ಮತವನ್ನವಲಂಬಿಸಿ ಮಹಮ್ಮದನನ್ನು ಯಾತ್ರಿಬ್ ನಗರಕ್ಕೆ ಕರೆದುಕೊಂಡು ಹೋಗುವುದರ ದೆಸೆಯಿಂದ ಅವರೆಲ್ಲರಿಗೂ ಕಷ್ಟ ನಷ್ಟ ಗಳುಂಟಾಗಿ ಅಪಾಯವು ಒದಗಬಹುದೆಂದು ಆತನು ಎಚ್ಚರಿಕೆ ಹೇಳಿ ದನು. ಅಭಿಮಾನಶಾಲಿಗಳಾದ ಅವರೆಲ್ಲರೂ ಮುಕ್ತ ಕಂಠದಿಂದ ತಾವು ಸಾಧಕ ಬಾಧಕಗಳೆಲ್ಲವನ್ನೂ ಸಮಗ್ರವಾಗಿ ಪರ್ಯಾಲೋಚಿಸಿರುವೆ ವೆಂದೂ, ಎಂತಹ ವಿಪತ್ತು ಬಂದೊದಗಿದರೂ ಅದನ್ನು ಎದುರಿಸಲು ಸಿದ್ದವಾಗಿರುವೆವೆಂದೂ ತಿಳಿಸಿದರು. ಇಷ್ಟಾದರೂ ಮಹಮ್ಮದನು ಮೌನವಾಗಿ ಕುಳಿತಿದ್ದುದನ್ನು ಕಂಡು ಅವರಿಗೆ ತಾಳ್ಮೆ ತಪ್ಪಿ, ' ಗುರು ದೇವ ! ಮೌನ ಮುದ್ರೆಯನ್ನೊಡೆದು ವಾಕ್ಯ ಸುಧೆಯನ್ನ ನುಗ್ರಹಿಸು. ನಿನಗಾಗಿಯೇ ನೀನು ನಂಬಿರುವ ಭಗವಂತನಿಗಾಗಿಯೂ ನಾವು ಯಾವ ವಿಧದ ಪ್ರತಿಜ್ಞೆ ಮಾಡುವುದಕ್ಕೂ ಸಿದ್ಧರಾಗಿದ್ದೇವೆ. ನಿನ್ನಂತೆಯೇ ನಾವೂ ಭಗವಂತನನ್ನಾರಾಧಿಸಿ ಧನ್ಯರಾಗುತ್ತೇವೆ' ಎಂದು ಹೇಳಿದರು. ಮಹಮ್ಮದನು ಖುರಾನಿನ ವಾಕ್ಯಗಳನ್ನು ವಿವರಿಸಿ ಹೇಳಿ, ಪ್ರಪಂಚಕ್ಕೆ ಏಕಮಾತ್ರಾವಲಂಬನವಾಗಿ ಅದ್ವಿತೀಯನಾಗಿರುವ ಭಗವಂತನನ್ನು ಆರಾಧಿಸಿ, ಎಲ್ಲರೂ ಧನ್ಯರಾಗಬೇಕೆಂಬುದೇ ಇಸ್ಲಾಂ ಮತದ ತಮ್ಮ ವೆಂದು ಬೋಧಿಸಿದನು. ಅವಕ್ಕನುಗುಣವಾಗಿ ತಾವೆಲ್ಲರೂ ನಡೆಯುವೆ