________________
ಪೈಗಂಬರ ಮಹಮ್ಮದನು ವೆಂದೂ, ಮಹಮ್ಮದನ ಆಜ್ಞೆಗಳೆಲ್ಲವನ್ನೂ ತಾವು ನೆರವೇರಿಸುವೆ ವೆಂದೂ, ಆತನನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಪ್ರಯತ್ನದಲ್ಲಿ ತಮ್ಮ ಪ್ರಾಣವನ್ನಾದರೂ ಅರ್ಪಿಸುವೆವೆಂದೂ ಅವರೆಲ್ಲರೂ ಪ್ರತಿಜ್ಞೆ ಮಾಡಿದರು. ಆದರೂ ಅವರಿಗೆ ಎರಡು ಸಂಶಯಗಳು ಬಂದುವು: ಇಸ್ಲಾಂ ಮತಕ್ಕಾಗಿ ಆವಶ್ಯಕತೆಯೊದಗಿದಾಗ ತಮ್ಮ ಪ್ರಾಣವನ್ನೇ ಸಮರ್ಪಿಸಿದರೆ ತಮಗೆ ಬರುವ ಪ್ರತಿಫಲವೇನು ? ಎಂಬುದೇ ಮೊದಲನೆ ಯದು. ಪರಲೋಕದಲ್ಲಿ ಲಭಿಸುವ ಸೌಖ್ಯವೇ ಅದರ ಪ್ರತಿಫಲವೆಂದು ಮಹಮ್ಮದನು ಉತ್ತರ ಹೇಳಿ ಅವರನ್ನು ಸಮಾಧಾನಪಡಿಸಿದನು. ಉಚ್ಚ ದಣೆಯೊದಗಿದಾಗ ಮಹಮ್ಮದನು ತಮ್ಮ ಉಪಕಾರವನ್ನು ಮರೆತು ತನ್ನ ಕಡೆಯವರನ್ನು ಸೇರಿಕೊಳ್ಳಲು ಮತ್ತೆ ಮಕ್ಕಾ ನಗರಕ್ಕೆ ಹೋಗ ಬಹುದಲ್ಲವೆ ? ಎಂಬುದು ಎರಡನೆಯ ಸಂಶಯ. ಇದಕ್ಕೆ ಮಹಮ್ಮ ದನು, . ಇಲ್ಲ, ನಾನೆಂದಿಗೂ ಹಾಗೆ ಮಾಡೆನು. ನೀವೆಲ್ಲರೂ ನನಗೆ ಆಪ್ತರಾದ ಅನುಬಂಧಿಗಳು. ನಿಮ್ಮ ಪ್ರಾಣವೇ ನನ್ನ ಪ್ರಾಣ, ನನ್ನ ಪ್ರಾಣವೇ ನಿಮ್ಮ ಪ್ರಾಣ ಎಂದು ಹೇಳಿ ಆ ಸಂಶಯವನ್ನೂ ನಿವಾರಣೆ ಮಾಡಿದನು. ಅವರೆಲ್ಲರೂ ಮಹಮ್ಮದನ ಕೈಮೇಲೆ ಕೈಹಾಕಿ ತಮ್ಮ ಪ್ರತಿಜ್ಞೆಯನ್ನು ನೆರವೇರಿಸುವುದಾಗಿ ಭಾಷೆಯಿತ್ತು ತವರಿಗೆ ಬರೆ ಬೇಕೆಂದು ಮಹಮ್ಮದನನ್ನು ಪ್ರಾರ್ಥಿಸಿ, ಎಲ್ಲರೂ ಹೊರಡಲನುವಾ ದರು. ಆದರೆ ಕುಸುಮ ಮಧ್ಯದಲ್ಲಿ ಕೀಟವಿದ್ದುದನ್ನು ಅವರು ಯಾರೂ ನೋಡಲಿಲ್ಲ : ಮಹಮ್ಮದನ ಶತ್ರು ಪಕ್ಷಕ್ಕೆ ಸೇರಿದ ಗೂಢಚಾರ ನೊಬ್ಬನು ತಮ್ಮ ಮಧ್ಯದಲ್ಲಿ ಸೇರಿಕೊಂಡಿದ್ದು ಮರೆಯಾದುದು ಅವರ ತ್ತೊಬ್ಬರಿಗೂ ಗೋಚರವಾಗಲಿಲ್ಲ. ಸಭೆಯು ಸಮರ್ಪಕವಾಗಿ ಜರುಗಿದುದನ್ನು ಕೇಳಿ ಮಹಮ್ಮದನ ಶತ್ರುಗಳೆಲ್ಲರೂ ರೋಷದಿಂದ ಉನ್ಮತ್ತರಾದರು. ತಾಯಿಬೇರನ್ನು - ಕಡಿದುಹಾಕಿದರೆ ಮರವು ತನಗೆ ತಾನೇ ಒಣಗಿ ವಧೆಯ ಪ್ರಯತ್ನ ಹೋಗುವುದೆಂದು ಭಾವಿಸಿ, ಕರ್ತವ್ಯವನ್ನು ಯೋಚಿ ಸುವುದಕ್ಕಾಗಿ ಅವರೂ ಒಂದು ಸಭೆಯನ್ನು ಸೇರಿ ಸಿದರು. ಮಹಮ್ಮದನನ್ನು ಮಕ್ಕಾ ನಗರದಿಂದ ಓಡಿಸಿಬಿಡುವುದು